ಸಿಬ್ಬಂದಿಯನ್ನು ಸಜ್ಜುಗೊಳಿಸುವ ಕಾರ್ಖಾನೆ ಈಗ “ನಮ್ಮ ಮೆಟ್ರೋ’! ಹೌದು, ನಮ್ಮ ಮೆಟ್ರೋ ಮೊದಲ ಹಂತ ಪೂರ್ಣಗೊಂಡು ಈಗಷ್ಟೇ ಒಂದು ವರ್ಷ ಆಗಿದೆ. ಆದರೆ, ಈ ಅಲ್ಪಾವಧಿಯಲ್ಲಿ ದೇಶದ ಪ್ರಮುಖ ಮೆಟ್ರೋ ಯೋಜನೆಗಳ ಸಿಬ್ಬಂದಿಗೆ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ತರಬೇತಿ ಸಂಸ್ಥೆಯೇ ತರಬೇತಿ ನೀಡುತ್ತಿದ್ದು, ಈ ಮೂಲಕ ದೇಶದಲ್ಲಿ ನಡೆಯುತ್ತಿರುವ ಬಹುತೇಕ ಎಲ್ಲ ಮೆಟ್ರೋ ಯೋಜನೆಗಳ ಸಿಬ್ಬಂದಿಗೆ ನಮ್ಮ ಮೆಟ್ರೋನೇ ಮೇಷ್ಟ್ರು ಆಗಿದೆ.
Advertisement
ಇದಕ್ಕೆ ಪ್ರಮುಖ ಕಾರಣ, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ತರಬೇತಿ ಹಾಗೂ “ಥರ್ಡ್ ರೈಲ್’ (ಹಳಿ ಪಕ್ಕದಿಂದಲೇ ವಿದ್ಯುತ್ ಸಂಪರ್ಕ) ವ್ಯವಸ್ಥೆ ಹೊಂದಿರುವುದು ಎನ್ನಲಾಗಿದೆ. ಅಹಮದಾಬಾದ್‌ನ ಮೆಗಾ ಮೆಟ್ರೋ, ಕೊಲ್ಕತ್ತ ಸೇರಿದಂತೆ ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಹೈದರಾಬಾದ್, ಕೊಚ್ಚಿ, ಚೆನ್ನೈ ಮೆಟ್ರೋ ಯೋಜನೆಗಳ ಸಿಬ್ಬಂದಿಗೆ ಬೈಯಪ್ಪನಹಳ್ಳಿಯಲ್ಲಿರುವ “ಮೆಟ್ರೋ ಸ್ಕೂಲ್’ನಲ್ಲಿ ಪಾಠಹೇಳಿಕೊಡಲಾಗುತ್ತಿದೆ. ದೇಶದಲ್ಲಿ ಮೊದಲ ಬಾರಿಗೆ ಮೆಟ್ರೋ ರೈಲು ಬಂದಿದ್ದು ದೇಶದ ರಾಜಧಾನಿ ದೆಹಲಿಯಲ್ಲಿ. ಆದರೆ, ಅಲ್ಲಿ “ಓವರ್ ಹೆಡ್’ ಅಂದರೆ ರೈಲಿನ ಮೇಲಿನ ತುದಿಯಿಂದ ವಿದ್ಯುತ್ ಸಂಪರ್ಕ
ಕಲ್ಪಿಸಲಾಗಿದೆ. ಥರ್ಡ್ ರೈಲ್ ವ್ಯವಸ್ಥೆ ಮೊದಲ ಬಾರಿಗೆ ಅಳವಡಿಕೆಯಾಗಿದ್ದು ಬೆಂಗಳೂರು ಮೆಟ್ರೋ
ಯೋಜನೆಯಲ್ಲಿ. ಈಗ ಚಾಲ್ತಿಯಲ್ಲಿರುವ ಬಯುತೇಕ ಮೆಟ್ರೋ ಯೋಜನೆಗಳು ಈ ಮುಂದುವರಿದ ವ್ಯವಸ್ಥೆಯನ್ನು ಅನುಸರಿಸುತ್ತಿವೆ.
Related Articles
ಏನು?’ ಎಂಬ ಮೊದಲ ಪಾಠದಿಂದ ಹಿಡಿದು ಎಲ್ಲವನ್ನೂ ಹೇಳಿಕೊಡಲಾಗುವುದು. ತರಬೇತಿ ಪಡೆಯುವವರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಶೆಟಲ್, ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಕ್ರೀಡೆಗಳು, ವಾರಕ್ಕೊಮ್ಮೆ ಪರೀಕ್ಷೆ ಇರುತ್ತದೆ. ಮತ್ತೂಂದೆಡೆ ದೆಹಲಿ ಮೆಟ್ರೋ ತರಬೇತಿ ಸಂಸ್ಥೆ ತುಂಬಿ ತುಳುಕುತ್ತಿದೆ.
