Advertisement

OTT ಹಿನ್ನಲೆಯೇನು? ಕೋಟ್ಯಂತರ ರೂ. ಹೂಡಿಕೆ ಮಾಡುವ ಇವುಗಳ ಆದಾಯದ ಮೂಲ ಯಾವುದು ?

04:03 PM Aug 04, 2020 | Mithun PG |

ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್, ಪ್ರೈಮ್ ವಿಡಿಯೋ, ವೂಟ್ ಮುಂತಾದ ಹೆಸರುಗಳು ಕೋವಿಡ್ ಕಾಲಘಟ್ಟದಲ್ಲಿ ಹೆಚ್ಚು ಚಾಲ್ತಿಯಲ್ಲಿವೆ. ಇದಾವುದು ಹೆಸರುಗಳನ್ನು ಕೇಳಿರದಿದ್ದರೇ ಸುತ್ತಮುತ್ತಲಿನ ಜನರು ನಿಮ್ಮನ್ನು ಶಿಲಾಯುಗದ ಮಾನವರೆಂದು ಕರೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.  ಕಳೆದ ಕೆಲವು ವರ್ಷಗಳಿಂದ ಒಟಿಟಿ ವೆಬ್ ಸ್ಟ್ರೀಮಿಂಗ್ ಪ್ಲಾಟ್‌ ಫಾರ್ಮ್ ಗಳು ಅತೀ ಹೆಚ್ಚು ಜನಪ್ರಿಯತೆ ಪಡೆದಿವೆ. ಇವುಗಳ ಹಿನ್ನಲೆಯೇನು ? ಯಾವ ರೀತಿಯ ಸೇವೆಯನ್ನು ನೀಡುತ್ತದೆ ?  ಇವುಗಳ ಅದಾಯದ ಮೂಲ ಯಾವುದು ಎಂಬುದನ್ನು  ಈ ಲೇಖನದಲ್ಲಿ ತಿಳಿಯೋಣ.

Advertisement

ಯುವಜನರು ಇತ್ತೀಚಿಗೆ ಧಾರವಾಹಿ ಅಥವಾ ಪುಸ್ತಕಗಳಿಗಿಂತ ಮನರಂಜನಾ ಅಂಶಗಳ ಕಡೆಗೆ ಹೆಚ್ಚು ಆಕರ್ಷಿತರಾಗಿದ್ದಾರೆ. ಇದನ್ನು ಅವರದೇ ಭಾಷೆಯಲ್ಲಿ Something Special or Chill Content ಎಂದು ಕೂಡ ಕರೆಯಬಹುದು. ಏತನ್ಮಧ್ಯೆ ಹಲವು ಕಾಲದಿಂದ ಒಂದೇ ಮಾದರಿಯಲ್ಲಿ ಬಳಕೆದಾರರನ್ನು ಸೆಳೆಯುತ್ತಿದ್ದ ಯೂಟ್ಯೂಬ್ ತಾಂತ್ರಿಕ ಸ್ಪರ್ಧೆ ಏರ್ಪಟ್ಟಿರುವುದರಿಂದ ತನ್ನ  ವ್ಯಾಪ್ತಿಯನ್ನು ವಿಸ್ತರಿಸಿದೆ. ಈ ರೀತಿ ವ್ಯಾಪ್ತಿ ವಿಸ್ತರಿಸಲು ಪ್ರಮುಖ ಕಾರಣವೇ ಒಟಿಟಿಗಳು.

ಏನಿದು ಒಟಿಟಿ ( OTT ):

