Advertisement
1950 ಎಪ್ರಿಲ್ 7ರಂದು ಆರಂಭವಾದ ವಿಶ್ವ ಆರೋಗ್ಯ ದಿನವನ್ನು ಪ್ರತೀ ವರ್ಷ ಒಂದು ವಿಶೇಷ ಧ್ಯೇಯವಾಕ್ಯ ಇಟ್ಟುಕೊಂಡು ಆಚರಿಸಲಾಗುತ್ತದೆ. ಈ ವರ್ಷ “ಉತ್ತಮ ಮತ್ತು ಆರೋಗ್ಯಕರ ಜಗತ್ತಿಗಾಗಿ ಒಗ್ಗೂಡೋಣ’ ಎಂಬ ಘೋಷವಾಕ್ಯವನ್ನು ಇಟ್ಟುಕೊ ಳ್ಳಲಾಗಿದೆ. ಕೋವಿಡ್ 19ರ ಬಳಿಕ ಜನರಿಗೆ ತಮ್ಮ ಆರೋಗ್ಯದ ಕುರಿತು ಹೆಚ್ಚು ಕಾಳಜಿ ಬಂದಂತಿದೆ. ವಿಶೇಷವಾಗಿ 2020ರಲ್ಲಿ ಜನರು ತೋರಿದ ಆರೋಗ್ಯ ಕಾಳಜಿ ಅಭೂತಪೂರ್ವವಾದುದು. ಆದರೆ ಈಗ ಕೋವಿಡ್‌ನ 2ನೇ ಅಲೆ ಹೆಚ್ಚಾಗುತ್ತಿದ್ದು ಜನರು ಇನ್ನೂ ಹೆಚ್ಚು ಜಾಗೃತ ಸ್ಥಿತಿಗೆ ಬರಬೇಕಾಗಿದೆ.
Related Articles
Advertisement
ಸಾರ್ವಜನಿಕರ ಪಾತ್ರಸ್ವತ್ಛಗಾಳಿ, ಶುದ್ಧ ನೀರು, ಶುಭ್ರ ಬೆಳಕು ಇವೆಲ್ಲವನ್ನು ಪಡೆಯಲು ಸರಕಾರದ ಜತೆಗೆ ನಾವೂ ಕೈಗೂಡಿಸಬೇಕು. ತಮ್ಮ ಪರಿಸರವನ್ನು ಸ್ವತ್ಛವಾಗಿರಿಸಿಕೊಳ್ಳಬೇಕು. ಯಾಕೆಂದರೆ ಸಾಂಕ್ರಾಮಿಕ ರೋಗಗಳಿಗೆ ಇದೇ ಕಾರಣ. ಶುದ್ಧ ನೀರು, ಗಾಳಿ ಪಡೆಯಲು ಪರಿಸರದ ನೈರ್ಮಲ್ಯ ಕಾಪಾಡುವುದು ಅತೀ ಮುಖ್ಯ. ಆರೋಗ್ಯಕ್ಕೆ 5 ನಿಯಮಗಳು
1 ಆರೋಗ್ಯಕರ ಆಹಾರ: ಆರೋಗ್ಯಕರ ಜೀವನಕ್ಕೆ ಅಗತ್ಯ ವಾದ ಅಂಶಗಳಲ್ಲಿ ಸಮತೋಲಿತ ಆಹಾರವು ಒಂದು. ದಿನಕ್ಕೆ ಕನಿಷ್ಠ ಮೂರು ಬಾರಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ.ನಿಮ್ಮ ಬಹುಪಾಲು ಆಹಾರ ಸೇವನೆಯು ಆರೋಗ್ಯಕರ ಆಹಾರಗಳಾದ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೊಟೀನ್ ಭರಿತ ಆಹಾರ ಗಳನ್ನು ಒಳಗೊಂಡಿರಬೇಕು. ಸಮತೋಲಿತ ಆಹಾರವು ಎಲ್ಲ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ. 2 ಉತ್ತಮ ನಿದ್ರೆ: ಒಟ್ಟಾರೆ ಯೋಗಕ್ಷೇಮದಲ್ಲಿ ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ. ಸ್ಥೂಲಕಾಯತೆ ಮತ್ತು ಹೃದ್ರೋಗ ಸಹಿತ ಅನೇಕ ಕಾಯಿಲೆಗಳಿಗೆ ನಿದ್ರಾಹೀನತೆಯು ಸಂಬಂಧಿಸಿದ್ದಾಗಿದೆ. ಎಲ್ಲ ವಯಸ್ಸಿನ ಜನರಿಗೆ ಉತ್ತಮ, ಗುಣಮಟ್ಟದ ನಿದ್ದೆಯನ್ನು ಹೆಚ್ಚು ಶಿಫಾರಸು ಮಾಡಲಾಗಿದೆ. ಏಕೆಂದರೆ ಇದು ಆರೋಗ್ಯವನ್ನು ನೀವು ಊಹಿಸಿ ಕೊಳ್ಳುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ಸುಧಾರಿಸುತ್ತದೆ. 3 ಒತ್ತಡ ನಿವಾರಣೆ: ಒತ್ತಡವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಬೊಜ್ಜು ಮತ್ತು ಹಲವು ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ. ಒತ್ತಡವನ್ನು ಕಡಿಮೆ ಮಾಡಲು, ವ್ಯಾಯಾಮ, ಧ್ಯಾನ, ಈಜು, ಯೋಗಗಳನ್ನು ಮಾಡಬಹುದಾಗಿದೆ. ಅತಿಯಾದ ಒತ್ತಡಕ್ಕೆ ಒಳಗಾಗದಿದ್ದರೂ ದಿನನಿತ್ಯದ ಜೀವನವನ್ನು ನಿಭಾಯಿಸಲು ಸಂಪೂರ್ಣವಾಗಿ ಸಾಧ್ಯವಾಗದಿದ್ದರೆ, ಮನಶಾಸ್ತ್ರಜ್ಞರನ್ನು ಭೇಟಿಯಾಗಿ. 4 ಮಾನಸಿಕ ಆರೋಗ್ಯದತ್ತ ಗಮನ ನೀಡಿ; ಒಟ್ಟಾರೆ ಯೋಗಕ್ಷೇಮಕ್ಕೆ ಉತ್ತಮ ಮಾನಸಿಕ ಆರೋಗ್ಯವು ಅಷ್ಟೇ ಮುಖ್ಯ. ಮಾನಸಿಕ ಆರೋಗ್ಯವು ಒಟ್ಟಾರೆ ಆರೋಗ್ಯದ ಅಡಿ ಪಾಯ. ಇದನ್ನು ಪ್ರತಿದಿನವೂ ನಿರ್ವಹಿಸುವುದು ಮತ್ತು ನಿರ್ಣಯಿಸುವುದು ಬಹಳ ಮುಖ್ಯ. 5 ವ್ಯಾಯಾಮ: ಆರೋಗ್ಯಕರವಾಗಿ ಮತ್ತು ಸಕ್ರಿಯವಾಗಿ ಡಲು ವ್ಯಾಯಾಮ ಉತ್ತಮ ಮಾರ್ಗ. ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ಪ್ರತೀ ವಾರ 150 ನಿಮಿಷಗಳ ವ್ಯಾಯಾಮವನ್ನು ಶಿಫಾರಸು ಮಾಡುತ್ತದೆ.