Advertisement

ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ: ಶಾಂತಾರಾಮ ಶೆಟ್ಟಿ

06:00 PM Dec 03, 2019 | Suhan S |

ಮುಂಬಯಿ, ಡಿ. 2: ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಮತ್ತು ಸಂಘದ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ, ಸಂಘದ ಮುಖವಾಣಿ ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಸಂಪಾದಕ ಮಂಡಳಿ ಹಾಗೂ ಸಲಹಾಸಮಿತಿಯ ನೇತೃತ್ವದಲ್ಲಿ 2020, ಫೆ.8ರಂದು ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಲಿರುವ ಬಂಟರ ವಾಣಿ ಚಿಣ್ಣರ ಚಿಲಿಪಿಲಿ-4′ ಫ್ಯಾಶನ್‌ ಶೋ, ಪ್ರತಿಭಾ ಸ್ಪರ್ಧೆ ಹಾಗೂ ಸಮೂಹ ನೃತ್ಯ ಸ್ಪರ್ಧೆಯ ಮೊದಲನೇ ದಿನದ ತರಬೇತಿ ಶಿಬಿರವನ್ನು ಡಿ. 1ರಂದು ಬೆಳಗ್ಗೆ ಸಂಘದ ಮುಂಭಾಗದಲ್ಲಿರುವ ಶಶಿ ಮನ್‌ ಮೋಹನ್‌ ಶೆಟ್ಟಿ ಉನ್ನತ ಶಿಕ್ಷಣ ಸಂಕೀರ್ಣದಲ್ಲಿರುವ ಕಿರು ಸಭಾ ಗೃಹದಲ್ಲಿ ನಡೆಯಿತು.

Advertisement

ಸಂಘದ ಗೌರವ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ ಅವರು ಜ್ಯೋತಿ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿ ಮಕ್ಕಳಿಗೆ ಶುಭ ಹಾರೈಸಿ ಮಾತನಾಡಿ, ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಯವರ ಪರಿಕಲ್ಪನೆಯಲ್ಲಿ ಮೂಡಿಬಂದ ಚಿಣ್ಣರ ಚಿಲಿಪಿಲಿ ಪ್ರತಿಭಾ ಸ್ಪರ್ಧೆಯ ನಾಲ್ಕನೇ ಕಾರ್ಯಕ್ರಮವು ಜರಗಲಿರುವುದು ಸಂತೋಷದ ಸಂಗತಿಯಾಗಿದೆ. ಕಳೆದ ಮೂರು ವರ್ಷ ಗಳಲ್ಲಿ ಅಭೂತಪೂರ್ವ ಯಶಸ್ಸು ಪಡೆದು, ಸಂಘದ ಇತಿಹಾಸದಲ್ಲೇದಾಖಲೆ ನಿರ್ಮಿಸಿರುವ ಚಿಣ್ಣರ ಚಿಲಿ ಪಿಲಿ ಕಾರ್ಯಕ್ರಮ ಇನ್ನೊಂದು ಬಾರಿ ಅದ್ಭುತ ದಾಖಲೆ ನಿರ್ಮಿಸಲೆಂದು ಶುಭ ಹಾರೈಸಿ, ಸ್ಪರ್ಧೆಗೆ ಆಯ್ಕೆಯಾದ ಮಕ್ಕಳನ್ನು ಅಭಿನಂದಿಸಿ, ಬಂಟರ ವಾಣಿಯ ಪತ್ರಿಕಾ ಬಳಗದ ಪರಿಶ್ರಮಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಅವರು, ಯಾವುದೇ ಕಾರ್ಯಕ್ರಮ ಆಯೋಜಿಸುವಾಗ ಅದರ ಹಿಂದಿರುವಪರಿಶ್ರಮ ಎಷ್ಟೆಂಬುದನ್ನು ಆಯೋಜಕರೇ ಬಲ್ಲರು. ಕಳೆದ ಮೂರು ವರ್ಷ ಬಂಟರವಾಣಿ ಚಿಣ್ಣರ ಚಿಲಿಪಿಲಿಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕರಿಸಿದ ನಮ್ಮ ತಂಡದ ನಾಲ್ಕನೇ ಕಾರ್ಯ ಕ್ರಮ ಇದಾಗಿದ್ದು, ಬಂಟ ಬಾಂಧವರು ಎಂದಿನಂತೆ ಸಹಕಾರ ನೀಡಬೇಕು ಎಂದು ವಿನಂತಿಸಿದರು. ಸಮಾಜದಪುಟ್ಟ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ನಾನು ಈ ಯೋಜನೆ ಹಾಕಿಕೊಂಡಿದ್ದೇನೆ ಎಂದರು. ಬಂಟರವಾಣಿಯ ಗೌರವ ಸಂಪಾ ದಕ ಅಶೋಕ್‌ ಪಕ್ಕಳ ಸ್ವಾಗತಿಸಿ ಮಾತನಾಡಿ, ಈ ಬಾರಿ ಸ್ಪರ್ಧಿಗಳ ಆಯ್ಕೆ

