Advertisement

ಮೂಲ ಕಸ್ಟಮ್ಸ್‌ ಸುಂಕ-ಆರೋಗ್ಯ ಸೆಸ್‌ ಮನ್ನಾ ಸ್ವಾಗತಾರ್ಹ: ಜೋಶಿ

12:34 PM Apr 25, 2021 | Team Udayavani |

ಹುಬ್ಬಳ್ಳಿ: ಆಮ್ಲಜನಕ ಮತ್ತು ಆಮ್ಲಜನಕಕ್ಕೆ ಸಂಬಂ ಧಿಸಿದ ಉಪಕರಣಗಳ ಆಮದುಮೇಲಿನ ಮೂಲ ಕಸ್ಟಮ್ಸ್‌ ಸುಂಕ ಮತ್ತುಆರೋಗ್ಯ ಸೆಸ್‌ ಅನ್ನು ತಕ್ಷಣದಿಂದಲೇಜಾರಿಗೆ ಬರುವಂತೆ ಮೂರುತಿಂಗಳವರೆಗೆ ಮನ್ನಾ ಮಾಡುವನಿರ್ಧಾರವನ್ನು ಕೇಂದ್ರ ಸರಕಾರಕೈಗೊಂಡಿರುವುದು ಸ್ವಾಗತಾರ್ಹಕ್ರಮವಾಗಿದೆ ಎಂದು ಕೇಂದ್ರಸಂಸದೀಯ ವ್ಯವಹಾರಗಳು,ಕಲ್ಲಿದ್ದಲು ಮತ್ತು ಗಣಿ ಸಚಿವಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

Advertisement

ದೇಶದಲ್ಲಿ ಆಮ್ಲಜನಕ ಲಭ್ಯತೆಹೆಚ್ಚಿಸಲು ಕೈಗೊಂಡ ಕ್ರಮಗಳನ್ನುಪರಿಶೀಲಿಸಲು ಪ್ರಧಾನಿ ನರೇಂದ್ರಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದಉನ್ನತ ಮಟ್ಟದ ಸಭೆಯಲ್ಲಿ ಇಂತಹನಿರ್ಧಾರ ಕೈಗೊಂಡಿರುವುದು ಉತ್ತಮ ನಡೆಯಾಗಿದೆ.

ಇಂತಹ ದಿಟ್ಟ ನಿರ್ಧಾರಕೈಗೊಂಡಿರುವ ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರನ್ನು ಅಭಿನಂದಿಸುವುದಾಗಿತಿಳಿಸಿದ್ದಾರೆ.

ದೇಶಾದ್ಯಂತ ಕೊರೊನಾ ಸೋಂಕುಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮ್ಲಜನಕಪೂರೈಕೆಯನ್ನು ಫೆಬ್ರವರಿಯಿಂದ ಏಪ್ರಿಲ್‌ವರೆಗೆ ನಾಲ್ಕು ಪಟ್ಟು ಹೆಚ್ಚಿಸಲಾಗಿದೆ.ಮೂಲಗಳ ಪ್ರಕಾರ ಫೆಬ್ರವರಿ ಕೊನೆವಾರದಲ್ಲಿ ದಿನಕ್ಕೆ 1,273 ಮೆಟ್ರಿಕ್‌ಟನ್‌ನಷ್ಟು ಆಮ್ಲಜನಕ ಅಗತ್ಯವಿತ್ತು.ಏ.17ರ ವೇಳೆಗೆ ದಿನಕ್ಕೆ 4,739 ಮೆಟ್ರಿಕ್‌ಟನ್‌ನಷ್ಟು ಬೇಕಾಗಿದೆ. ವೈದ್ಯಕೀಯಆಕ್ಸಿಜನ್‌ ಕೊರತೆ ಎದುರಾಗುತ್ತಿದ್ದು,ಈಗಾಗಲೇ ಕೇಂದ್ರ ಸರಕಾರ ಆಸ್ಪತ್ರೆಗಳಿಗೆಆಕ್ಸಿಜನ್‌ ಪೂರೈಕೆ ಹೆಚ್ಚಿಸುವುದಕ್ಕಾಗಿಕ್ರಮ ಕೈಗೊಂಡಿದೆ.

ಕೇಂದ್ರ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವಾಲಯ162 ಪ್ರಷರ್‌ ಸ್ವಿಂಗ್‌ ಆಡ್ಸಪ್ಷìನ್‌ಆಮ್ಲಜನಕ ಘಟಕಗಳನ್ನುಮಂಜೂರು ಮಾಡಿದೆ. ರಾಜ್ಯಕ್ಕೆಅಗತ್ಯವಿರುವಷ್ಟು ಪ್ರಮಾಣದಆಕ್ಸಿಜನ್‌ ಪೂರೈಸಲು ಪ್ರಧಾನಿನರೇಂದ್ರ ಮೋದಿ ಹಾಗೂಕೇಂದ್ರ ಗೃಹ ಸಚಿವ ಅಮಿತ್‌ ಶಾಅವರಿಗೆ ಈಗಾಗಲೇ ಕೋರಲಾಗಿದ್ದು,ಸಕಾರಾತ್ಮಕ ಸ್ಪಂದಿಸಿದ್ದಾರೆ.

Advertisement

ಗ್ರೀನ್‌ ಕಾರಿಡಾರ್‌ ಮೂಲಕರೈಲಿನಲ್ಲಿ ದೇಶದ ಮೂಲೆ ಮೂಲೆಗೂಆಕ್ಸಿಜನ್‌ ಪೂರೈಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಯಾವುದೇಕಾರಣಕ್ಕೂ ಕೊರತೆಯಾಗದಂತೆಆಮ್ಲಜನಕ ಉತ್ಪಾದನೆಯಾಗಬೇಕುಹಾಗೂ ಕೊರತೆ ಇಲ್ಲದ ರೀತಿಯಲ್ಲಿಪೂರೈಕೆಯಾಗಬೇಕು. ಬೆಂಗಳೂರುನಗರಕ್ಕೆ 3,200 ಆಮ್ಲಜನಕ ಸಿಲಿಂಡರ್‌ಬೇಡಿಕೆ ಇದ್ದು, ಅದಕ್ಕೆ ತಕ್ಕಂತೆ ಪೂರೈಕೆನಿಟ್ಟಿನಲ್ಲಿ ಉತ್ಪಾದಕರು-ಪೂರೈಕೆಸಂಸ್ಥೆಗಳಿಗೆ ಸೂಚಿಸಲಾಗಿದೆ.

ರಾಜ್ಯದಲ್ಲಿ ಆಕ್ಸಿಜನ್‌ ಕೊರತೆಯಿದೆಎಂದು ಯಾರೂ ಹೆದರುವ ಅಗತ್ಯವಿಲ್ಲ.ಸರಕಾರ ಸದಾ ಜನರೊಂದಿಗೆ ಇದೆ.ಅಗತ್ಯ ಪ್ರಮಾಣದ ಆಕ್ಸಿಜನ್‌ ಪೂರೈಕೆಮಾಡಲು ಪ್ರಧಾನಿ ಮೋದಿಯವರುಏರ್‌ಲಿಫ್ಟ್‌ ಮೂಲಕ ರಾಜ್ಯಗಳಿಗೆಸರಬರಾಜು ಮಾಡಲು ಕ್ರಮಕೈಗೊಂಡಿದ್ದಾರೆ ಎಂದು ಸಚಿವ ಜೋಶಿಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next