Advertisement
ಕಾಪು: ಶಾಲಾ ವಿದ್ಯಾರ್ಥಿಗಳಿಗೆ, ಸರಕಾರದ ಸವಲತ್ತುಗಳನ್ನು ಪಡೆಯಲು ಬೇಕಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಈ ಕ್ಷಣ ಯೋಜನೆಯ ಮೂಲಕ ತತ್‌ಕ್ಷಣ ಮುದ್ರಿಸಿ ಕೊಡುವ ಓವರ್ ದಿ ಕೌಂಟರ್ (ಒಟಿಸಿ)ನಲ್ಲಿ ಬಾಕಿ ಇರುವ ಅರ್ಜಿಗಳನ್ನು ತುರ್ತು ವಿಲೇವಾರಿಗೆ ಕಾಪು ತಾಲೂಕು ಕಂದಾಯ ಅಧಿಕಾರಿಗಳು ರಜಾ ದಿನಗಳಲ್ಲೂ ಕೆಲಸ ಮಾಡಿದ್ದಾರೆ.
ಹೆಚ್ಚು ಎಂಟ್ರಿ
ಒಟಿಸಿ ಸೇವೆಗಾಗಿ 40,645 ಮಂದಿ ಡಾಟಾ ಎಂಟ್ರಿ ಮಾಡಿದ್ದು, ಅದರಲ್ಲಿ 16,000 ಅರ್ಜಿಗಳನ್ನು ಕಂದಾಯ ಇಲಾಖೆ ವಿಲೇವಾರಿ ಮಾಡಿದೆ. 24,000 ಅರ್ಜಿಗಳ ಪರಿಶೀಲನ ಕಾರ್ಯ ನಡೆಯುತ್ತಿದ್ದು, ವಿಲೇವಾರಿಗೆ ಬಾಕಿ ಉಳಿದಿದೆ. ಈ ಮೊದಲು ಅರ್ಜಿ ವಿಲೇವಾರಿಯಾಗದೆ ನಾಗರಿಕರು ಸಮಸ್ಯೆ ಎದುರಿಸುವಂತಾಗಿತ್ತು. ಸಮಸ್ಯೆಗೆ ಮುಕ್ತಿ ಕಲ್ಪಿಸಲು ಕಾಪು ತಹಶೀಲ್ದಾರ್ ಅವರ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ವಿವಿಧ ಗ್ರಾಮಗಳಲ್ಲಿ ರಜಾ ದಿನವೂ ಸೇವೆ ಸಲ್ಲಿಸುತ್ತಿದ್ದು, ವಾರದೊಳಗೆ ಪೂರ್ಣಗೊಳ್ಳುವ ಭರವಸೆ ಇದೆ. 1.50 ಲಕ್ಷ ಪ್ರಮಾಣ ಪತ್ರಗಳು ಅಮಾನ್ಯ
ಕಾಪು ತಾ. ಆಗಿ ರೂಪುಗೊಂಡಾಗ 1.50 ಲಕ್ಷದಷ್ಟು ಹಳೆ ಒಟಿಸಿ ಜಾತಿ – ಆದಾಯ ಪ್ರಮಾಣ ಪತ್ರಗಳು ಅಮಾನ್ಯಗೊಂಡಿದ್ದವು. ಕಾಪು ತಾಲೂಕಿನ ಜಾತಿ – ಆದಾಯ ಪ್ರಮಾಣ ಪತ್ರಗಳಿಗೆ ಉಡುಪಿ ತಹಶೀಲ್ದಾರ್ ಅವರ ಡಿಜಿಟಲ್ ಸಹಿ ಇದ್ದುದರಿಂದ ತಾಳೆಯಾಗದೆ ಜನರಿಗೆ ಸಮಸ್ಯೆಯಾಗಿತ್ತು. ಈಗ ಹೊಸ ಒಟಿಸಿ ಜಾತಿ – ಆದಾಯ ಪ್ರಮಾಣ ಪತ್ರದೊಂದಿಗೆ, ಹಿಂದಿನ ಪ್ರಮಾಣ ಪತ್ರಗಳಿಗೂ ಡಿಜಿಟಲ್ ಸಹಿ ಹಾಕಿ ಮರು ಮಾನ್ಯಗೊಳಿಸುವ ಕಾರ್ಯವೂ ಪ್ರಗತಿಯಲ್ಲಿದೆ.
