Advertisement

ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಸಾಧನೆಯೇ ನಾಯಕತ್ವ

12:55 PM Jan 17, 2017 | |

ಹುಬ್ಬಳ್ಳಿ: ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಚಿಂತನೆ-ಸಾಧನೆಯೇ ನಾಯಕತ್ವ ಆಗಿದೆ ಎಂದು ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಅಭಿಪ್ರಾಯಪಟ್ಟರು. ದೇಶಪಾಂಡೆ ಪ್ರತಿಷ್ಠಾನದ ಲೀಡ್‌ ಪ್ರಯಾಣ 2017ಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಸಾಮಾನ್ಯ ವ್ಯಕ್ತಿ ಅಸಾಮಾನ್ಯ ಚಿಂತನೆ, ಸಾಧನೆಗೆ ಮುಂದಾಗುವುದೇ ನಾಯಕತ್ವವಾಗಿದ್ದು, ಅದೇ ಆತನನ್ನು ಮಾದರಿ ವ್ಯಕ್ತಿ-ಶಕ್ತಿಯಾಗಿ ಬಿಂಬಿಸುತ್ತದೆ ಎಂದರು. ಲೀಡ್‌ ಪ್ರಯಾಣ ಕಳೆದ ಆರು ವರ್ಷಗಳಿಂದ ನಡೆಯುತ್ತಿದ್ದು, ವಿದ್ಯಾರ್ಥಿಗಳ ಬದುಕಿನ ಪರಿವರ್ತನೆಗೆ ಇದು ಮಹತ್ವದ ಸಹಕಾರಿಯಾಗಲಿದೆ.

ಲೀಡ್‌ ಪ್ರಯಾಣದಲ್ಲಿ ಅನೇಕ ಸಾಧಕರು, ಯಶಸ್ವಿ ಉದ್ಯಮಿಗಳು, ಧಾರ್ಮಿಕ ಪ್ರಮುಖರು, ಕೃಷಿಕರು ಇನ್ನಿತರರನ್ನು ಭೇಟಿಯಾಗಲಿದ್ದು, ಅನೇಕ ಮಾಹಿತಿ ದೊರೆಯಲಿದೆ ಎಂದರು. ಪ್ರಯಾಣ ಸಂದರ್ಭದಲ್ಲಿ ಎಲ್ಲವೂ ನನಗೆ ಗೊತ್ತಿದೆ. ಇವರಿಂದ ಕಲಿಯುವುದೇನಿದೆ ಎಂಬ ಸಂಕುಚಿತ ಭಾವನೆ ಬೇಡ.

ಮುಕ್ತ ಮನಸ್ಸಿನಿಂದ ಸಾಧಕರ ಸಾಧನೆ, ಮಾಹಿತಿ ಆಲಿಸಿದರೆ ಖಂಡಿತವಾಗಿಯೂ ಬದುಕಿನ ಪರಿವರ್ತನೆಗೆ ಮಹತ್ವದ ಸಂದೇಶ ದೊರೆಯಲಿದೆ. ಕೇವಲ 10 ದಿನಗಳ ಪಯಣದಲ್ಲಿ ನಿಮ್ಮ ಸಾಮರ್ಥ್ಯ, ಕೊರತೆ ಪರಿಚಯವಾಗಲಿದೆ. ಅಷ್ಟೇ ಅಲ್ಲ ಬದಲಾವಣೆಯನ್ನು ನೀವೇ ಕಂಡುಕೊಳ್ಳಲಿದ್ದೀರಿ ಎಂದು ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ| ಸತೀಶ ಅಣ್ಣಿಗೇರಿ ಮಾತನಾಡಿ, ಯುವಕರು ಕನಸ್ಸುಗಳನ್ನು ಕಟ್ಟಿಕೊಳ್ಳಬೇಕಾಗಿದೆ. ಈ ಪ್ರಯಾಣ  ಖಂಡಿತವಾಗಿಯೂ ಸ್ಫೂರ್ತಿದಾಯಕವಾಗಲಿದೆಎಂಬ ವಿಶ್ವಾಸ ನನ್ನದಾಗಿದೆ. ನಿಮ್ಮ ಕನಸ್ಸುಗಳು ವಿಷ್ಯದ ನಿಮ್ಮ ಬದುಕಿಗೆ ಮಹತ್ವದ ಕೊಡುಗೆಯಾಗಲಿ ಎಂದರು. 

