Advertisement

ಸಂಘಟಿತರಾಗಿ ಸೌಲಭ್ಯ ಪಡೆಯಿರಿ : ಎಂ.ರೇಣುಕಾ

09:07 AM Jan 16, 2019 | |

ಕಂಪ್ಲಿ: ಭೋವಿ ಸಮುದಾಯದವರು ಸಂಘಟಿತರಾಗಿ, ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವ ಮೂಲಕ ಅಭಿವೃದ್ಧಿಯತ್ತ ಸಾಗಬೇಕು ಎಂದು ತಹಶೀಲ್ದಾರ್‌ ಎಂ.ರೇಣುಕಾ ಸಲಹೆ ನೀಡಿದರು.

Advertisement

ಪಟ್ಟಣದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ 847ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕ ಕಲ್ಯಾಣ, ಸಮಾಜ ಸುಧಾರಣೆಗೆ ವಿಶೇಷ ಕೊಡುಗೆ ನೀಡಿದ ಶರಣರಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಅವರ ಪಾತ್ರ ದೊಡ್ಡದಾಗಿದೆ. ಭೋವಿ ಸಮುದಾಯದವ‌ರು ಶಿಕ್ಷಣ ರಂಗದಲ್ಲಿ ಸಾಧನೆ ಮಾಡುವ ಮೂಲಕ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಹೊಂದಬೇಕು ಎಂದರು.

ಕಂಪ್ಲಿ ಫಿರ್ಕಾ ಭೋವಿ ಸಮಾಜದ ಅಧ್ಯಕ್ಷ ಶಾಮಿಲ್‌ ವಿ.ಶೇಖಪ್ಪ ಮಾತನಾಡಿದರು. ಉಪ ತಹಶೀಲ್ದಾರ್‌ ಬಿ.ರವೀಂದ್ರಕುಮಾರ್‌, ಕಂದಾಯ ನಿರೀಕ್ಷಕ ಎಸ್‌.ಎಸ್‌.ತಂಗಡಗಿ, ಶಿರಸ್ತೇದಾರ ಎಸ್‌.ಶ್ರೀಧರ್‌, ಎಫ್‌ಡಿಸಿಗಳಾದ ಮಾಲತೇಶ್‌ ದೇಶಪಾಂಡೆ, ಬಸವರಾಜ, ವೀರಶೈವ ಸಂಘದ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಜಿ.ಜಿ.ಆನಂದಮೂರ್ತಿ, ಮುಖಂಡರಾದ ಬಿ.ಹುಲುಗಪ್ಪ, ತಿಪ್ಪೇಸ್ವಾಮಿ, ವಿ.ವೆಂಕಟೇಶ್‌, ವೆಂಕಟರಮಣ, ಮೌನೇಶ್‌, ವಿ.ಗೋವಿಂದರಾಜು, ಗುರ್ರಪ್ಪ, ಸತ್ಯಪ್ಪ, ವಿ.ಭೀಮಲಿಂಗ, ವಿ.ಬಿ.ನಾಗರಾಜ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next