Advertisement
ಇದೆಲ್ಲದರ ಹಿನ್ನೆಲೆಯಲ್ಲಿ “ನಮ್ಮ ಮೆಟ್ರೋ’ ತರಬೇತಿ ಸಂಸ್ಥೆಗೆ ಹೆಚ್ಚು ಬೇಡಿಕೆ ಬಂದಿದೆ ಎಂದು ಸಂಸ್ಥೆಯ ಮತ್ತೂಬ್ಬ ಅಧಿಕಾರಿ ಸ್ಪಷ್ಟಪಡಿಸಿದರು. “ನಮ್ಮ ಮೆಟ್ರೋ’ ಸಿಬ್ಬಂದಿಗೆ ಆರಂಭದಲ್ಲಿ ದೆಹಲಿ ಮೆಟ್ರೋ ತರಬೇತಿ ನೀಡಿದ್ದರೂ, ಬೈಯಪ್ಪನಹಳ್ಳಿ ತರಬೇತಿ ಸಂಸ್ಥೆಯಲ್ಲಿ ಮತ್ತೂಂದು ಸುತ್ತಿನ ತರಬೇತಿ ನೀಡಲಾಯಿತು ಎಂದೂ ಅವರು ಹೇಳಿದರು.
ಅಹಮದಾಬಾದ್‌ಗೆ ಕನ್ಸಲ್ಟಂಟ್?ಅಹಮದಾಬಾದ್ ಮೆಟ್ರೋ ಯೋಜನೆಗೆ ಕನ್ಸಲ್ಟಂಟ್ (ಸಲಹೆಗಾರ) ಆಗಿ ಕಾರ್ಯನಿರ್ವಹಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಆಹ್ವಾನ ಬಂದಿದೆ. ಈ ಸಂಬಂಧದ ಚರ್ಚೆ
ಪ್ರಾಥಮಿಕ ಹಂತದಲ್ಲಿದ್ದು, ನಿಗಮವು ಕೂಡ ಬಹುತೇಕ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಹಾಗೊಂದು ವೇಳೆ ನಿಗಮವು ಕನ್ಸಲ್ಟಂಟ್ ಆಗಿ ನೇಮಕಗೊಂಡರೆ, ಅಹಮದಾಬಾದ್ ಮೆಟ್ರೋ ಯೋಜನೆಯ ಅಂದಾಜು ವೆಚ್ಚ, ನೀಲನಕ್ಷೆ, ಯೋಜನಾ ವರದಿ ಸೇರಿದಂತೆ
ವಿವಿಧ ಹಂತಗಳಲ್ಲಿ ಸಲಹೆಗಳನ್ನು ನೀಡಲಾಗುವುದು. ಇದು ನಿಗಮದ ಮಟ್ಟಿಗೆ ಹೆಗ್ಗಳಿಕೆ ಸಂಗತಿ ಎಂದು ಯೋಜನಾ ವಿಭಾಗದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಸಂಸ್ಥೆ ಮೇಲ್ದರ್ಜೆಗೆ ಮುಂಬರುವ ದಿನಗಳಲ್ಲಿ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಲು ಚಿಂತನೆ
ನಡೆದಿದೆ. ಅನಿಮೇಷನ್ ಮೂಲಕ ಪಾಠ ಹೇಳಿಕೊಡುವುದು, 7 ಕಿ.ಮೀ.ಗೆ ಸೀಮಿತವಾಗಿರುವ ಸಿಮ್ಯುಲೇಟರ್‌ಗಳ ಸಂಚಾರ ಮಾರ್ಗವನ್ನು 20 ಕಿ.ಮೀಗೆ ವಿಸ್ತರಿಸುವುದು, ಟೆಕ್ನಿಕಲ್ ಮ್ಯಾನ್ಯುವಲ್‌ಗಳ ಬಗ್ಗೆ ತಿಳಿಸಿಕೊಡುವ ಯೋಜನೆ ಇದೆ. ಪ್ರಸ್ತುತ ಸಂಸ್ಥೆಯಲ್ಲಿ 120 ವಿದ್ಯಾರ್ಥಿಗಳ ಸಾಮರ್ಥ್ಯ ಇರುವ ಸಭಾಂಗಣ, 20ರಿಂದ 30 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ಏಳು ಕೊಠಡಿಗಳು, ಸಿಮ್ಯುಲೇಟರ್, ಕಂಪ್ಯೂಟರ್ ಆಧಾರಿತ ತರಬೇತಿ ಕೊಠಡಿ, ಎಟಿಎ ಸಿಮ್ಯುಲೇಟರ್‌ಗಳ ವ್ಯವಸ್ಥೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಜಯಕುಮಾರ್ ಚಂದರಗಿ