Advertisement

Cauveri: 23ರವರೆಗೆ 2,600 ಕ್ಯುಸೆಕ್‌ ನೀರು ಬಿಡುಗಡೆಗೆ ಆದೇಶ

09:56 PM Nov 03, 2023 | Team Udayavani |

ಚೆನ್ನೈ: ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮುಂದುವರಿದಿದ್ದು, ಮತ್ತೆ ತಮಿಳುನಾಡಿಗೆ ಪ್ರತಿನಿತ್ಯ 2,600 ಕ್ಯುಸೆಕ್‌ ನೀರು ಬಿಡುಗಡೆ ಮಾಡುವಂತೆ ಶುಕ್ರವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಆದೇಶಿಸಿದೆ.

Advertisement

ಈ ಮೂಲಕ ಮೂರು ವಾರಗಳ ಕಾಲ ಅಂದರೆ ನ.23ರವರೆಗೆ ತಮಿಳುನಾಡಿಗೆ ನೀರನ್ನು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಮಾಡಿದ್ದ ಶಿಫಾರಸನ್ನು ಪ್ರಾಧಿಕಾರ ಎತ್ತಿಹಿಡಿದಿದೆ. ಶುಕ್ರವಾರ ತನ್ನ ವಾದ ಮುಂದಿಟ್ಟ ತಮಿಳುನಾಡು ಸರ್ಕಾರ, ಮೆಟ್ಟೂರು ಜಲಾಶಯವು ಬರಿದಾಗುತ್ತಿದ್ದು, ಇಲ್ಲಿನ ನೀರಾವರಿ ಉಳಿಯಬೇಕೆಂದರೆ ಕರ್ನಾಟಕವು 10 ಸಾವಿರ ಕ್ಯುಸೆಕ್‌ ನೀರನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿತು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕರ್ನಾಟಕ ಸರ್ಕಾರ, “ನೈರುತ್ಯ ಮುಂಗಾರಿನ ಅವಧಿ ಮುಗಿದಿದೆ. ನಮ್ಮ ಜಲಾಶಯಗಳೇ ಒಳಹರಿವಿಲ್ಲದೇ ಆತಂಕ ಎದುರಿಸುತ್ತಿವೆ. ಇಂಥ ಸ್ಥಿತಿಯಲ್ಲಿ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ” ಎಂದು ಹೇಳಿತು. ಎರಡೂ ಕಡೆಯ ವಾದ ಆಲಿಸಿದ ಪ್ರಾಧಿಕಾರ, ಕರ್ನಾಟಕ ಸರ್ಕಾರ ತಮಿಳುನಾಡಿಗೆ 3 ವಾರಗಳ ಕಾಲ ನಿತ್ಯ 2,600 ಕ್ಯುಸೆಕ್‌ ನೀರನ್ನು ಬಿಡುಗಡೆ ಮಾಡಬೇಕು ಎಂದು ನಿರ್ದೇಶನ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next