Advertisement

Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…

04:11 PM Oct 31, 2024 | Team Udayavani |

ಕೊಟ್ಟೂರು: ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಪ್ರಯುಕ್ತ ಪಟ್ಟಣಕ್ಕೆ ಸಡಗರ ಸಂಭ್ರಮದ ಹಣ್ಣು, ಹೂವು, ಕಾಯಿಗಳು ಪ್ರಣತಿಗಳ ಮಾರಾಟ ಹೆಚ್ಚಾಗಿದೆ ಇದರ ಜೊತೆಗೆ ಹಬ್ಬದ ವಾತವರಣಕ್ಕೆ ಮೆರಗು ನೀಡಲು ಪಟಾಕಿಗಳು ಸಜ್ಜಾಗಿವೆ.

Advertisement

ಪಟ್ಟಣದ ಸ್ಟೇಡಿಯಂ ಮೈದಾನದಲ್ಲಿ ಶೆಡ್ಡಿನೊಳಗೆ ಪಟಾಕಿ ಮಾರಾಟ ಮಾಡಲು ಹಿಮಾಲಯ ಪಟಾಕಿ ಅಂಗಡಿ ಹೆಸರಿನಲ್ಲಿ ಹಸಿರು ಪಟಾಕಿ ಬದಲಾಗಿ ದೊಡ್ಡ ಪಟಾಕಿ ಮಾರಟಕ್ಕಿಳಿದ ಅಂಗಡಿ ಮಾಲೀಕರು ಈಗಾಗಲೇ ಸರ್ಕಾರ ವಿಧಿಸಿದ ಹಸಿರು ಪಟಾಕಿಗಳ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ದೊಡ್ಡ ಪ್ರಮಾಣದ ಪಟಾಕಿಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಕುರಿತು ಕೇಳಿದರೆ ನಿಮಗೆ ಬೇಕಾದರೆ ತೆಗೆದುಕೊಳ್ಳಿ ಇಲ್ಲವಾದರೆ ಸುಮ್ಮನೆ ಹೋಗಿ ಎಂದು ಜೋರು ಮಾಡುತ್ತಾರೆ. ಹಾಗೂ ಪಟಾಕಿ ಬೆಲೆಯನ್ನು ದುಪ್ಪಟ್ಟು ಮಾಡಿ ಮಾರಾಟ ಮಾಡುತ್ತಿದ್ದಾರೆ.

ದೀಪಾವಳಿ ಹಬ್ಬವೆಂದರೆ ಪಟಾಕಿಗಳದ್ದೇ ಮಾತು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸ್ಲಲ್ಪ ಕಡಿಮೆಯಾದರೂ ಹೆಳಿಕೊಳ್ಳುವಷ್ಟು ಕಡಿಮೆಯಾಗಿಲ್ಲ ಈಗ ಹಸಿರು ಪಟಾಕಿ ಮಾರಾಟಕ್ಕಷ್ಟೇ ಅವಕಾಶ ನೀಡಿದ್ದು ಸಹಜವಾಗಿಯೇ ಪಟಾಕಿ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ಜನರು ಹಿಂದು ಮುಂದು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ದೊಡ್ಡ ದೊಡ್ಡ ಪಟಾಕಿಗಳ ಮಾರಾಟವೂ ಸಹ ಸದ್ದಿಲ್ಲದೆ ನಡೆಯುತ್ತಿದೆ.

ಸರ್ಕಾದ ಮಾರ್ಗಸೂಚಿ ಪ್ರಕಾರ ಎಕಸ್ವಾಮ್ಯತೆಯಿಂದ ಪಟಾಕಿ ಮಾರಾಟ ಮಾಡುತ್ತಿರುವ ಅಂಗಡಿ ಮಾರಾಟಗಾರರು ಪಟ್ಟಣದಲ್ಲಿ ಯಾವುದೇ ರೀತಿಯ ನಿಯಮ ನೀತಿಗಳನ್ನು ನಿರ್ವಹಿಸದೇ ತನ್ನ ಇಚ್ಛೆ ಬಂದಂತೆ ದುಬಾರಿ ಬೆಲೆಯಲ್ಲಿ ಮಾರಾಟಕ್ಕಿಳಿದಿದ್ದಾರೆ. ಇದರಿಂದ ಜನರು ಬೇಸತ್ತು ಇಂತಹವರನ್ನು ಕೇಳುವವರು ಯಾರಿಲ್ಲವೇ ಎನ್ನುತ್ತಾರೆ ಗ್ರಾಹಕರು.