ಒಟಿಟಿ ಎನ್ನುವುದು ಓವರ್ ದ ಟಾಪ್ ಮೀಡಿಯಾ ಸರ್ವಿಸ್.  ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್, ಪ್ರೈಮ್ ವಿಡಿಯೋ, ವೂಟ್  ಮುಂತಾದವನ್ನು ಒಟಿಟಿಗಳೆಂದು ಕರೆಯಲಾಗುತ್ತದೆ. ಭಾರತದಲ್ಲಿ ಪ್ರಸ್ತುತ ಸುಮಾರು 40ಕ್ಕಿಂತ ಹೆಚ್ಚು ಓಟಿಟಿಗಳಿವೆ. ಅಧುನಿಕ ಮತ್ತು ಸುಧಾರಿತ ಮನರಂಜನಾ ಸೇವೆಯಲ್ಲಿ ಒಟಿಟಿ ಟ್ರೆಂಡ್ ಸೃಷ್ಟಿಸಿದೆ. ಇದು ಇಂಟರ್ನೆಟ್ ಆಧಾರಿತ ಸೇವೆ. 2018ರ ಆರ್ಥಿಕ ವರ್ಷದಲ್ಲಿ  ಭಾರತದ ಒಟಿಟಿ ಮಾರುಕಟ್ಟೆ ಮೌಲ್ಯ 2,150 ಕೋಟಿ ಮತ್ತು ಅದರ ಮೌಲ್ಯವು 2019ರಲ್ಲಿ 35 ಬಿಲಿಯನ್ ಗೆ ಏರಿಕೆಯಾಗಿತ್ತು. ಇಂದಿನ ದಿನಗಳಲ್ಲಿ ಟೆಲಿವಿಷನ್ ನಲ್ಲಿ ದೊರಕುವ ಎಲ್ಲಾ ಮನರಂಜನಾ, ಸುದ್ದಿ ವಿಚಾರಗಳು ಕೂಡ  ಒಟಿಟಿಯಲ್ಲೇ ಸಿಗುವುದು ಗಮನಾರ್ಹ ಬೆಳವಣಿಗೆ.

Advertisement

ಕೆಪಿಎಂಜಿ ವರದಿಯ ಪ್ರಕಾರ, ಭಾರತೀಯ ಚಂದಾದಾರರು ದಿನವೊಂದಕ್ಕೆ ವಿವಿಧ ಒಟಿಟಿ ಪ್ಲಾಟ್‌ ಫಾರ್ಮ್‌ಗಳಲ್ಲಿ ಸರಾಸರಿ 20–50 ನಿಮಿಷಗಳನ್ನು ಕಳೆಯುತ್ತಾರೆ.  ಭಾರತದ ಮೊದಲ ಒಟಿಟಿ ಪ್ಲಾಟ್‌ ಫಾರ್ಮ್ BIGflix. ಇದನ್ನು ರಿಲಾಯನ್ಸ್ ಎಂಟರ್ ಟೈನ್ ಮೆಂಟ್ 2008 ರಲ್ಲಿ ಆರಂಭಿಸಿತ್ತು. 2010 ರಲ್ಲಿ ಭಾರತದ ಮೊದಲ ಒಟಿಟಿ ಮೊಬೈಲ್ ಆ್ಯಪ್ NexGtv ಆರಂಭವಾಗಿತ್ತು. ಇದರಲ್ಲಿ ಲೈವ್ ಟಿವಿ ಮಾತ್ರವಲ್ಲದೆ ಬಳಕೆದಾರರಿಗೆ ಆಸಕ್ತಿದಾಯಕ ವಿಚಾರಗಳನ್ನು ನೀಡುತ್ತಿತ್ತು. ಈ ಆ್ಯಪ್ 2013-14ರಲ್ಲಿ ಮೊದಲ ಬಾರಿಗೆ ಮೊಬೈಲ್ ನಲ್ಲಿ ಐಪಿಲ್ ಕ್ರಿಕೆಟ್ ಅನ್ನು ನೇರಪ್ರಸಾರ ಮಾಡಿತ್ತು.

2013ರ ಆಸುಪಾಸಿನಲ್ಲಿ   Ditto Tv (zee) ಮತ್ತು ಸೋನಿ ಲಿವ್ ಎರಡನ್ನೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದಾಗ ಒಟಿಟಿ ಸೇವೆ ಭಾರತದಲ್ಲಿ ಗಮನಾರ್ಹ ವೇಗವನ್ನು ಪಡೆದುಕೊಂಡಿತು. Ditto Tvಯು, ಸ್ಟಾರ್, ಸೋನಿ, ವಯಾಕಾಮ್, ಜೀ, ಸೇರಿದಂತೆ ಎಲ್ಲಾ ಮಾಧ್ಯಮ ಚಾನೆಲ್‌ ಗಳನ್ನು  ಒಟ್ಟುಗೂಡಿಸುವ ವೇದಿಕೆಯಾಗಿತ್ತು.

