Advertisement

ಸ್ವಾವಲಂಬಿಗಳಾಗಿ ಬದುಕಲು ಹುಟ್ಟಿಕೊಂಡ ಸಂಸ್ಥೆ

11:16 AM Feb 27, 2020 | Team Udayavani |

ಹೈನುಗಾರರ ಅಭಿವೃದ್ಧಿಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸ್ಥಾಪಿತವಾದ ಉದಯನಗರದ ಹಾಲು ಉತ್ಪಾದಕರ ಸಹಕಾರ ಸಂಘ ಏರಿದ ಎತ್ತರ ಇತರ ಸಹಕಾರಿ ಸಂಘಗಳಿಗೆ ಮಾದರಿಯಾಗಿದ್ದಾರೆ.

Advertisement

ಮುದೂರು: ವಿದ್ಯುತ್‌ ದೀಪದ ಬೆಳಕು ಕಾಣದ ಕುಗ್ರಾಮವೆಂದು ಪರಿಗಣಿಸಲ್ಪಟ್ಟಿದ್ದ ಮುದೂರಿನ ಉದಯ
ನಗರದಲ್ಲಿ 35 ವರುಷಗಳ ಹಿಂದೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿ ಬೆಂಬಲಿಸಿ ಸ್ವಾವಲಂಬಿಗಳಾಗಿ ಬದುಕಲು ಮಾರ್ಗೋಪಾಯ ಹುಡುಕಿದ್ದ ಆ ಕಾಲ ಘಟ್ಟದ ಮಂದಿಗಳ ದೂರ ದೃಷ್ಟಿಯ ಯೋಜನೆ ಸಾಕಾರಗೊಂಡು ಯಶಸ್ಸಿನ ಮೆಟ್ಟಲೇರಿರು ವುದು ಅಲ್ಲಿನ ಜನರ ಬದುಕಿಗೊಂದು ಹೊಸ ಆಯಾಮ ಸೃಷ್ಟಿಸಿದೆ.

ಉದಯನಗರದ ಹಾಲು ಉತ್ಪಾದಕರ ಸಹಕಾರ ಸಂಘವು 1985 ರಲ್ಲಿ ಆರಂಭಗೊಂಡಿತ್ತು. ಮುದೂರಿನ ಸೆ„ಂಟ್‌ ಮೇರಿ ಚರ್ಚಿನ ಧರ್ಮಗುರುಗಳಾದ ಫಾ| ಜಾರ್ಜ್‌ ಅವರು ಅಲ್ಲಿನ ನಿವಾಸಿಗಳನ್ನು ಸಂಘಟಿಸಿ ಸಂಘದ ಸ್ಥಾಪನೆಗೆ ಬಹಳಷ್ಟು ಶ್ರಮಿಸಿದ್ದರು. ಚರ್ಚಿನ ವಠಾದಲ್ಲಿ ಉಚಿತ ಕೊಠಡಿ ಒದಗಿಸಿದ್ದರು. ಸಾರಿಗೆ ಸೌಲಭ್ಯ ವಿರಳವಾಗಿದ್ದ ಅಂದಿನ ಆ ದಿನಗಳಲ್ಲಿ ಸಂಘದಲ್ಲಿ ಸಂಗ್ರಹಿಸಲಾದ ಹಾಲನ್ನು
ಸುಮಾರು 10-12 ಕಿ.ಮೀ. ದೂರದವರೆಗೆ ತಲೆಯಲ್ಲಿ ಹೊತ್ತು ಸಾಗಿ ಅಲ್ಲಿಗೆ ಆಗಮಿ ಸುವ ಹಾಲಿನ ವಾಹನಕ್ಕೆ ಮುಟ್ಟಿಸಬೇಕಾದ ಪರಿಸ್ಥಿತಿಇತ್ತು. ಎಲ್ಲಾ ಸಮಸ್ಯೆಗಳ ನಡುವೆ ಸಂಘದಿಂದಲೇ ವಾಹನ ವ್ಯವಸ್ಥೆ ಮಾಡಲಾಯಿತು. 2007 ರಲ್ಲಿ ಸ್ವಂತ ಜಾಗವನ್ನು ಖರೀದಿಸಿ ಕಟ್ಟಡ ನಿರ್ಮಿಸಲಾಗಿದೆ. ಸದಸ್ಯರ ಅನುಕೂಲಕ್ಕಾಗಿ ಸೂಲಾಬೇರು ಹಾಗೂ ಮೈದಾನದಲ್ಲಿ ಪ್ರತ್ಯೇಕ ಶಾಖೆ ತೆರೆಯಲಾಗಿದೆ.

