ಬೆಂಗಳೂರು : ಕಾಂಗ್ರೆಸ್ ನ ನಿಜವಾದ ಶತ್ರು ಬಿಜೆಪಿಯಲ್ಲ, ಆರ್ ಎಸ್ ಎಸ್ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದ ಕೆಪಿಸಿಸಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ನಾವು ನಿಜವಾಗಿಯೂ ಹೋರಾಟ ಮಾಡಬೇಕಿರುವುದು ಬಿಜೆಪಿ ವಿರುದ್ಧವಲ್ಲ. ನಮ್ಮ ಹೋರಾಟ ಆರ್ ಎಸ್ ಎಸ್ ವಿರುದ್ಧ. ಏಕೆಂದರೆ ಇದೊಂದು ಸೈದ್ಧಾಂತಿಕ ಹೋರಾಟವಾಗಿದ್ದು, ದೇಶದ ಯುವಕರಲ್ಲಿ ಭಾರತದ ನಿಜವಾದ ಇತಿಹಾಸ ತಿಳಿಸಬೇಕು. ನಮಗೆ ಬೇಕಿರುವುದು ಗಾಂಧಿಯವರು ಮಂಡಿಸಿದ ಸರ್ವ ಧರ್ಮ ಸಮಭಾವದ ಸಿದ್ಧಾಂತ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ :ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವೆ : ರಾಹುಲ್ ಗೆ ಡಿಕೆಶಿ ಭರವಸೆ
ರಾಜ್ಯದಲ್ಲಿ ಬಿಜೆಪಿ ಈಗ ಕೋಮು ಅಜೆಂಡಾವನ್ನು ಬಿತ್ತುತ್ತಿದೆ. ಕಾಂಗ್ರೆಸ್ ಜಾರಿಗೆ ತಂದ ಎಲ್ಲ ವಿಚಾರಧಾರೆಗಳನ್ನು ಹಾಳು ಮಾಡುತ್ತಿದ್ದಾರೆ. ಸಂವಿಧಾನಿಕ ಮೌಲ್ಯಗಳನ್ನು ಅಪಮೌಲ್ಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನಮ್ಮ ಪರವಾಗಿ ಯಾರು ನಿಲ್ಲುತ್ತಾರೋ, ಅವರಿಗೆ ಶಕ್ತಿ ತುಂಬುದುವುದು, ಅವರ ಪರವಾಗಿ ಮಾತನಾಡುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.