Advertisement

ನಮ್ಮ ಕಾಲೇಜಿನ ಪ್ರವಾಸ ಕಥನ

06:00 AM May 18, 2018 | |

ಪ್ರವಾಸ ಎಂದ ತಕ್ಷಣ ಎಲ್ಲರಿಗೂ ಖುಷಿ ಆಗುತ್ತದೆ. ಅದೇ ಖುಷಿಯಲ್ಲಿ ನಾವು ನಮ್ಮ ಸರಕಾರಿ ಪ್ರಥಮ ದರ್ಜೆ ಕಾಲೇಜು- ಉಪ್ಪಿನಂಗಡಿಯಿಂದ ಪ್ರವಾಸ ಹೋಗಿದ್ದೆವು. ಊಟಿ, ಕೊಡೈಕನಲ್‌, ಮೈಸೂರು ಕಡೆಗೆ ಪ್ರವಾಸವನ್ನು ಕೈಗೊಂಡೆವು. 

Advertisement

ನಾವು ಒಟ್ಟು 45 ವಿದ್ಯಾರ್ಥಿಗಳು ಹಾಗೂ ಆರು ಮಂದಿ ಪ್ರಾಧ್ಯಾಪಕರು ಮತ್ತು ಮೂರು ಮಂದಿ ಉಪ್ಪಿನಂಗಡಿ ಸ್ಮಾರ್ಟ್‌ ಬಸ್ಸಿನ ಚಾಲಕರು ನಮ್ಮೊಂದಿಗಿದ್ರು. ನಾವು ಎಪ್ರಿಲ್‌ ನಾಲ್ಕು 2018ರಂದು ರಾತ್ರಿ ವೇಳೆ ಉಪ್ಪಿನಂಗಡಿಯಿಂದ ಹೊರಟೆವು. ಅದೂ ಕೂಡ ಎ.ಸಿ. ಸ್ಮಾರ್ಟ್‌ ಬಸ್‌Õ . ಬೆಳಗಾಗುವುದರೊಳಗೆ ಊಟಿನೂ ತಲುಪಿದೆವು. ಬೆಳಗ್ಗೆ ಎಲ್ಲರೂ ಫ್ರೆಶ್‌ಅಪ್‌ ಆಗಿ ತಿಂಡಿ ತಿಂದು ಅಲ್ಲಿಂದ ಶುರುವಾಯಿತು ಸುತ್ತಾಟದ ಪಯಣ ಹಾಗೂ ವಿದ್ಯಾರ್ಥಿಗಳ ಸೆಲ್ಫಿ . ಈ ಸೆಲ್ಫಿಯ ನಡುವೆ ಲೆಕ್ಚರರ್ ಯಾರು? ಸ್ಟೂಡೆಂಡ್ಸ್‌ ಯಾರು ಎಂದು ಗೊತ್ತಾಗುತ್ತಿರಲಿಲ್ಲ. ಯಾಕೆಂದರೆ ಕಾಲೇಜಿನಲ್ಲಿ ದಿನಾಲೂ ಸೀರೆಯಲ್ಲೇ ನೋಡುವ ಮೇಡಂಗಳು ಅವತ್ತು ನಮ್ಮ ಹಾಗೆ ಡ್ರೆಸ್‌Õನಲ್ಲಿ ಇದ್ದರು. ಅಲ್ಲದೇ, ಸೆಲ್ಫಿಗೆ ಫೋಸು ಕೊಡುವುದು ಹೇಳಬೇಕಾ? ಟೀ ಫ್ಯಾಕ್ಟರೀ, ಗಾರ್ಡನ್‌ ಫ್ಲವರ್‌ ಶೋ… ವಾವ್‌! ಸೂಪರ್‌ ಆಗಿತ್ತು. ಬರೀ ಒಂದು ದಿನದಲ್ಲಿಯೇ ನಮ್ಮ ಮೊಬೈಲ್‌ನಲ್ಲಿ 200 ಫೋಟೋಸ್‌ ಏರಿತ್ತು. ಆ ದಿನ ಫ‌ುಲ್‌ ಜಾಲಿ ಮಾಡಿದೆವು. ನೀರಿನಲ್ಲಿ ಬೋಟಿಂಗ್‌ ಮಾಡಿದೆವು. ರಾತ್ರಿ ವೇಳೆ ಊಟಿಯಲ್ಲಿಯೇ ಉಳಿದೆವು. ಎರಡನೇ ದಿನ ಪುನಃ ಸಿದ್ಧರಾದೆವು. ಚಾ-ತಿಂಡಿ ಮುಗಿಸಿ ಕೊಡೈಕೆ‌ನಲ್‌ಗೆ ಹೊರಟೆವು. ಆ ದಿನ ಪೂರ್ತಿ ಬಸ್ಸಿನಲ್ಲಿಯೇ ನಮ್ಮ ಪಯಣವಾಗಿತ್ತು. ಇಲ್ಲೂ ನಾವೇನು ಕಡಿಮೆ ಇಲ್ಲ, ಬಸ್ಸಲ್ಲಿ ನಮ್ಮದು ಡ್ಯಾನ್ಸೇ ಡ್ಯಾನ್ಸ್‌. ಎಲ್ಲರೂ ಸೇರಿ ಕುಣಿಯುವುದು ಹಾಗೂ ಕೆಲವು ಗೇಮ್‌ಗಳನ್ನು ಆಯೋಜಿಸಲಾಗಿತ್ತು. ಕೆಲವರಿಗಂತು ಬಸ್ಸಲ್ಲಿ ಕೂತು ಕೂತು ವಾಂತಿ ಶುರುವಾಯಿತು. ಸಂಜೆ ವೇಳೆ ಕೊಡೈಕೆನಲ್‌ನಲ್ಲಿ ಸೂಸೈಡ್‌ ಪಾಯಿಂಟ್ಸ್‌ ನೋಡಿದೆವು. ನಂತರ ನಮ್ಮನ್ನು ಪರ್ಚೇಸಿಂಗ್‌ ಮಾಡಲು ಬಿಟ್ಟಿದ್ದರು. ರಾತ್ರಿ ನಮಗಾಗಿ ಫ‌ಯರ್‌ ಕ್ಯಾಂಪನ್ನೂ ಇಡಲಾಗಿತ್ತು. ಬಸ್ಸಲ್ಲಿ ಕೂತದ್ದರಿಂದ ಆಯಾಸವನ್ನು ನೀಗಿಸಲು ಬೆಂಕಿ ಹಾಕಿ ಅದರ ಬೆಳಕಿನಲ್ಲಿ ಡ್ಯಾನ್ಸ್‌ ಮಾಡಿದೆವು. ನಂತರ ಊಟ ಮಾಡಿ ಅಲ್ಲಿಂದ ಮೈಸೂರಿನತ್ತ ನಮ್ಮ ಪಯಣ. ಎಂಟನೆ ತಾರೀಕು ಬೆಳಿ‌ಗ್ಗೆ ಮೈಸೂರಿನಲ್ಲಿ  ಫ್ರೆಶ್‌ಅಪ್‌ ಆಗಿ ಅಲ್ಲಿಯೇ ಕೆಲವು ಸ್ಥಳಗಳನ್ನು ನೋಡಿದೆವು. ಮಧ್ಯಾಹ್ನ ಊಟವನ್ನು ಕುಶಾಲನಗರದಲ್ಲಿ ಮುಗಿಸಿ ಆ ಸವಿನೆನಪಿನೊಂದಿಗೆ ಉಪ್ಪಿನಂಗಡಿಗೆ ವಾಪಸ್‌ ಬಂದೆವು. 

ವಾಣಿಶ್ರೀ ಕೋರಿಯರ್‌  ದ್ವಿತೀಯ ಎಂ. ಎ. ಪ್ರಥಮ ದರ್ಜೆ ಕಾಲೇಜು, ಉಪ್ಪಿನಂಗಡಿ

Advertisement

Udayavani is now on Telegram. Click here to join our channel and stay updated with the latest news.

Next