Advertisement
86ನೇ ಸಾಹಿತ್ಯ ಸಮ್ಮೇಳನದ ಪಾಪು -ಚಂಪಾ ವೇದಿಕೆಯಲ್ಲಿ ಶನಿವಾರ ನಡೆದ “ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನ’ ಗೋಷ್ಠಿಯಲ್ಲಿ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಮಸೂದೆಯ ಕಾನೂನು ಚಿಂತನೆ ವಿಷಯದ ಕುರಿತು ಅವರು ಮಾತನಾಡಿದರು.
Related Articles
Advertisement
ಕಚೇರಿಗಳಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಲಾಗಿದೆ. ಆದರೆ, ರಾಜ್ಯ ಹೈಕೋರ್ಟ್ ನಲ್ಲಿ ಕನ್ನಡ ಭಾಷೆ ಬಳಕೆಯಾಗುವುದಿಲ್ಲ. ಇದರಿಂದ ಕನ್ನಡರಿಗೆ ತೊಂದರೆಯಾಗಿದೆ. ರಾಜ್ಯ ಸರಕಾರ ರೂಪಿಸುವ ನೀತಿ -ನಿಯಮಗಳಲ್ಲಿ ಕನ್ನಡ ಕುರಿತ, ಕನ್ನಡ ಕೇಂದ್ರಿತ ಚಿಂತನೆ ಇರಬೇಕು ಎಂದರು. ಡಾ| ವೀರಣ್ಣ ರಾಜೂರು ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.
ಸೋಮಶೇಖರ್ ಜಮಶೆಟ್ಟಿ ಸ್ವಾಗತಿ ಸಿದರು. ಮಲ್ಲಿಕಾರ್ಜುನ ಶಾಂತಗಿರಿ ನಿರೂಪಿಸಿದರು. ಬಸವರೆಡ್ಡಿ ಪಾಟೀಲ್ ವಂದಿಸಿದರು. ಗೊರಳ್ಳಿ ಜಗದೀಶ್ ನಿರ್ವಹಿಸಿದರು.
ಸಾಮಾಜಿಕ ಬದಲಾವಣೆ: ಹೆಗ್ಡೆಎಲ್.ಜಿ. ಹಾವನೂರು ವರದಿಯ ಸಂಪೂರ್ಣ ಅನುಷ್ಠಾನದಿಂದಾಗಿ ರಾಜ್ಯದಲ್ಲಿ ಸಾಮಾಜಿಕ ಬದಲಾವಣೆ ಉಂಟಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು. ಎಲ್.ಜಿ.ಹಾವನೂರು ನೇತೃತ್ವದ ಆಯೋಗ ರಾಜ್ಯದ 180 ನಗರ ಹಾಗೂ 190 ಗ್ರಾಮೀಣ ಭಾಗದ ಬ್ಲಾಕ್‌ಗಳಲ್ಲಿ ಸಂಚರಿಸಿ 63 ಸಾವಿರ ಕುಟುಂಬಗಳ ಮೂರು ಲಕ್ಷ ಹಿಂದುಳಿದ ವರ್ಗಗಳ ಜನರ ಸಮೀಕ್ಷೆ ನಡೆಸಿತ್ತು. 1972ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾನದಂಡ ಆಧರಿಸಿ ಹಿಂದುಳಿದ ವರ್ಗಗಳ ಜಾತಿಗಳನ್ನು ಹಿಂದುಳಿದ, ಅತಿ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ಜಾತಿ ಎಂದು ವಿಭಾಗ ಮಾಡಿತು ಎಂದರು. ಎಲ್.ಜಿ.ಹಾವನೂರು ಅವರು ಹಿಂದುಳಿದ ವರ್ಗಗಳ ಏಳ್ಗೆಗೆ ನೀಡಿದ ಕೊಡುಗೆಯನ್ನು ಗಮನಿಸಿ ನೆಲ್ಸನ್ ಮಂಡೇಲಾ ಅವರು ದಕ್ಷಿಣ ಆಫ್ರಿಕಾದ ಸಂವಿಧಾನ ರಚನೆಯ ಸಲಹೆಗಾರರನ್ನಾಗಿ ಹಾವನೂರು ಅವರನ್ನು ನೇಮಿಸಿದರು. ಇದು ನಾವೆಲ್ಲ ಹೆಮ್ಮೆ ಪಡಬೇಕಾದ ವಿಷಯ ಎಂದರು.