Advertisement

“ಕಲಾ ಚಟುವಟಿಕೆಗಳಿಂದ ಸಾಂಘಿಕ ಬೆಳವಣಿಗೆ ಸಾಧ್ಯ’

12:35 AM Mar 02, 2019 | Team Udayavani |

ಮಲ್ಪೆ: ನಾಟಕ, ಯಕ್ಷಗಾನಗಳೆಲ್ಲ ಸಮೂಹ ಭಾವನೆಗಳನ್ನು ಮೂಡಿಸುವಂತದ್ದು. ಅದು ಆಶೋತ್ತರಗಳ ಈಡೇರಿಕೆಗೆ ಶ್ರದ್ಧೆಯ ಸಹಭಾಗಿತ್ವ ಒದಗಿಸುತ್ತದೆಂದು ರಂಗಕರ್ಮಿ ಗುರುಮೂರ್ತಿ ನೀನಾಸಂ ತಿಳಿಸಿದರು.

Advertisement

ಅವರು ಗುರುವಾರ ಉಡುಪಿ ಭುಜಂಗ ಪಾರ್ಕಿನ ಬಯಲು ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸಂಸ್ಕೃತಿ ನಿರ್ದೇಶನಾಲಯ ನವದೆಹಲಿ ಇದರ ಸಹಯೋಗದೊಂದಿಗೆ ಸುಮನಸಾ ಕೊಡವೂರು ಆಯೋಜಿಸಿದ ರಂಗಹಬ್ಬ 7ರ 4ನೇ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲೆಯ ಸೆಳೆತವೆ ಉನ್ನತಿಯ ಪರವಾಗಿರುವಂತದ್ದು. ಅದು ಬೆಳೆಯಲು ಮತ್ತು ಬೆಳೆಸಲು ಕಾರಣವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಯಕ್ಷಗಾನ ಗುರು ಹಾವಂಜೆ ಮಂಜುನಾಥ್‌ ರಾವ್‌ ಅವರನ್ನು ರಂಗ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು.

ಪೌರಾಯುಕ್ತ ಆನಂದ ಕಲ್ಲೋಳಿಕರ್‌, ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ, ಕೊಡವೂರು ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಜನಾರ್ದನ ಕೊಡವೂರು, ಉದ್ಯಮಿಗಳಾದ ಮಹಾಬಲ ಸಾಲ್ಯಾನ್‌,  ಸುಮನಸಾದ ಗೌರವಾಧ್ಯಕ್ಷ ಎಮ್‌.ಎಸ್‌. ಭಟ್‌ ಉಪಸ್ಥಿತರಿದ್ದರು.

ಕೋಶಾಧಿಕಾರಿ ಚಂದ್ರಕಾಂತ್‌ ಕುಂದರ್‌ ಸ್ವಾಗತಿಸಿದರು. ನೂತನ್‌ ಕುಮಾರ್‌ ಮಂದಿಸಿದರು. ಯೋಗೀಶ್‌ ಕೊಳಲಗಿರಿ  ನಿರೂಪಿಸಿದರು.ಬಳಿಕ ಸುಮನಸಾ ಕೊಡವೂರು ತಂಡದಿಂದ ಪಂಚವಟಿ ಯಕ್ಷನಾಟಕ ಪ್ರದರ್ಶನಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next