ಭಾರತದಲ್ಲಿ ಸರಿಸುಮಾರು 4 ವರ್ಷಗಳಿಂದ ಒಟಿಟಿ ಕ್ರಾಂತಿ ನಡೆಯುತ್ತಿದೆ. ಮೊಬೈಲ್ ಆಪರೇಟರ್ ಗಳು 4ಜಿ ಆರಂಭಿಸಿದಾಗ ಭಾರತದಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆ ಮಾತ್ರ ಹೆಚ್ಚಳವಾಗಿದ್ದಲ್ಲದೆ ಒಟಿಟಿ ಬಳಸುವವರ ಸಂಖ್ಯೆ ಕೂಡ ಹೆಚ್ಚಾಯಿತು. 4ಜಿ ಎಂಬ ಆಹಾರ ಪದಾರ್ಥಗಳು ಸಿದ್ದವಾದಾಗ ಜಿಯೋ ಸಂಸ್ಥೆ ಅದನ್ನು ಸ್ವಾದಭರಿತ ಅಡಿಗೆ ಮಾಡಿ ಉಣಬಡಿಸಿತು. ಅಲ್ಲಿಯವರೆಗೂ ದುಬಾರಿಯಾಗಿದ್ದ ಇಂಟರ್ನೆಟ್ ಸೇವೆ ಉಚಿತವಾಗಿ  ಮತ್ತು ಅಗ್ಗದ ದರದಲ್ಲಿ ದೊರೆಯಲು ಆರಂಭಿಸಿತು.

ಒಟಿಟಿಗಳ ಬೆಳವಣಿಗೆ: ಯಾರು ಬೇಕಾದರೂ ಖಾಸಗಿಯಾಗಿ ಒಟಿಟಿ ಸೇವೆಯನ್ನು ಆರಂಭಿಸಬಹುದು. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದ್ದ ನೆಟ್ ಫ್ಲಿಕ್ಸ್ ಗೆ 2015 ರವರೆಗೂ ಭಾರತಕ್ಕೆ ಬರಲು ಇಷ್ಟವಿರಲಿಲ್ಲ. ಆದರೇ 2015ರಲ್ಲಿ ನಮ್ಮ ದೇಶದಲ್ಲಿ ಇದರ ಸೇವೆ ಆರಂಭವಾದರೂ ಅಷ್ಟೇನೂ ಜನರಿಗೆ ತಲುಪಿರಲಿಲ್ಲ, ಆದರೇ ಜಿಯೋ ಬಂದ ನಂತರದಲ್ಲಿ  ಗುಣಮಟ್ಟದ  ಸೇವೆ ನೀಡಲು ತೊಡಗಿತು.

ಸ್ಟಾರ್ ಟಿವಿ ಗ್ರೂಪ್ ಒಡೆತನದ  ಹಾಟ್ ಸ್ಟಾರ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇದು ಸ್ಟಾರ್ ಸ್ಪೋರ್ಟ್ ನಿಯಂತ್ರಣದಲ್ಲಿದ್ದು ಕ್ರಿಕೆಟ್ ಹಾಕಿ, ಬ್ಯಾಡ್ ಮಿಂಟನ್ ಮೊದಲಾದ ಕ್ರೀಡೆಗಳನ್ನು ನೇರ ಪ್ರಸಾರಮಾಡುತ್ತದೆ. ಇದರ ಮೂಲಕ ಜನರು ಮೊಬೈಲ್ ನಲ್ಲೇ ಕ್ರಿಕೆಟ್ ಪಂದ್ಯಾಟಗಳನ್ನು ಉಚಿತವಾಗಿ ನೋಡಬಹುದಾಗಿತ್ತು.( ಈಗ ಚಂದಾದಾರಿಕೆಯನ್ನು ಮಾಡಬೇಕಾಗುತ್ತದೆ) . ಈಗ ಸಿನಿಮಾಗಳು ಸೇರಿದಂತೆ ಇತರ ಅನ್ ಡಿಮ್ಯಾಂಡ್ ಮನರಂಜನಾ ಕಂಟೆಂಟ್ ಗಳು ಇದರಲ್ಲಿ ಲಭ್ಯ.

