Advertisement

ಜಲಂಚಾರು: ಬ್ರಹ್ಮಕಲಶೋತ್ಸವದ ಅನ್ನದಾಸೋಹಕ್ಕೆ ಸಾವಯವ ತರಕಾರಿ

12:51 AM Apr 26, 2019 | sudhir |

ಕಾಪು: ಜಲಂಚಾರು ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನದ ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಅನ್ನಸಂತರ್ಪಣೆಗೆ ಉಪಯೋಗವಾಗುವಂತೆ ಜಲಂಚಾರು ಬಿತ್ತಿಲ್‌ ಭಕ್ತ ವೃಂದದ ನೇತೃತ್ವದಲ್ಲಿ ಕೈ ತೋಟದ ಸಾವಯವ ತರಕಾರಿ ಬೆಳೆ ಬೆಳೆಸಲಾಗಿದ್ದು ಸಮರ್ಪಣೆಗೆ ಗ್ರಾಮಸ್ಥರು ಸಿದ್ಧತೆ ನಡೆಸಿದ್ದಾರೆ.

Advertisement

ಜಲಂಚಾರು ದೇವಸ್ಥಾನ ಸಮೀಪದ ನಿವಾಸಿಗಳಾಗಿರುವ ಪಾದೂರು ಸುಬ್ರಹ್ಮಣ್ಯ ಐತಾಳ್‌ ಮತ್ತು ಪಾದೂರು ಹರಿಕೃಷ್ಣ ಐತಾಳ್‌ ಅವರು ತಮ್ಮ ಸುಮಾರು 70 ಸೆಂಟ್ಸ್‌ ಜಮೀನಿನಲ್ಲಿ 75 ಸಾವಿರ ರೂ. ಮೌಲ್ಯದ ವಿವಿಧ ಸಾವಯವ ತರಕಾರಿಯನ್ನು ಬೆಳೆಸಿದ್ದಾರೆ. ಅದನ್ನು ಸಾಮೂಹಿಕವಾಗಿ ಕೊಯ್ಲು ನಡೆಸಿದ್ದು ಎ. 24ರಂದು ನಡೆಯಲಿರುವ ಹೊರೆಕಾಣಿಕೆ ಮೆರವಣಿಗೆಯ ಸಂದರ್ಭದಲ್ಲಿ ದೇಗುಲಕ್ಕೆ ತಂದು ಸಮರ್ಪಿಸ ಲಾಯಿತು.

ಜಲಂಚಾರು ದೇವಸ್ಥಾನದಲ್ಲಿ ಮೇ 2ರ ವರೆಗೆ ಶಿಲಾಮಯ ದೇಗುಲ ಸಮರ್ಪಣೆ, ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶ ನಡೆಯಲಿದೆ. ಇಲ್ಲಿ ಅಡುಗೆಗೆ ಬಳಸ ಲಾಗುವ ಮುಖ್ಯ ತರಕಾರಿಗಳಾದ ಕುಂಬಳ, ಸೌತೆ ಕಾಯಿಯನ್ನು ಸುಬ್ರಹ್ಮಣ್ಯ
ಐತಾಳ್‌, ಹರಿಕೃಷ್ಣ ಐತಾಳ್‌ ತಮ್ಮ ಭೂಮಿಯಲ್ಲಿ ನೆರೆಯವರ ಸಹಕಾರದಿಂದ ಬೆಳೆಸಿದ್ದಾರೆ.

ಏನೆಲ್ಲಾ ತರಕಾರಿ ಬೆಳೆಸಲಾಗಿದೆ
70 ಸೆಂಟ್ಸ್‌ ಜಮೀನಿನಲ್ಲಿ ಕೆಂಪು ಕುಂಬಳ, ಬೂದು ಕುಂಬಳ, ಸೌತೆ ಕಾಯಿ, ಬೆಂಡೆ, ಪಡುವಲೂ 100 ತುಳಸಿ ಗಿಡಗಳನ್ನು ಬೆಳೆಸಲಾಗಿದೆ. ಸಾವಯವ ಗೊಬ್ಬರ ಬಳಸಿ ಮಾಡಲಾಗಿರುವ ಕೃಷಿಯ ಮೂಲಕ 1,400 ಸೌತೆ ಕಾಯಿ, 250 ಕೆಂಪು ಗುಂಬಳ, 450 ಬೂದು ಕುಂಬಳ ಬೆಳೆದಿದ್ದು, ಬೆಂಡೆ ಕಾಯಿ ಮತ್ತು ಪಡುವಲಕಾಯಿ ಫಲ ನೀಡಲು ಆರಂಭಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next