ಮುದ್ದೇಬಿಹಾಳ: ಕಾರ್ಯಕರ್ತರು ಪ್ರತಿಫಲಾಪೇಕ್ಷೆಯಿಲ್ಲದೆ ಪಕ್ಷ ಸಂಘಟನೆಗಾಗಿ ಕೆಲಸ ಮಾಡಬೇಕು. ಖುರ್ಚಿಗಾಗಿ ಬಡಿದಾಡದೆ ಖುರ್ಚಿಯೇ ಹುಡುಕಿಕೊಂಡು ಬರುವಂಥ ಕಾರ್ಯಕರ್ತರಾಗಬೇಕು. ಬಿಜೆಪಿಯಲ್ಲಿ ಪದಾ ಧಿಕಾರಿ ಹುದ್ದೆ ಸಿಗಬೇಕಾದರೆ ನಮ್ಮ ಹಣೆಬರಹ ಚೆನ್ನಾಗಿರಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿಲ್ಪಾ ಕುದರಗೊಂಡ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಗ ಗಲ್ಲಿಗೇರುವಾಗ ?ಅಮ್ಮಾ ಎನ್ನಬೇಡ, ಭಾರತ್ ಮಾತಾಕೀ ಜೈ ಅನ್ನು? ಎಂದು ಕಲಿಸಿಕೊಟ್ಟ ಹುತಾತ್ಮ ಭಗತ್‌ಸಿಂಗ್‌ರ ತಾಯಿಯ ದೇಶಪ್ರೇಮ, ಆದರ್ಶ ಮಹಿಳೆಯರಿಗೆ ಮಾದರಿಯಾಗಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಮಹಿಳೆಯರಿಗೆ ಕೊಟ್ಟಿರುವ ಸೌಲಭ್ಯಗಳ ಪ್ರಚಾರ ಮಾಡಬೇಕು. ಪಕ್ಷ ಬಲಪಡಿಸುವುದು ಆದ್ಯ ಕರ್ತವ್ಯವಾಗಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾರತಿ ಭುಯ್ನಾರ ಮಾತನಾಡಿ, ಮಹಿಳೆಯರು ಹುದ್ದೆಗಾಗಿ ಬಡಿದಾಡದೆ ಉತ್ತಮ ಕೆಲಸ ಮಾಡಿದರೆ ಗೌರವ ತಾನಾಗೇ ಹುಡುಕಿಕೊಂಡು ಬರುತ್ತದೆ. ಬಿಜೆಪಿಯಲ್ಲಿ ಕೆಲಸ ಮಾಡುವುದು ದೇಶದ ಸೇವೆ ಇದ್ದಂತೆ. ಈ ಸೇವೆ ಬೆಲೆಕಟ್ಟಲಾರದಂಥದ್ದು. ನಿಸ್ವಾರ್ಥ ಸೇವೆ ಸಂಘಟನೆಗೆ ಬಲ ತಂದುಕೊಡುತ್ತದೆ.
ಪ್ರಧಾನಿ ನರೇಂದ್ರ ಮೋದೀಜಿಯವರು ದೇಶಕ್ಕಾಗಿ, ನಮಗಾಗಿ, ನಮ್ಮ ಮಕ್ಕಳಿಗಾಗಿ ಶ್ರಮಿಸುತ್ತಿದ್ದಾರೆ. ಬಿಜೆಪಿ ದೇಶಪ್ರೇಮದ ಪಕ್ಷ. ಇದರಲ್ಲಿ ಕೆಲಸ ಮಾಡಲು ಆನಂದಪಡಬೇಕು ಎಂದರು. ಬಿಜೆಪಿ ಹಿರಿಯ ಧುರೀಣ ಪ್ರಭು ಕಡಿ ಮಾತನಾಡಿ, ದೇಶಚಿಂತನೆ ರೂಢಿಸಿಕೊಳ್ಳುವುದರ ಜತೆಗೆ ದೇಶ ಮೊದಲು ಆಮೇಲೆ ನಾವು ಅನ್ನೋ ಭಾವನೆ ಹೊಂದಬೇಕು. ಪಕ್ಷ ಸಂಘಟನೆ ಸಮಯದಲ್ಲಿ ಎದುರಾಗುವ ನೋವು, ಅವಮಾನಗಳನ್ನು ಎದುರಿಸಬೇಕು. ಸಂಘಟನೆಯಲ್ಲಿ ತೊಡಗಿಸಿಕೊಂಡ ಮಹಿಳೆಯರ ಬಗ್ಗೆ ತೋರುವ ಉದಾಸೀನತೆ ಕಡೆಗಣಿಸಬೇಕು. ಮಹಿಳೆಯರು ಸಂಘಟನೆಗಿಳಿದರೆ ಕೆಟ್ಟದಾಗಿ ಮಾತನಾಡುವ ಜನರನ್ನು ನಿರ್ಲಕ್ಷಿಸಬೇಕು. ಇವೆರಡನ್ನೂ ಮೀರಿ ಬೆಳೆದರೆ ಟೀಕಿಸಿದವರೇ ಸ್ವಾಗತ ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು.