ಪ್ರಕ್ರಿಯೆ ಸಂಘದ ಆಯಾಯ ಪ್ರಾದೇ ಶಿಕ ಸಮಿತಿಗಳಿಗೆ ಹಾಗೂ ಇತರ ಬಂಟರ ಸಂಘಸಂಸ್ಥೆಗಳಿಗೆ ನೀಡಲಾಗಿದ್ದು, ಅವರಿಂದ ಬಂದ ಆಯ್ಕೆ ಪಟ್ಟಿಯ ಅನುಸಾರವಾಗಿ ಮಕ್ಕಳನ್ನು ಅಧಿಕೃತ ತರಬೇತಿಯಲ್ಲಿ ಸೇರಿಸಿಕೊಳ್ಳಲಾಗುವುದು. ಡಿಸೆಂಬರ್‌ 8ರಂದು ಬೆಳಗ್ಗೆ 11ರಿಂದ ಸ್ಪರ್ಧಿಗಳ ಆಯ್ಕೆ ಅಂತಿಮಗೊಳ್ಳಲಿದ್ದು, ಸ್ಪರ್ಧಾಳುಗಳ ಭಾವಚಿತ್ರ, ಜನನ ದಿನಾಂಕದ ಪ್ರತಿನೀಡಲು ಕೊನೆಯ ದಿನಾಂಕ ವಾಗಿದೆ. ಮತ್ತೆ ಅದನ್ನು ಪರಿಗಣಿಸ ಲಾಗುವುದಿಲ್ಲ ಎಂದು ಹೇಳಿದರು. ತರಬೇತಿ ಶಿಬಿರದಲ್ಲಿ ಅಧಿಕ ಸಂಖ್ಯೆಯಲ್ಲಿ ಮಕ್ಕಳು, ಪಾಲಕರು ಭಾಗವಹಿಸಿದ್ದರು. ಬಂಟರವಾಣಿಯ ಸಂಪಾದಕ ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು ವಂದಿಸಿದರು.

ಉದ್ಘಾಟನಾ ಸಂದರ್ಭದಲ್ಲಿ ಹಿರಿಯಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಜಯ ಎ. ಶೆಟ್ಟಿ, ಡಾ| ಪ್ರಭಾಕರಶೆಟ್ಟಿ ಬಿ., ಹರೀಶ್‌ ವಾಸು ಶೆಟ್ಟಿ, ಲತಾ ಪಿ. ಶೆಟ್ಟಿ, ಚಿತ್ರಾ ಆರ್‌. ಶೆಟ್ಟಿ,ದಿವಾಕರ ಶೆಟ್ಟಿ ಕುರ್ಲಾ, ಪ್ರಸಾದ್‌ ಶೆಟ್ಟಿ ಅಂಗಡಿಗುತ್ತು, ನವೀನ್‌ ಶೆಟ್ಟಿ ಇನ್ನಬಾಳಿಕೆ, ಲತಾ ಸಂತೋಷ್‌ ಶೆಟ್ಟಿ, ತರಬೇತುದಾರರಾದ ಸಂದೀಪ್‌ ಶೆಟ್ಟಿ ಮತ್ತು ಶ್ವೇತಾ ಶೆಟ್ಟಿ, ಪ್ರವೀಣ್‌ ಶೆಟ್ಟಿ ವಾರಂಗ, ಸಚ್ಚಿದಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

 

ಚಿತ್ರವರದಿ: ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next