ಚಿಂಚೋಳಿ: ಮೀಸಲು ಮತಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಯುವ ಕಾರ್ಯಕರ್ತರು, ಹಿರಿಯರು ಪಕ್ಷದ ಸಂಘಟನೆಯಲ್ಲಿ ತೊಡಗಬೇಕು ಎಂದು ಕಾಂಗ್ರೆಸ್ ಮುಖಂಡ ಸುಭಾಷ ರಾಠೊಡ ಹೇಳಿದರು.
ತಾಲೂಕಿನ ಸೇರಿ ಬಡಾ ತಾಂಡಾದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು,ದೇಶದಲ್ಲಿ ಕಾಂಗ್ರೆಸ್ ಇತಿಹಾಸ ಹೊಂದಿರುವ ಪಕ್ಷವಾಗಿದೆ. ಅನೇಕರು ತ್ಯಾಗ, ಬಲಿದಾನ ಮಾಡಿದ ಪಕ್ಷವಾಗಿರುವುದರಿಂದ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕಾಗಿದೆ. ಯುವಕರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಹಿರಿಯರ ನವೀಕರಣ ಮಾಡಲಾಗುತ್ತಿದೆ ಎಂದರು.
ತಾಲೂಕಿನಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಜನರಿಗೆ ಕಿರುಕುಳ ಹೆಚ್ಚಾಗಿದೆ. ಪೊಲೀಸರ ದಂಡ ವಸೂಲಿಯಿಂದ ಜನರು ವಾಹನ ತೆಗೆದುಕೊಂಡು ರಸ್ತೆ ಮೇಲೆ ತಿರುಗಾಡುವುದೇ ಕಷ್ಟದಾಯಕವಾಗಿದೆ. ಶಾಸಕರ ಕಾರ್ಯವೈಖರಿಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೀಸಲು ಚಿಂಚೋಳಿ ಮತಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಭದ್ರಕೋಟೆಯನ್ನಾಗಿ ಮಾಡಬೇಕಾಗಿದೆ. ಕಲಬುರಗಿ-ಯಾದಗಿರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಅವರಿಗೆ ಚಿಂಚೋಳಿ ಮತಕ್ಷೇತ್ರದಿಂದ ಹೆಚ್ಚು ಲೀಡ್ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದರು.
ಸೇರಿಬಡಾ ತಾಂಡಾ, ಕಾಳಗಿ, ಸಾಲಹಳ್ಳಿ, ಕೊಡದೂರ, ಹಲಚೇರಾ, ಚಿಂಚೋಳಿ ತಾಲೂಕಿನಲ್ಲಿ ಐನೋಳಿ, ಚಂದಾಪುರ, ಮಿರಿಯಾಣ, ಹಸರಗುಂಡಗಿಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಚಾಲನೆ ಕಾರ್ಯಕ್ರಮ ನಡೆದವು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಿಗೋಪಾಲರಾವ್ ಕಟ್ಟಿಮನಿ, ಶಬ್ಬೀರ ಅಹೆಮದ್, ಅಬ್ದುಲ್ ಬಾಸಿತ್, ನಾಗೇಶ ಗುಣಾಜಿ, ಅಬ್ದುಲ್ ರವೂಫ್ ಮಿರಿಯಾಣ, ದೇವಲಾ ನಾಯಕ, ಶಬ್ಬೀರಮಿಯಾ, ಬಸವರಾಜ ಕೋಲಕುಂದಿ, ಅನಂತರೆಡ್ಡಿ ದೇಶಮುಖ, ಹಣಮಯ್ಯ ಗುತ್ತೇದಾರ, ಆನಂದ ಜಾಧವ, ರೇವಣಸಿದ್ಧಪ್ಪ, ಕೃಷ್ಣ, ಪ್ರಕಾಶ, ಬಸವರಾಜ, ಶಿವನಾಗಯ್ಯ ಸ್ವಾಮಿ, ಸಂಗಮೇಶರೆಡ್ಡಿ, ನೀಲಕಂಠರಾವ್ ಪಾಟೀಲ, ರಮೇಶ ಮೇಲಿನಕೇರಿ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು ಇನ್ನಿತರರಿದ್ದರು.