Advertisement

ದೇಶಪಾಂಡೆ ಪ್ರತಿಷ್ಠಾನದ ಸಹ ಸಂಸ್ಥಾಪಕಿ ಜಯಶ್ರೀ ದೇಶಪಾಂಡೆ ಮಾತನಾಡಿ, ಲೀಡ್‌ ಪ್ರಯಾಣ ಒಳ್ಳೆ ಅನುಭವ ನೀಡಲಿದೆ. ಉತ್ತಮ ದೃಷ್ಟಿಕೋನ ಹಾಗೂ ಹೊಸ ಚಿಂತನೆಗಳಿಗೆ ನಿಮ್ಮನಿಳಿಸಲಿದೆ ಎಂದರು. ಲೀಡ್‌ ಮುಖ್ಯಸ್ಥ ಅಜಯ್‌ ಸುಮನ್‌ ಶುಕ್ಲಾ ಮಾತನಾಡಿ, ಇದು ಆರನೇ ಲೀಡ್‌ ಪ್ರಯಾಣವಾಗಿದೆ.

ಹುಬ್ಬಳ್ಳಿ ಹಾಗೂ  ತೆಲಂಗಾಣದ ನಿಜಾಮಾಬಾದ್‌ನಿಂದ ಏಕಕಾಲಕ್ಕೆ ಪ್ರಯಾಣ ಆರಂಭವಾಗಲಿದೆ. ಈ ಬಾರಿ ಜ.16ರಿಂದ 29ರವರೆಗೆ ಪ್ರಯಾಣ ನಡೆಯಲಿದೆ. ಹುಬ್ಬಳ್ಳಿಯಿಂದ ಹೊರಡುವ ಪ್ರಯಾಣದಲ್ಲಿ ದೇಶದ ವಿವಿಧ ಕಡೆಯ ಸುಮಾರು 110 ವಿದ್ಯಾರ್ಥಿಗಳು ಹಾಗೂ ನಿಜಾಮಾಬಾದ್‌ ಪ್ರಯಾಣದಲ್ಲಿ ಆಂಧ್ರ ಮತ್ತು ತೆಲಂಗಾಣದ ಸುಮಾರು 35 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. 

ಹುಬ್ಬಳ್ಳಿಯಿಂದ ಹೊರಡುವವರು ಧರ್ಮಸ್ಥಳ, ಬೆಂಗಳೂರು, ಹೊಸಪೇಟೆ, ಕುಪ್ಪಂ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ ಸಾಧಕರೊಂದಿಗೆ  ಚರ್ಚಿಸಲಿದ್ದು, ಜ.29ರಂದು ಎರಡು ತಂಡಗಳುಹುಬ್ಬಳ್ಳಿಗೆ ಆಗಮಿಸಿ ಯುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿವೆ. ಲೀಡ್‌ ಪ್ರಯಾಣ ಒಟ್ಟು 1,800 ಕಿ.ಮೀ. ಕೈಗೊಳ್ಳಲಾಗುತ್ತಿದೆ ಎಂದರು. ಲೀಡ್‌ ಪ್ರಯಾಣ ಕುರಿತಾಗಿ ಹಳಬರು ತಮ್ಮ ಅನುಭವ ಹಂಚಿಕೊಂಡರೆ, ಹೊಸಬರು ತಮ್ಮ ನಿರೀಕ್ಷೆ ವ್ಯಕ್ತಪಡಿಸಿದರು. ವೈಷ್ಣವಿ ಮತ್ತು ಪ್ರೇಣಿತಾ ನಿರೂಪಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next