Advertisement
ನಕಲಿ ದಾಖಲೆಗಳನ್ನು ಸಲ್ಲಿಸಿ ಆಸ್ತಿಗಳನ್ನು ಮಾರಾಟ ಮಾಡುವುದಕ್ಕೆ “ಬ್ರೇಕ್’ ಹಾಕಲು ಆಸ್ತಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ವೆಬ್ಸೈಟ್ನಲ್ಲಿಅಪ್ಲೋಡ್ ಮಾಡಿದ ಬಳಿಕವಷ್ಟೇ ಆಸ್ತಿ ನೋಂದಣಿ ಯಾಗುವ ವ್ಯವಸ್ಥೆಯನ್ನು ಕಡ್ಡಾಯಗೊಳಿ ಸಲು ಸಜ್ಜಾಗಿದ್ದು , ಆ ಮೂಲಕ ದಾಖಲೆಗಳ ದೃಢೀಕರಣಕ್ಕೆ ಒತ್ತು ನೀಡಲು ಮುಂದಾಗಿದೆ.
ಅಕ್ರಮವಾಗಿ ಆಸ್ತಿ ಮಾರಾಟಕ್ಕೆ ಕಡಿವಾಣ ಹಾಕಲು ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಖಾತರಿ ವ್ಯವಸ್ಥೆ ತರಲು ಚಿಂತಿಸಿದೆ. ಈ ವ್ಯವಸ್ಥೆಯಲ್ಲಿ ಮಾರಾಟಗಾರರು ಹಾಗೂ ಖರೀದಿದಾರರಿಗೆ ಆಸ್ತಿ ನೋಂದಣಿ ಪ್ರಕ್ರಿಯೆ ಸಂದರ್ಭದಲ್ಲಿ “ಒಟಿಪಿ’ ಸಂದೇಶ ರವಾನೆಯಾಗುತ್ತದೆ. ಆ ಒಟಿಪಿ ಸಂಖ್ಯೆಯನ್ನು ಉಪ ನೋಂದಣಾಧಿಕಾರಿಗಳ ಮೂಲಕ ನಮೂದಿಸಿದರಷ್ಟೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದರಿಂದ ಅನಧಿಕೃತ ವ್ಯಕ್ತಿಗಳು ಅಕ್ರಮವಾಗಿ ಯಾರಧ್ದೋ ಆಸ್ತಿ ಮಾರಾಟ ಮಾಡುವು ದನ್ನು ತಪ್ಪಿಸಬಹುದು ಎಂಬುದು ಇಲಾಖೆಯ ವಿಶ್ವಾಸ.
Related Articles
ಆಸ್ತಿ ಮಾರಾಟಗಾರರು, ಖರೀದಿದಾರರಿಂದ ಒಟಿಪಿ ಖಾತರಿ ಹಾಗೂ ಆಸ್ತಿ ದಾಖಲೆಗಳ ಸ್ಕ್ಯಾನಿಂಗ್ ವ್ಯವಸ್ಥೆ ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಮೂರು ದಿನಗಳಿಂದ ಜಾರಿಯಾಗಿದೆ. ಈ ವ್ಯವಸ್ಥೆಯ ಸಾಧಕ- ಬಾಧಕ ಪರಿಶೀಲಿಸಿ ಪರಿಣಾಮಕಾರಿ ಎಂದು ಕಂಡುಬಂದರೆ ರಾಜ್ಯಾದ್ಯಂತ ವಿಸ್ತರಿಸಲು ಇಲಾಖೆ ಚಿಂತಿಸಿದೆ.
Advertisement
ದಾಖಲೆಗಳ ಸ್ಕ್ಯಾನಿಂಗ್ಸದ್ಯ ಆಸ್ತಿ ನೋಂದಣಿ ಸಂದರ್ಭದಲ್ಲಿ ಆಸ್ತಿಗೆ ಸಂಬಂಧ ಪಟ್ಟ ದಾಖಲೆಗಳನ್ನು ಉಪ ನೋಂದಣಾಧಿಕಾರಿ ಹಂತದಲ್ಲಿ ಪರಿಶೀಲನೆ ನಡೆಸಿ ಬಳಿಕ ನೋಂದಣಿ ಮಾಡುವ ವ್ಯವಸ್ಥೆ ಇದೆ. ಆದರೆ ನಕಲಿ ದಾಖಲೆಗಳನ್ನು ಸಲ್ಲಿಸಿ ಅಕ್ರಮವಾಗಿ ಆಸ್ತಿ ಪರಭಾರೆ ಮಾಡಿರುವ ಪ್ರಕರಣಗಳು ಸಾಕಷ್ಟಿವೆ. ಈ ಹಿನ್ನೆಲೆಯಲ್ಲಿ ನೋಂದಣಿ ಸಂದರ್ಭದಲ್ಲಿ ಆಸ್ತಿಗೆ ಸಂಬಂಧಪಟ್ಟಂತೆ ಹಕ್ಕುಪತ್ರ, ಆಸ್ತಿ ತೆರಿಗೆ ಪಾವತಿ ರಸೀದಿ ಸಹಿತ ದಾಖಲೆಗಳನ್ನು ಉಪ ನೋಂದ ಣಾಧಿಕಾರಿ ಹಂತದಲ್ಲೇ ಪರಿಶೀಲಿಸಿ ಅವುಗಳ ಸಾಚಾತನ ಖಾತರಿಪಡಿಸಿಕೊಂಡು ಸ್ಕ್ಯಾನಿಂಗ್ ಮಾಡಿ ಅಪ್‌ಲೋಡ್ ಮಾಡಲಾಗುತ್ತದೆ. ಅನಂತರ ವಷ್ಟೇ ಆಸ್ತಿ ನೋಂದಣಿಯಾಗಲಿದ್ದು, ದಾಖಲೆ ಗಳಿಗೆ ಸಂಬಂಧಪಟ್ಟಂತೆ ಅಕ್ರಮಗಳಿಗೆ ಅವಕಾಶ ವಿಲ್ಲದಂತಾಗ ಲಿದೆ ಎಂಬುದು ಇಲಾಖೆ ನಿರೀಕ್ಷೆ. ಆಸ್ತಿ ಮಾರಾಟ, ನೋಂದಣಿ ಪ್ರಕ್ರಿಯೆಯಲ್ಲಿನ ಅಕ್ರಮ ತಡೆಗೆ ಒಟಿಪಿ ಖಾತರಿ ಹಾಗೂ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ದಾಖಲಿಸುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ.
– ಡಾ| ಕೆ.ವಿ. ತ್ರಿಲೋಕ್‌ಚಂದ್ರ, ಮುದ್ರಾಂಕ ಮತ್ತು ನೋಂದಣಿ ಇಲಾಖೆ ಮಹಾನಿರೀಕ್ಷಕ - ಎಂ. ಕೀರ್ತಿಪ್ರಸಾದ್