ಮಾರ್ಗಸೂಚಿ ಪ್ರಕಾರ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ, ಪೈರ್, ಉಸುಕು, ನೀರು, ಮುಂಜಾಗ್ರತ ಕ್ರಮವಾಗಿ ಶಾಲೆ, ಕಾಲೇಜುಗಳಿಂದ ಸುಮಾರು 100 ಮೀ ಅಂತರದಲ್ಲಿ ಮಾರಾಟ ಮಾಡಬೇಕು ಇಂತಹ ನಿಯಮಗಳ ಉಲ್ಲಂಘನೆ ಮಾಡಿ ಹಿಮಾಲಯ ಪಟಾಕಿ ಅಂಗಡಿಯವರು ಪಟ್ಟಣದಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದಾರೆ.

Advertisement

ದೀಪಾವಳಿ ಹಬ್ಬಕ್ಕೆಂದು ಮಕ್ಕಳ ಸಂತೋಷಕ್ಕೆ ಪಟಾಕಿ ಖರೀದಿಸಲೇಬೇಕು ಇಂತಹ ಪಟಾಕಿ ಖರೀದಿಗೆ ಸರ್ಕಾರ ಈ ವರ್ಷ ಹಸಿರು ಪಟಾಕಿ ಮಾರಾಟ ಮಾಡಲು ಮಾರ್ಗಸೂಚಿಗಳನ್ನು ವಿಧಿಸಿ ಅನುಮತಿಸಿದೆ. ಇದರಿಂದ ಪರಿಸರ ಸಂರಕ್ಷಣೆ ಅನುಕೂಲವಾಗುತ್ತದೆ. ಆದರೆ ಇಲ್ಲಿ ಮಳಿಗೆಗಳಲ್ಲಿ ಪಟಾಕಿ ಮಾರುವವರು ಬೇಕಾಬಿಟ್ಟಿಯಾಗಿ ತಮಗೆ ಇಚ್ಚೆ ಬಂದಂತೆ ಬೆಲೆ ನಿಗಧಿಸಿ (ದುಪ್ಪಟ್ಟು ಬೆಲೆಯಲ್ಲಿ) ಪಟಾಕಿ ಮಾರಾಟ ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ ನಿಮಗೆ ಬೇಕಾದರೆ ತೆಗೊಳ್ಳಿ ಇಲ್ಲವಾದರೆ ವಾಪಾಸ್ಸು ಹೋಗಿ ಎಂದು ಉಡಾಫೆ ಉತ್ತರ ನೀಡುತ್ತಾರೆ. ಇಂತಹವರ ವಿರುದ್ದ ಸೂಕ್ತ ಕ್ರಮ ಜರುಗಿಸಿ ಮಾರಾಟವನ್ನು ನಿಷೇಧಿಸಬೇಕು.
– ಗ್ರಾಹಕರು

ಹಸಿರು ಪಟಾಕಿ ಮಾರಾಟ ಮಾಡಲು ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ ಈ ಆದೇಶದನ್ವಯ ಮಾರಾಟ ಮಾಡಲು ಮಾರಾಟಗಾರರು ಮುಂದಾಗಬೇಕು ಈ ನಿಯಮಗಳನ್ನು ಉಲ್ಲಂಘಿಸಿ, ದುಪ್ಪಟ್ಟು ಬೆಲೆಯಲ್ಲಿ ಮಾರಾಟ ಮಾಡುವವರು ಕಂಡು ಬಂದರೆ ಅಂಥವರ ವಿರುದ್ಧ ಕ್ರಮ ಜರುಗಿಸಿ ಮಾರಾಟವನ್ನು ನಿಷೇಧಿಸಲಾಗುವುದು.
– ಅಮರೇಶ್ ಪಿ., ತಾಲೂಕು ದಂಡಾಧಿಕಾರಿಗಳು ಕೊಟ್ಟೂರು.

Advertisement

Udayavani is now on Telegram. Click here to join our channel and stay updated with the latest news.

Next