ಉಡುಪಿ: ದಕ್ಷಿಣ ಭಾರತದ ಮೂಳೆತಜ್ಞರ ಸಂಘದ ವಾರ್ಷಿಕ ಸಮಾವೇಶವನ್ನು (ಕಾನ್ಫರೆನ್ಸ್ ಆಫ್ ಆತೊìಪೆಡಿಕ್ ಅಸೋಸಿಯೇಶನ್ ಆಫ್ ಸೌತ್ ಇಂಡಿಯನ್ ಸ್ಟೇಟ್-ಒಯಸಿಸ್‌ಕಾನ್) ಶುಕ್ರವಾರ ಮಣಿಪಾಲ ಕೆಎಂಸಿಯ ಡಾ| ಟಿಎಂಎ ಪೈ ಸಭಾಂಗಣದಲ್ಲಿ ಮಣಿಪಾಲ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಉದ್ಘಾಟಿಸಿದರು.
ವೈದ್ಯರು ತಮ್ಮ ಕ್ಷೇತ್ರದಲ್ಲಾದ ಸುಧಾರಣೆಗಳನ್ನು ತಿಳಿದುಕೊಳ್ಳಲು ಇಂತಹ ಸಮಾವೇಶ ಸಹಕಾರಿ.
ಶೇ. 70ರಷ್ಟು ಜನರು ಇರುವ ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಿಸುವುದೇ ವೈದ್ಯರ ಮುಖ್ಯ ಗುರಿಯಾಗಿರಬೇಕು ಎಂದರು.
15 ವರ್ಷಗಳ ಹಿಂದೆ ಆರಂಭಗೊಂಡ ಒಯಸಿಸ್ ಶಿಕ್ಷಣ, ವೈದ್ಯಕೀಯ ಸೇವೆಯ ಬಗೆಗೆ ವಿವಿಧ ರೀತಿಯ ಕಾರ್ಯಾಗಾರಗಳು, ಸಿಎಂಇ, ವಿದ್ಯಾರ್ಥಿವೇತನವನ್ನು ನಿರ್ವಹಿಸು ತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಒಯಸಿಸ್ ಅಧ್ಯಕ್ಷ ಡಾ|ಸಿ.ಹನುಮಂತ ರಾವ್ ಹೇಳಿದರು.
ಗೌರವ ಅತಿಥಿಗಳಾಗಿ ಸಹ ಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಭಾಗವಹಿಸಿದ್ದರು. ರಾಜ್ಯ ಸಂಘದ ಅಧ್ಯಕ್ಷ ಡಾ| ಅಜಿತ್ ಕುಮಾರ್ ಎಂ. ಸ್ವಾಗತಿಸಿದರು. ಒಯಸಿಸ್ ನಿಯೋಜಿತ ಅಧ್ಯಕ್ಷ, ಸಮ್ಮೇಳನದ ಸಂಘಟನಾಧ್ಯಕ್ಷ ಡಾ| ಶರತ್ ಕೆ. ರಾವ್ ಅವರಿಗೆ ಡಾ| ಹನುಮಂತ ರಾವ್ ಅಧಿಕಾರ ಹಸ್ತಾಂತರಿಸಿದರು. ಸಂಘಟನ ಕಾರ್ಯದರ್ಶಿ ಡಾ| ಕಿರಣ್ ಕೆ.ವಿ. ಆಚಾರ್ಯ ವಂದಿಸಿದರು. ಕಾರ್ಯದರ್ಶಿ ಡಾ| ವಿಜಯ ಚಂದರ್ ರೆಡ್ಡಿ, ಉಪಾಧ್ಯಕ್ಷರಾದ ಕೇರಳದ ಡಾ| ಎ.ಎ.ಜಾನ್, ತಮಿಳುನಾಡಿನ ಡಾ| ಆರ್.ಸೆಲ್ವರಾಜ್, ಪುದು ಚೇರಿಯ ಡಾ| ಎಸ್.ಪಾಂಡ್ಯನ್, ತೆಲಂಗಾಣದ ಡಾ| ರಾಘವ ದತ್‌ಇದ್ದರು. ಹಿರಿಯ ಸದಸ್ಯರಾದ ಆಂಧ್ರಪ್ರದೇಶದ ಡಾ| ಎಂ. ರಾಮಮೋಹನ ರಾವ್, ಕರ್ನಾಟಕದ ಡಾ| ಪಿ.ಕೆ.ಉಸ್ಮಾನ್, ಕೇರಳದ ಡಾ| ಕೆ.ಶ್ರೀಧರನ್ ಪಿಳ್ಳೆ, ಪುದುಚೇರಿಯ ಡಾ| ಎಸ್. ಪಾಂಡ್ಯನ್, ತಮಿಳುನಾಡಿನ ಡಾ| ಎಂ.ಚಿದಂಬರಮ್, ತೆಲಂಗಾಣದ ಡಾ| ಸಿ. ರಘುರಾಮ್ ಅವರನ್ನು ಸಮ್ಮಾನಿಸಲಾಯಿತು.