ಸೋನಿ ಎಂಟರ್ಟೈನ್ ಮೆಂಟ್ ಗ್ರೂಪ್ ನ ಸೊನಿ ಲಿವ್, ಅಮೆಜಾನ್ ಪ್ರೈಮ್ ವಿಡಿಯೋ, (ಅಮೆಜಾನ್ ಒರಿಜಿನಲ್ಸ್),  ನೆಟ್ ಫ್ಲಿಕ್ಸ್ ಒರಜಿನಲ್ಸ್, ವೂಟ್, ಜೀ5, ಡಿಸ್ನಿ ಪ್ಲಸ್, ಈರೋಸ್ ನೌ, ವಿಯು, ಟಿವಿಎಫ್ ಮುಂತಾದ ಒಟಿಟಿ ಗಳು ಇಂದು ಅತ್ಯುತ್ತಮ ಮಟ್ಟದ ಸೇವೆ ನೀಡುತ್ತಿದೆ. ಹಲವು ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ವೆಬ್ ಸಿರಿಸ್ ಗಳು ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಮಾತ್ರವಲ್ಲದೆ ಇಂದು ಸಿನಿಮಾಗಳು ಕೂಡ ಒಟಿಟಿಯಲ್ಲೇ ಬಿಡುಗಡೆಯಾಗುತ್ತಿದೆ.

ಒಟಿಟಿಗೆ ಆದಾಯದ ಮೂಲ:

ಭಾರತೀಯ ಮಾರುಕಟ್ಟೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಭಿನ್ನವಾಗಿದೆ.  ಈ ದೇಶದಲ್ಲಿ ಕಡಿಮೆ ಸಂಖ್ಯೆಯ ಸ್ಮಾರ್ಟ್ ಟಿವಿಗಳಿದ್ದು, ಸ್ಮಾರ್ಟ್ ಪೋನ್ ಗಳ ಸಂಖ್ಯೆ ಹೆಚ್ಚಿವೆ. ಈಗಾಗಿ ಅನೇಕ ಒಟಿಟಿ ಪ್ಲಾಟ್ ಫಾರ್ಮ್ ಗಳು ಮೊಬೈಲ್ ಬಳಸುತ್ತಿರುವ ಯುವಜನರನ್ನು ಆಕರ್ಷಿಸುತ್ತಿದೆ.  ಪ್ರಸ್ತುತ ಎರಡು ಪ್ರಮುಖ ಮಾದರಿಗಳಿಂದ ಇವು ಆದಾಯಗಳಿಸುತ್ತಿವೆ.

ಮೊದಲನೆಯದಾಗಿ ವಿಡಿಯೋಗಳ ಮಧ್ಯೆ ಜಾಹೀರಾತು ನೀಡುವುದು. ಮತ್ತೊಂದು ಪ್ರೀಮಿಯಂ ಚಂದಾದರಿಕೆ ಅಥವಾ ಸಬ್ ಕ್ರಿಪ್ಷನ್ ಮಾಡುವುದು. ಬಳಕೆದಾರರು ಒಟಿಟಿ ಸೇವೆಯನ್ನು ಪಡೆಯಬೇಕಾದರೆ ಇಂತಿಷ್ಟು ಹಣವನ್ನು ಪಾವತಿಸಿಬೇಕಾದ ಅನಿವಾರ್ಯತೆ ಇರುತ್ತದೆ, ಕೆಲವೊಮ್ಮೆ ಜಾಹೀರಾತು ಇಲ್ಲದ ಸೇವೆಗಳಿಗೂ ಹಣ ನೀಡಬೇಕಾಗುವುದು.

ಪ್ರತಿಯೊಂದು ಒಟಿಟಿ ಕೂಡ ವಿಭಿನ್ನ ಮತ್ತು ವಿಶೇಷತೆಗಳನ್ನು ಹೊಂದಿದೆ. HD ಗುಣಮಟ್ಟದ ವಿಡಿಯೋ ನೀಡುತ್ತದೆ. ಶೇರ್ ಅಕೌಂಟ್ ಆಯ್ಕೆಗಳು ಕೂಡ ಇರುತ್ತದೆ. ಅಂದರೇ ಒಬ್ಬರು ಸಬ್ ಸ್ಕ್ರೈಬ್ ಮಾಡಿದರೆ, ಅದನ್ನು ಸ್ನೇಹಿತರಿಗೂ ಹಂಚಬಹುದು.  ಹಾಗಾಗಿ ಎಲ್ಲಾ ಒಟಿಟಿಗಳು ಕೂಡ ಉತ್ತಮ ಆದಾಯ ಗಳಿಸುತ್ತಿದೆ ಎನ್ನಬಹುದು.

