ದೇವನಹಳ್ಳಿ: ಸಮಾಜದ ಪ್ರತಿಯೊಬ್ಬರಿಗೂ ನೆಮ್ಮದಿಜೀವನಕ್ಕೆ ಉತ್ತಮ ಪರಿಸರ ಅಗತ್ಯವಾಗಿದೆ.ಪರಿಸರವಿಲ್ಲದೆ ಮನುಷ್ಯನ ಜೀವನವಿಲ್ಲ. ಅದನ್ನುಮನಗಂಡು ತಾವೆಲ್ಲಾ ಪರಿಸರ ಉಳಿಸಿ ಬೆಳೆಸುವ ಕೆಲಸಮಾಡಬೇಕು ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾಅಧ್ಯಕ್ಷ ಎಚ್.ಎಂ. ರವಿಕುಮಾರ್ ತಿಳಿಸಿದರು.
ತಾಲೂಕಿನ ಕೊಯಿರಾಹೊಸೂರು ಗ್ರಾಮದಲ್ಲಿ ಜಿಲ್ಲಾರೈತ ಮೋರ್ಚಾ ವತಿಯಿಂದ ನಡೆದ ಬಿಜೆಪಿ ನಾಯಕಶ್ಯಾಮ್‌ಪ್ರಸಾದ್‌ಮುಖರ್ಜಿಬಲಿದಾನದಿನದಪ್ರಯುಕ್ತಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,15 ದಿನಗಳ ಕಾಲ ಜಿಲ್ಲೆಯ ಎಲ್ಲಾ ಬೂತ್‌ಗಳಲ್ಲಿ ಬಿಜೆಪಿನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನದದಿನದ ಅಂಗವಾಗಿ ನಾಲ್ಕು ಸಸಿಗಳನ್ನು ನೆಟ್ಟು ಪರಿಸರಉಳಿಸುವ ಕೆಲಸವಾಗುತ್ತಿದೆ ಎಂದರು.
ಮನುಷ್ಯನ ದುರಾಸೆಗೆ ಪರಿಸರ ನಾಶ: ಕೊರೊನಾದಿಂದ ಜನರಿಗೆ ಆಕ್ಸಿಜನ್ ಸಮಸ್ಯೆ ಎದುರಿಸುವಂತಾಯಿತು. ಇನ್ನೂ ಮುಂದೆ ಗಿಡಮರಗಳನ್ನು ಬೆಳೆಸಿದರೆ,ಆಕ್ಸಿಜನ್ ಸಮಸ್ಯೆ ಬಗೆಹರಿಸಬಹುದು. ಪರಿಸರ ಉಳಿಸಿಬೆಳೆಸುವ ಕಾಯಕಕ್ಕೆ ಎಲ್ಲರೂ ಕೈಜೋಡಿಸಬೇಕು.ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಮಳೆ, ನೆರಳುಮತ್ತು ಪ್ರಾಣಿ ಪಕ್ಷಿಗಳಿಗೆ ಆಹಾರಕ್ಕಾಗಿ ಹೆಚ್ಚು ಮರಗಳನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಮನುಷ್ಯನ ದುರಾಸೆಯಿಂದ ಪರಿಸರದ ಮೇಲೆತೋರಿದ ದೌರ್ಜನ್ಯ ಪ್ರಸ್ತುತ ದಿನಗಳಲ್ಲಿ ಮುಳುವಾಗಿ ಪರಿಣಮಿಸಿದೆ. ಪ್ರಕೃತಿ ಮನುಷ್ಯನಿಗೆ ಎಲ್ಲವನ್ನೂನೀಡಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೆ ಸ್ವಾರ್ಥದಿಂದ ಪರಿಸರ ನಾಶಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.
ಮನೆಗೊಂದು ಗಿಡ ಬೆಳೆಸಿ: ಜಿಲ್ಲಾ ಬಿಜೆಪಿ ಎಸ್‌ಸಿಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣೇಶ್‌ಬಾಬುಮಾತನಾಡಿ, ಪ್ರಕೃತಿ ಉಳಿಸಿ ಬೆಳೆಸುವ ಕಾರ್ಯತುರ್ತಾಗಿ ಆಗಬೇಕಾಗಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರಹೊಣೆ. ಪ್ರತಿಯೊಬ್ಬರೂ ಮನೆಗೊಂದು ಗಿಡ ಬೆಳೆಸಿ,ಪರಿಸರ ರಕ್ಷಿಸಬೇಕು ಎಂದರು. ತಾಲೂಕು ಬಿಜೆಪಿಅಧ್ಯಕ್ಷ ಸುಂದರೇಶ್, ಮಂಡಲದ ಉಪಾಧ್ಯಕ್ಷ ಕೃಷ್ಣಮೂರ್ತಿ, ಸೈನಿಕ ಪ್ರಕೋಷ್ಟದ ಸಂಚಾಲಕ ವೆಂಕಟೇಶ್,ಮುಖಂಡ ಅಮರನಾರಾಯಣ್, ಶ್ರೀನಿವಾಸ್, ಎಚ್.ಮಧುಸೂದನ್ ಹಾಜರಿದ್ದರು.