Advertisement

ಕಾಂಗ್ರೆಸ್‌ ಸೋಲಿಸುವುದೇ ನಮ್ಮ ಉದ್ದೇಶ: ರಮೇಶ

05:34 PM Nov 20, 2021 | Team Udayavani |

ಗೋಕಾಕ: ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರನ್ನು ಗೆಲ್ಲಿಸುವುದು ಹಾಗೂ ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವುದು ನಮ್ಮ ಮೊದಲ ಉದ್ದೇಶವಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

Advertisement

ಅವರು, ಶುಕ್ರವಾರ ನಗರ ಹೊರವಲಯದ ಬಸವೇಶ್ವರ ಸಭಾ ಭವನದಲ್ಲಿ ವಿಧಾನಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕಳೆದ ಬಾರಿ ವಿವೇಕರಾವ್‌ ಪಾಟೀಲ ಬಂಡಾಯ ಅಭ್ಯರ್ಥಿಯಾಗಿ ಸ ³ರ್ಧಿಸಿದ್ದರು. ಅವರಿಗೆ ಬೆಂಬಲ ನೀಡಿದ್ದರಿಂದ ಕವಟಗಿಮಠ ಗೆಲವು ಸುಲಭವಾಗಿರಲಿಲ್ಲ. ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರನ್ನು ಮೊದಲ ಸುತ್ತಿನಲ್ಲೇ ಆಯ್ಕೆ ಮಾಡಬೇಕು.

ಪಕ್ಷದ ತೀರ್ಮಾನದಂತೆ ಒಂದೇ ಸ್ಥಾನಕ್ಕೆ ಬಿಜೆಪಿ ಸ್ಪರ್ಧಿಸುತ್ತಿದೆ. ಇನ್ನೊಂದು ಸ್ಥಾನವನ್ನು ಸಹೋದರ ಲಖನ್‌ ಜಾರಕಿಹೊಳಿ ಅವರಿಗೆ ಬೇಡುವುದಿಲ್ಲ. ಲಖನ್‌ ಸ್ಪರ್ಧೆ ಕುರಿತು ನಾನು ಪತ್ರಿಕೆಗಳ ಮೂಲಕ ತಿಳಿದುಕೊಂಡಿದ್ದೇನೆ. ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಬೇಕಿದೆ. ಹೀಗಾಗಿ ವರಿಷ್ಠರೊಂದಿಗೆ ಚರ್ಚಿಸಿ ಎರಡನೇ ಪ್ರಾಶಸ್ತ್ಯದ ಮತವನ್ನು ಯಾರಿಗೆ ಚಲಾಯಿಸಬೇಕು ಎಂದು ನಿರ್ಧರಿಸಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸೋಣ ಎಂದರು.

ಪಕ್ಷ ಆದೇಶ ನೀಡಿದರೆ ದೇವರ ಪ್ರಮಾಣ ಮಾಡಿ ಹೇಳುತ್ತೇನೆ. ಎರಡು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇನೆ ಎಂದು ಪರೋಕ್ಷವಾಗಿ ಸಹೋದರನಿಗೆ ಟಿಕೆಟ್‌ ನೀಡುವಂತೆ ಮನವಿ ಮಾಡಿಕೊಂಡ ರಮೇಶ, ವಿಧಾನ ಪರಿಷತ್‌ ಸದಸ್ಯ ವಿವೇಕರಾವ್‌ ಪಾಟೀಲ ಅವರಿಗೆ ಬಿಜೆಪಿ ಸೇರುವಂತೆ ಮನವಿ ಮಾಡಿ, ಪಕ್ಷದ ವರಿಷ್ಠರು ಒಪ್ಪಿದರೆ ಅವರನ್ನ ಬಿಜೆಪಿ ಪಕ್ಷಕ್ಕೆ ಕರೆತರುವುದಾಗಿ ತಿಳಿಸಿದರು.

ಕಾಂಗ್ರೆಸ್‌ ಪಕ್ಷ ವಿವೇಕರಾವ್‌ ಪಾಟೀಲ ಅವರಿಗೆ ಅನ್ಯಾಯ ಮಾಡಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುರುಬರಾಗಿ ಕುರುಬರಿಗೇ ಅನ್ಯಾಯ ಮಾಡಿದ್ದಾರೆ. ವಿವೇಕರಾವ್‌ ಪಾಟೀಲ ಅವರ ಮನಸ್ಸಿಗೆ ನೋವಾದ ಕಾರಣ ಅವರ ಮನೆಗೆ ಹೋಗಿ ಭೇಟಿಯಾಗುತ್ತೇನೆ. ಬೆಳಗಾವಿ ಜನ ಬುದ್ದಿವಂತರಿದ್ದು ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಕಾರ್ಯಕರ್ತರು ಉಹಾಪೋಹಗಳಿಗೆ ಕಿವಿಗೊಡದೆ ಪಕ್ಷದ ಅಭ್ಯರ್ಥಿ ಪರ ಕಾರ್ಯನಿರ್ವಹಿಸಬೇಕು. ಗ್ರಾಮ
ಗ್ರಾಮಗಳ ಮೂಲೆ ಮೂಲೆಗೂ ಪಕ್ಷವನ್ನು ಸಂಘಟಿಸಲು ಕಾರ್ಯಕರ್ತರು ಸಜ್ಜಾಗಬೇಕು. ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಗೆ ತಯಾರಿ ಮಾಡೋಣ.ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೂಮ್ಮೆ ಅಧಿ ಕಾರಕ್ಕೆ ತರೋಣ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

Advertisement

ರೈತಕಾಯ್ದೆ ವಾಪಸ್‌ ಪಡೆದಿದ್ದು ಸ್ವಾಗತಾರ್ಹ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಅಮಿತ ಶಾ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಣಯ ತೆಗೆದುಕೊಂಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸಿದರು.

ಮಾಜಿ ಶಾಸಕ ಎಮ್‌ ಎಲ್‌ ಮುತ್ತೆನ್ನವರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ್‌ ಕುತುಬುದ್ದಿನ ಗೋಕಾಕ, ಓಬಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಶಿ, ಜಿಪಂ ಮಾಜಿ ಸದಸ್ಯರಾದ ಟಿ ಆರ್‌ ಕಾಗಲ, ಮಡ್ಡೆಪ್ಪ ತೋಳಿನವರ, ಬಿಜೆಪಿ ಪದಾ ಧಿಕಾರಿಗಳಾದ ಪ್ರೇಮಾ ಭಂಡಾರಿ, ಸುಭಾಸ ಪಾಟೀಲ, ಸುರೇಶ ಪಾಟೀಲ, ಶಾಮಾನಂದ ಪೂಜೇರಿ, ಶμ ಜಮಾದಾರ, ಮುಖಂಡರಾದ ಅಬ್ಟಾಸ ದೇಸಾಯಿ, ಡಿ ಎಮ್‌ ದಳವಾಯಿ, ಡಾ. ಜಿ ಆರ್‌ ಸೂರ್ಯವಂಶಿ, ಕೆ ಡಿ ಕಲಾಲ ಸೇರಿದಂತೆ ನಗರಸಭೆ, ಗ್ರಾಪಂ, ಪಪಂ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next