ಇವುಗಳು ಕೋಟಿಗಟ್ಟಲೇ ಖರ್ಚುಮಾಡಿ ಸಿನಿಮಾಗಳು ಮತ್ತುಇತರ ಕಾರ್ಯಕ್ರಮಗಳ ರೈಟ್ಸ್ ಗಳನ್ನು ಕೊಂಡುಕೊಳ್ಳುತ್ತದೆ.  ಮಾತ್ರವಲ್ಲದೆ ಇತರ ಪ್ರೊಡಕ್ಷನ್  ಹೌಸ್ ಗಳ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತವೆ. ನೆಟ್ ಫ್ಲಿಕ್ಸ್ ಸ್ಥಳೀಯ ವಿಷಯಗಳನ್ನು ನೀಡಲು ಸಾವಿರಾರು ಕೋಟಿ ಹಣ ವೆಚ್ಚ ಮಾಡುತ್ತಿದೆ. ಬಳಕೆದಾರರು ಒಂದು ವರ್ಷದ ಚಂದಾದಾರಿಕೆ ಮೂಲಕ  ಒಬ್ಬೊಬ್ಬರು ಸಾವಿರಾರು ರೂ.ಗಳನ್ನು ನೀಡಿದರೂ ಕೋಟ್ಯಾಂತರ ರೂಪಾಯಿಗಳನ್ನು ಆದಾಯವಾಗಿ ಒಟಿಟಿಗಳು ಗಳಿಸುತ್ತಿದೆ. ಭಾರತದಲ್ಲಿ ಒಟಿಟಿ ಉದ್ಯಮ 2025 ಹೊತ್ತಿಗೆ 29.80 ಸಾವಿರ ಕೋಟಿಯಷ್ಟು ದೊಡ್ಡ ಗಾತ್ರದ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ

ವಿಶೇಷತೆ: ಈ ಪ್ಲಾಟ್ ಫಾರ್ಮ್ ಗಳ ವಿಶೇಷತೆ ಏನೆಂದರೇ, ಇದು ಜನರಿಗೆ ಆಯ್ಕೆಯನ್ನು ನೀಡುತ್ತದೆ. ಇಲ್ಲಿ ಏನನ್ನು ನೋಡಬೇಕೆಂಬುದನ್ನು ಜನರೆ ನಿರ್ಧರಿಸಬಹುದು. ಪ್ರತಿಯೊಂದು ಕಂಟೆಂಟ್ ಗಳು ಕೂಡ ಹೊಸತು ಮತ್ತು ಮನರಂಜನಾತ್ಮಕವಾಗಿರುತ್ತದೆ. ಪ್ರಮುಖವಾಗಿ ಒಟಿಟಿಗಳು ಭವಿಷ್ಯವನ್ನು ಪ್ರತಿನಿಧಿಸುತ್ತದೆ. ಆದರು ಇಲ್ಲೊಂದು ಕೊರತೆಯನ್ನು ಅಥವಾ ಅಡಚಣೆಯನ್ನು ಗಮನಿಸಬಹುದು. ಎಲ್ಲಾ ಒಟಿಟಿಗಳು ಅತ್ಯುತ್ತಮ  ಮನರಂಜನೆ ನೀಡುತ್ತಿರುವುದರಿಂದ ಬಳಕೆದಾರರಿಗೆ ಯಾವುದನ್ನು ಇನ್ ಸ್ಟಾಲ್ ಮಾಡಿ ಚಂದಾದಾರಿಕೆ ಪಡೆಯವುದು ಎಂಬ ಗೊಂದಲು ಕಾಡಬಹುದು. ಎಲ್ಲಾ ಒಟಿಟಿಗಳ ಚಂದಾದಾರಿಕೆ ಪಡೆಯುವುದು ಮಾತ್ರ ತೀರಾ ದುಬಾರಿಯಾಗುತ್ತದೆ.

-ಮಿಥುನ್ ಮೊಗೇರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next