ಹಾಲು ಸಂಗ್ರಹಣೆ
ಈ ಪ್ರದೇಶವು ಮಿಶ್ರ ತಳಿ ಜಾನುವಾರು ಗಳಿಗೆ ಹೆಸರುವಾಸಿ. ಇದೊಂದು ಕೃಷಿ ಆಶ್ರಿತ ಪ್ರದೇಶ ವಾಗಿದ್ದು ಬಹುತೇಕ ಮಂದಿ ಜೀವನೋಪಾಯಕ್ಕೆ ಹೆ„ನುಗಾರಿಕೆಯನ್ನು ಅವಲಂಬಿಸಿದ್ದಾರೆ.

ಅತ್ಯುತ್ತಮ ಸಂಘವೆಂಬ ಬಿರುದು
ಉತ್ತಮ ಕಾರ್ಯನಿರ್ವಹಣೆಯಿಂದ 2007-2008 ಹಾಗೂ 2012-2013 ರ ಸಾಲಿನಲ್ಲಿ 2 ಬಾರಿ ತಾಲೂಕಿನ ಅತ್ಯುತ್ತಮ ಸಂಘವೆಂಬ ಹಿರಿಮೆಗೆ ಪಾತ್ರವಾಗಿದೆ.

Advertisement

ಇಂದಿನ ಸ್ಥಿತಿಗತಿ
ಆರಂಭದಲ್ಲಿ 185 ಸದಸ್ಯರನ್ನು ಹೊಂದಿದ್ದ ಸಂಘವು ಪ್ರಸ್ತುತ 376 ಸದಸ್ಯರನ್ನು ಹೊಂದಿದೆ. ಆರಂಭದ ದಿನಗಳಲ್ಲಿ ಕೇವಲ 50-60 ಲೀ. ಹಾಲು ಸಂಗ್ರಹಿಸಲಾಗುತ್ತಿತ್ತು. ಇದೀಗ
1200 ಲೀ. ಹಾಲು ಸಂಗ್ರಹವಾಗುತ್ತಿದೆ.

ಅನುದಾನ
ದ.ಕ.ಹಾಲು ಒಕ್ಕೂಟದಿಂದ ಹೈನುಗಾರಿಗಾಗಿ ರೂಪಿಸಲ್ಪಟ್ಟ ಯೋಜನೆ ಗಳಲ್ಲಿ ಅತಿ ಹೆಚ್ಚಿನ ಅನುದಾನ ಸದಸ್ಯ ರಿಗೆ ತಲುಪಿಸಿದ ಕೀರ್ತಿ ಈ ಸಂಘಕ್ಕಿದೆ. ಇದರಲ್ಲಿ ಮುಖ್ಯವಾಗಿ 57 ಗೋಬರ್‌ ಗ್ಯಾಸ್‌ ಘಟಕ, ಹಾಗೂ 23 ಅಜೋಲ ತೊಟ್ಟಿಗಳಿಗೆ ಅನುದಾನವನ್ನು ಒದಗಿಸಲಾಗಿದೆ.

35 ವರ್ಷಗಳ ಕಾಲ
ಹಾಲು ಉತ್ಪಾದಕರ ಸಂಘ ನಡೆಸಿಕೊಂಡು ಬಂದಿರುವ ಉದಯನಗರದ ನಿವಾಸಿಗಳ ಪರಿಶ್ರಮದಿಂದ ಇಂದು ಹೆ„ನುಗಾರಿಗೆ ಅನೇಕ ಅನುಕೂಲತೆ ಕಲ್ಪಿಸಲು ಸಾಧ್ಯವಾಗಿದೆ.
-ಶೈಜನ್‌ ದೇವಸ್ಯ, ಅಧ್ಯಕ್ಷರು

ಅಧ್ಯಕ್ಷರು:
ಮಾಜಿ ಅಧ್ಯಕ್ಷರು : ಎಂ.ಸಿ.ಮಾಥಚ್ಚನ್‌, ಕೆ.ಪಿ.ಕುಂಞ, ಎಂ.ಸಿ.ಪ್ರಕಾಶ್‌, ವರ್ಗೀಸ್‌ ಅಲಿಂಗಲ್‌, ಜೋಸೆಫ್‌ ಪಿ.ಫಿ., ಪ್ರಸಾದ್‌ ಪಿ.ಕೆ., ಶೆ„ಜನ್‌ ದೇವಸ್ಯ ( ಹಾಲಿ )

ಕಾರ್ಯದರ್ಶಿಗಳು:
ಜೋಯಿ ವಿ.ಟಿ., ಸೆ„ಮನ್‌ ಮ್ಯಾಥ್ಯೂ, ರಂಜಿತ್‌ ಎಂ.ವಿ., ಶೆ„ಜು ಯು. (ಹಾಲಿ)

  ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next