Advertisement
ಇಷ್ಟು ದಿನ ಇದ್ಯಾವುದಕ್ಕೆ ನಿರ್ಬಂಧಗಳಿರಲಿಲ್ಲ ಸ್ಟೋರೇಜ್ ಗೆ ಅವಕಾಶವಿತ್ತು. ಇನ್ನು ಮುಂದೆ ಬ್ಯಾಕ್ ಅಪ್ ಆಗುವ ಫೋಟೋಸ್ ಮತ್ತು ವೀಡಿಯೋಸ್ ಗಳು 15 ಜಿಬಿ ಡೇಟಾ ಅವಕಾಶ ಹೊಂದಿರಬೇಕು. 15 ಜಿಬಿ ತುಂಬಿದ ನಂತರದ ಸೇವೆಯನ್ನು ಮುಂದುವರೆಸಲು ಹಣ ಪಾವತಿ ಮಾಡಬೇಕಾಗಿದೆ.
Related Articles
Advertisement
15 ಜಿಬಿ ಸ್ಟೋರೇಜ್ ಸ್ಪೇಸ್ ತುಂಬಿದರೆ ನಂತರ, ಮುಂದೆ ಯಾವುದೇ ಫೈಲ್ ಗೂಗಲ್ ಡ್ರೈವ್/ಫೋಟೋಸ್ ನಲ್ಲಿ ಬ್ಯಾಕ್ ಆಪ್ ಮಾಡಲಾಗುವುದಿಲ್ಲ. ಹೆಚ್ಚಿನ ಫೋಟೋ ಮತ್ತು ವಿಡಿಯೋಗಳನ್ನು ಗೂಗಲ್ ಫೋಟೋಸ್ ಅಕೌಂಟ್ಸ್ ನಲ್ಲಿ ಉಳಿಸಲಾಗುವುದಿಲ್ಲ. ಅದೇ ರೀತಿ ಜಿ-ಮೇಲ್ ಮೂಲಕ ಫೋಟೋಸ್ ಮತ್ತು ಸಂದೇಶಗಳು, ಫೋಟೋ ವಿಡಿಯೋಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲಾಗುವುದಿಲ್ಲ.
15 ಜಿಬಿ ತುಂಬಿದ ಬಳಿಕ ಗೂಗಲ್ ವನ್ ಗೆ ಸಬ್‌ಸ್ಕ್ರೈಬ್ ಮಾಡಿಕೊಂಡು ಹೆಚ್ಚಿನ ಸ್ಪೇಸ್ ಕೊಂಡುಕೊಳ್ಳಬಹುದು. ಐಒಎಸ್, ಆಂಡ್ರಾಯ್ಡ್ ಮತ್ತು ವಿಂಡೋಸ್ ಈ ಮೂರರಲ್ಲಿ ಯಾವುದಾದರೂ ಒಂದರ ಮೂಲಕ ಗೂಗಲ್ ಒನ ಪ್ಲ್ಯಾನ್ ಗೆ ಸಬ್ಸ್ ಕ್ರೈಬ್ ಮಾಡಬಹುದು.
ಗೂಗಲ್ ಒನಲ್ಲಿ ಮೂರು ವಿಧದ ಸೇವಾ ಶುಲ್ಕ ಗಳಿವೆ.
ತಿಂಗಳಿಗೆ 130 ರೂ ಪಾವತಿ ಮಾಡಿದರೆ 100 ಜಿಬಿ ಸ್ಟೋರೆಜ್ ಸ್ಪೇಸ್, ತಿಂಗಳಿಗೆ 210 ರೂ ಪಾವತಿ ಮಾಡಿದರೆ 100 ಜಿಬಿ ಸ್ಟೋರೆಜ್ ಸ್ಪೇಸ್ ಹಾಗೂ ತಿಂಗಳಿಗೆ 650 ರೂ ಪಾವತಿ ಮಾಡಿದ್ದಲ್ಲಿ 2 ಟಿಬಿ ಸ್ಟೋರೆಜ್ ಸ್ಪೇಸ್ ಸಿಗುತ್ತದೆ. ಒಂದು ಪ್ಲ್ಯಾನ್ ನನ್ನು 5 ಜನರೊಂದಿಗೆ ಹಂಚಿಕೊಳ್ಳಬಹುದಾಗಿರುವುದು ವಿಶೇಷ.