ಜಮಖಂಡಿ: ಶಿವಸಿಂಪಿ ಸಮಾಜ ಚಿಕ್ಕದಾದರೂ ಸಂಸ್ಕೃತಿ ಆಚರಣೆಯಲ್ಲಿ ದೊಡ್ಡದಾಗಿದೆ. ಸಮಾಜದ ಬೆಳವಣಿಗೆಯಲ್ಲಿ ಸಂಘಟನೆ ಪಾತ್ರ ದೊಡ್ಡದಾಗಿದೆ. ಪ್ರತಿಯೊಬ್ಬರು ಸಂಘಟನೆಯಲ್ಲಿ ತೊಡಗಿ ಅಭಿವೃದ್ಧಿಯತ್ತ ಸಾಗಬೇಕೆಂದು ಕಾಂಗ್ರೆಸ್ ಧುರೀಣ ಆನಂದ ನ್ಯಾಮಗೌಡ ಹೇಳಿದರು.
ಎಸ್‌ಆರ್‌ಎ ಕ್ಲಬ್ ಸಭಾಭವನದಲ್ಲಿ ರವಿವಾರ ಶಿವಸಿಂಪಿ ಸಮಾಜ ಕಲ್ಯಾಣ ಸಂಘ ಹಮ್ಮಿಕೊಂಡಿದ್ದ 33ನೇ ವರ್ಷದ ಸರ್ವ ಸಾಧಾರಣ ಸಭೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜೀವಮಾನ ಸಾಧನೆ ಕಾಯಕಯೋಗಿ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದಿ.ಸಿದ್ದು ನ್ಯಾಮಗೌಡರಿಗೆ ಸಮಾಜದ ಬಗ್ಗೆ ಅಪಾರ ಮೆಚ್ಚುಗೆ ಇತ್ತು. ಶಾಸಕರ ಅನುದಾನದಲ್ಲಿ 12 ಲಕ್ಷ ರೂ. ಅನುದಾನ ನೀಡಿದ್ದರು. ನ್ಯಾಮಗೌಡರ ಕುಟುಂಬ ಶಿವಸಿಂಪಿ ಸಮಾಜದ ಅಭಿವೃದ್ಧಿಯಲ್ಲಿ ತಾವು ಕೈಜೋಡಿಸುವುದಾಗಿ ಭರವಸೆ ನೀಡಿದೆ ಎಂದರು.
ಶಿವದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಕಾಯಕವೇ ಶಿವಸಿಂಪಿ ಸಮಾಜದ ಉಸಿರಾಗಿದ್ದು, ಕಾಯಕದೊಂದಿಗೆ ಸಂಸ್ಕೃತಿ ಹೊಂದಿದ ಸಮಾಜವಾಗಿದೆ. ಸಣ್ಣ ಸಮಾಜವಾದರೂ ಸಾಮಾಜಿಕ, ರಾಜಕೀಯ ಕ್ಷೇತ್ರ ಹಾಗೂ ಎಲ್ಲ ಸಮುದಾಯಗಳೊಂದಿಗೆ ಗುರುತಿಸಿಕೊಂಡಿದ್ದ ಉತ್ತಮ ಬೆಳವಣಿಗೆ. ಜಿಲ್ಲೆಯಲ್ಲಿ 4 ಜನರು ನಗರಸಭೆಗಳಿಗೆ ಚುನಾಯಿತ ಸದಸ್ಯರಾಗಿದ್ದು ಹೆಮ್ಮೆಯ ಸಂಗತಿ. ಜನರೊಂದಿಗೆ ಬೆರತಾಗ ಮಾತ್ರ ಸಮುದಾಯಗಳಿಗೆ ಹೆಚ್ಚಿನ ಮಾನ್ಯತೆ ಲಭಿಸಲಿದೆ. ಅದರಲ್ಲಿ ಶಿವಸಿಂಪಿ ಸಮಾಜ ಮೂಂಚೂಣಿಯಲ್ಲಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಎಂ. ಹಟ್ಟಿ, ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿದರು. ಶಿವಶಿಂಪಿ ಸಮಾಜದ ಅಧ್ಯಕ್ಷ ಮಲ್ಲೇಶ ಆಳಗಿ ಅಧ್ಯಕ್ಷತೆ ವಹಿಸಿದ್ದರು. ಬಾಳಪ್ಪ ಮಮದಾಪುರ, ವಿನೋದ ಲೋಣಿ, ರಬಕವಿ-ಬನಹಟ್ಟಿ ನಗರಸಭೆ ಸದಸ್ಯರಾದ ಪ್ರಭಾಕರ ಮೋಳೆದ, ವಿಶ್ವನಾಥ ಪ್ರಕಾಶ, ಕೆರೂರ ಪಪಂ ಸದಸ್ಯ ವಿಜಯಕುಮಾರ ಐಹೊಳ್ಳಿ ಇದ್ದರು. ಇದೇ ಸಂದರ್ಭದಲ್ಲಿ ಸಿ.ಎಂ. ಚನ್ನಿ ದಂಪತಿಗೆ ಜೀವಮಾನ ಸಾಧನೆ ಕಾಯಕಯೋಗಿ ಪ್ರಶಸ್ತಿ ಪತ್ರ ನೀಡುವ ಮೂಲಕ ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಪ್ರಸಕ್ತ ಸಂಘ-ಸಂಸ್ಥೆಗಳಿಗೆ ಚುನಾಯಿತರಾದ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು.
ಅಕ್ಷತಾ ಶಿವಣಗಿ, ಲಕ್ಷ್ಮೀ ಶಿವಸಿಂಪಿ, ಲಕ್ಷ್ಮೀ ಅರಬಳ್ಳಿ, ವೈಷ್ಣವಿ ಲೋಣಿ ಪ್ರಾರ್ಥಿಸಿದರು. ಶಿಕ್ಷಕ ಶಶಿಧರ ಕಡೆಬಾಗಿಲ ಸ್ವಾಗತಿಸಿದರು. ಪ್ರಾಚಾರ್ಯ ಎನ್.ವಿ. ಅಸ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಮಲ್ಲಿಕಾರ್ಜುನ ಮಮದಾಪುರ, ಶಿವಕುಮಾರ ಅರಬಳ್ಳಿ ನಿರೂಪಿಸಿದರು. ಕಾರ್ಯದರ್ಶಿ ನಿರೂಪಾದಿ ಶಿವಸಿಂಪಿ ವಂದಿಸಿದರು.