ಮನೆಬಿಟ್ಟು ಹೊರಗೆ ಬಾರದ ಮಹಿಳೆಯರು ಇವತ್ತು ಬಿಜೆಪಿಗೆ ಹೆಚ್ಚು ಪ್ರಭಾವಿತರಾಗಿ ಸ್ವಯಂಪ್ರೇರಣೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೆಮ್ಮೆ ಪಡುವಂಥದ್ದು ಎಂದರು. ಜಿಲ್ಲಾ ಉಪಾಧ್ಯಕ್ಷೆ ಸರಸ್ವತಿ ಪೀರಾಪುರ, ಜಿಲ್ಲಾ ಕಾರ್ಯದರ್ಶಿ ಕಾಶಿಬಾಯಿ ರಾಂಪೂರ, ಮುದ್ದೇಬಿಹಾಳ ಬಿಜೆಪಿ ಮಂಡಲ ಅಧ್ಯಕ್ಷ ಡಾ| ಪರಶುರಾಮ ಪವಾರ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಗೌರಮ್ಮ ಹುನಗುಂದ ಬಲದಿನ್ನಿ ಅವರು ಪಕ್ಷ ಸಂಘಟನೆ, ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಕುರಿತು ಮಾತನಾಡಿ, ಮನೆಯಲ್ಲಿ ಅಚ್ಚುಕಟ್ಟಾಗಿ ಸಂಸಾರ ಮಾಡುವುದು ಗೊತ್ತಿರುವ ಮಹಿಳೆ ಹೊರಗೆ ಬಂದು ಸಂಘಟನೆಗೆ ಮುಂದಾದಲ್ಲಿ ಹೆಚ್ಚು ಅಚ್ಚುಕಟ್ಟುತನ ಇರುತ್ತದೆ ಎಂದು ಪ್ರತಿಪಾದಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ವಿಜಯಲಕ್ಷ್ಮೀ ಕಾಸೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಬೇವೂರ, ತಾಲೂಕು ಮಹಿಳಾ ಮೊರ್ಚಾ ಉಪಾಧ್ಯಕ್ಷರಾದ ನೀಲಮ್ಮ ಚಲವಾದಿ, ಕಾಶೀಬಾಯಿ ಕೊಳ್ಳಿ, ತಾಲೂಕು ಕಾರ್ಯದರ್ಶಿಗಳಾದ ಹಣಮವ್ವ ನಾಯೊRàಡಿ, ರೇಣುಕಾ ಗಂಗನಗೌಡ, ಕಾರ್ಯಕಾರಿಣಿ ಸದಸ್ಯರಾದ ಕಲಾವತಿ ಬಡಿಗೇರ, ರಾಜೇಶ್ವರಿ ಅಕ್ಕಿಮಠ, ಬಿಜೆಪಿ ಕಾರ್ಯದರ್ಶಿ ಮಂಜು ರತ್ನಾಕರ, ಯುವ ಮೋರ್ಚಾ ಅಧ್ಯಕ್ಷ ಪುನೀತ್ ಹಿಪ್ಪರಗಿ, ನಗರ ಮೋರ್ಚಾ ಅಧ್ಯಕ್ಷ ರಾಜು ಬಳ್ಳೊಳ್ಳಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕಾಶಿನಕುಂಟಿ, ಕಾಶಿನಾಥ ಅರಳಿಚಂಡಿ ಮತ್ತಿತರರು ಉಪಸ್ಥಿತರಿದ್ದರು. ಭಾರತ ಮಾತೆ, ಬಿಜೆಪಿ ಸಂಸ್ಥಾಪಕರ ಭಾವಚಿತ್ರಗಳಿಗೆ ದೀಪ ಬೆಳಗಿಸಿ, ಪುಷ್ಪಾರ್ಪಣೆ ಮೂಲಕ ಕಾರ್ಯಕಾರಿಣಿಗೆ ಚಾಲನೆ ನೀಡಲಾಯಿತು. ಮಹಿಳಾ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ನರಸಮ್ಮ ಗುಬಚಿ ಸ್ವಾಗತಿಸಿದರು. ಅಧ್ಯಕ್ಷೆ ಗೌರಮ್ಮ ಹುನಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಗಂಗಾ ತೋಟದ ನಿರೂಪಿಸಿದರು. ಉಪಾಧ್ಯಕ್ಷೆ ರೇಣುಕಾ ಹಳ್ಳೂರ ವಂದಿಸಿದರು.