Advertisement

“ನಮ್ಮ ಮೆಟ್ರೋ’ರೈಲಿನಲ್ಲಿ ಫ್ರಾನ್ಸ್‌ ವಿದೇಶಾಂಗ ಸಚಿವರ ಪ್ರಯಾಣ

11:33 AM Jan 10, 2017 | |

ಬೆಂಗಳೂರು: ನಮ್ಮ ಮೆಟ್ರೋ ಸೋಮವಾರ ಪ್ರವಾಸಿ ಭಾರತೀಯ ದಿವಸಕ್ಕಾಗಿ ಬಂದ ವಿದೇಶಿ ಗಣ್ಯರ ಪ್ರಯಾಣಕ್ಕೆ ಸಾಕ್ಷಿಯಾಯಿತು. ಪ್ರವಾಸಿ ಭಾರತೀಯ ದಿವಸದ ಕೊನೆಯ ದಿನ ನಗರದಲ್ಲಿ ತಂಗಿದ್ದ ವಿದೇಶಿ ಸಚಿವರು, ಅಧಿಕಾರಿಗಳು ನಮ್ಮ ಮೆಟ್ರೋ ರೈಲಿಗೆ ಭೇಟಿ ನೀಡಿ ಒಂದು ರೌಂಡ್‌ ಹಾಕಿದರು. ಈ ಪೈಕಿ ಫ್ರಾನ್ಸ್‌ ವಿದೇಶಾಂಗ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಸಚಿವ ಜೀನ್‌ ಮಾರ್ಕ್‌ ಆಯಾರಾಲ್ಟ್ ಪ್ರಮುಖರು.

Advertisement

ಮಾರ್ಕ್‌ ಆಯಾರಾಲ್ಟ್ ನೇತ್ವತದ ಪ್ರತಿನಿಧಿಗಳ ತಂಡ ವಿಧಾನಸೌಧದ ಮೆಟ್ರೋ ನಿಲ್ದಾಣದಿಂದ ಎಂ.ಜಿ. ರಸ್ತೆ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿತು. ಮೆಟ್ರೋ ಪ್ರಯಾಣದ ನಂತರ ಚರ್ಚ್‌ ಸ್ಟ್ರೀಟ್‌ಗೆ ನಡೆದು ಬಂದ ಫ್ರೆಂಚ್‌ ವಿದೇಶಾಂಗ ಸಚಿವರು ಅಲ್ಲಿರುವ ನಮ್ಮ ಬೆಂಗಳೂರು ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದರು.

ಮೆಟ್ರೋಗಾಗಿ ಭಾರತದಲ್ಲಿ ಫ್ರಾನ್ಸ್‌ ದೇಶದ ಅಲ್ಸಾಟನ್‌, ಥ್ಯಾಲಿ, ಸಿಸ್ಟ್ರಾ ಕಂಪನಿಗಳು ಕೆಲಸ ಮಾಡುತ್ತಿವೆ. ಅಲ್ಲದೇ ಅಂತಾರಾಷ್ಟ್ರೀಯ ಕಂಪನಿಗಳೊಂದಿಗೆ ಯಶಸ್ವಿ ವಹಿವಾಟು ಹೊಂದಿವೆ ಎಂದು ಹೇಳಿದರು. ಅನುಭವವಿಲ್ಲದ ಚಾಲಕರಂತೆ ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದೇವೆ ಎಂದ ಅವರು, ಪ್ರಧಾನಿ ಮೋದಿ ಜತೆಗಿನ ಸಭೆ ಸಕಾರಾತ್ಮಕವಾಗಿತ್ತು ಎಂದರು.

ಭಾರತದಲ್ಲಿ ಜನಸಂಖ್ಯೆ ಹೆಚ್ಚಿದ್ದು ಮೆಟ್ರೋ ರೈಲು ಸೇವೆ ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಈ ವೇಳೆ ರಕ್ಷಣಾ ವಿಭಾಗ, ಮಿಕ್ಸಡ್‌ ಎನರ್ಜಿ, ಅರ್ಥವ್ಯವಸ್ಥೆ, ತಂತ್ರಜ್ಞಾನದಲ್ಲಿ ಭಾರತದಲ್ಲಿ ವ್ಯವಹರಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ನಮ್ಮ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲಾ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next