Related Articles
ಒಟಿಸಿ ಮೂಲಕ ಗ್ರಾಮೀಣರಿಗೆ ಕ್ಷಣಮಾತ್ರದಲ್ಲಿ ಪ್ರಮಾಣ ಪತ್ರಗಳು ದೊರೆಯುತ್ತಿದ್ದವು. ಆದರೆ ಕಾಪು ತಾಲೂಕು ರಚನೆಯಾದ ಬಳಿಕ ತಂತ್ರಾಂಶದಲ್ಲಿ ವಿಂಗಡಣೆ ಮಾಡಲಾಗಿದ್ದು, ಈ ಸಂದರ್ಭ ಉಡುಪಿ ತಹಶೀಲ್ದಾರರ ಡಿಜಿಟಲ್ ಸಹಿಯಿದ್ದ ಒಟಿಸಿ ಜಾತಿ – ಆದಾಯ ಪ್ರಮಾಣ ಪತ್ರಗಳು ಅಮಾನ್ಯಗೊಂಡಿದ್ದವು. ಜತೆಗೆ ಚುನಾವಣೆ ಒತ್ತಡ, ಕರ್ತವ್ಯ ಒತ್ತಡ, ತಹಶೀಲ್ದಾರರರ ಬದಲಾವಣೆಗಳಿಂದಾಗಿ ಪ್ರಮಾಣ ಪತ್ರ ನೀಡುವುದು ಅಸಾಧ್ಯವಾಗಿತ್ತು. ಸದ್ಯ ಶಾಲಾರಂಭದ ದಿನಗಳಾಗಿರುವುದರಿಂದ ಒತ್ತಡ ಹೆಚ್ಚಿತ್ತು. ಈಗ ಗ್ರಾಮ ಕರಣಿಕರು ಡಿಜಿಟಲ್ ಸಹಿ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ.
Advertisement
ತುರ್ತು ಅಗತ್ಯಕ್ಕೆ ತಹಶೀಲ್ದಾರ್ ಕಚೇರಿಗೆ ಬನ್ನಿಕಾಪು ತಾಲೂಕಿನಲ್ಲಿ ವಿಲೇಗೆ ಬಾಕಿಯುಳಿದಿರುವ ಕಂದಾಯ ವಿಭಾಗಕ್ಕೆ ಸಂಬಂಧಪಟ್ಟ ವಿವಿಧ ಕೆಲಸಗಳನ್ನು ಆದ್ಯತೆಯ ಮೇರೆಗೆ ಒತ್ತು ಕೊಟ್ಟು ನಿರ್ವಹಿಸಲಾಗುತ್ತಿದೆ. ಒಟಿಸಿ ಈ ಕ್ಷಣ ಯೋಜನೆಯಲ್ಲಿ ಜಾತಿ – ಆದಾಯ ಪ್ರಮಾಣ ಪತ್ರವಿದ್ದು, ತಾಂತ್ರಿಕ ತೊಂದರೆಯಿಂದ ಮುದ್ರಿಸಲು ಅಸಾಧ್ಯವಾಗಿರುವವರು ತುರ್ತು ಅಗತ್ಯವಿದ್ದರೆ ಸೂಕ್ತ ದಾಖಲೆಗಳೊಂದಿಗೆ ತಹಶೀಲ್ದಾರರ ಕಚೇರಿ ಸಂಪರ್ಕಿಸಿದರೆ ತತ್‌ಕ್ಷಣ ಸ್ಪಂದಿಸಲಾಗುವುದು.
-ರಶ್ಮೀ ಎಸ್.ಆರ್., ಕಾಪು ತಹಶೀಲ್ದಾರ್ ಜನರ ಪರದಾಟ ತಪ್ಪಿಸಿ
ಪ್ರಮಾಣ ಪತ್ರಗಳು ಸಕಾಲದಲ್ಲಿ ದೊರೆಯದೆ ಸಾರ್ವಜನಿಕರು ಹೊಸ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿ, ದಿನಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಬಂದೊದಗಿದೆ. ಈ ನಿಟ್ಟಿನಲ್ಲಿ ಸರಕಾರ ಲಕ್ಷಾಂತರ ಒಟಿಸಿಗಳನ್ನು ಆಫ್‌ಲೈನ್ ವ್ಯವಸ್ಥೆಯಲ್ಲಿ ಮಾನ್ಯ ಮಾಡುವ ಪ್ರಯುಕ್ತ ನಡೆಸಿದಲ್ಲಿ ಶೀಘ್ರ ಸಮಸ್ಯೆಗೆ ಪರಿಹಾರ ದೊರೆಯಬಹುದು.
-ಸುಧಾಕರ ಪೂಜಾರಿ, ಮೂಡುಬೆಳ್ಳೆ – ರಾಕೇಶ್ ಕುಂಜೂರು