Advertisement

ಬೂಸ್ಟರ್‌ ಡೋಸ್‌ ಲಸಿಕೆ ಬಗ್ಗೆ ಅಧ್ಯಯನ ನಡೆಸಲು ಆದೇಶ

12:45 AM Dec 14, 2021 | Team Udayavani |

ಪುಣೆ: ಪುಣೆಯ “ಸೀರಂ ಇನ್ಸ್ಟಿಟ್ಯೂಟ್‌ ಆಫ್ ಇಂಡಿಯಾ’ಕ್ಕೆ ದೇಶದಲ್ಲಿ ಬೂಸ್ಟರ್‌ ಡೋಸ್‌ ಲಸಿಕೆ ನೀಡು ವುದರಿಂದ ಉಂಟಾಗುವ ಪರಿಣಾಮಗಳ ಅಧ್ಯಯನಕ್ಕೆ ಸೂಚಿಸಲಾಗಿದೆ. ವರದಿಯನ್ನು ಕೇಂದ್ರ ಸರಕಾರದ ಉನ್ನತಮಟ್ಟದ ವಿಷಯ ತಜ್ಞರ ಸಮಿತಿ (ಎಸ್‌ಇಸಿ)ಗೆ ಸಲ್ಲಿಸುವಂತೆ ಸಲಹೆ ಮಾಡಲಾಗಿದೆ.

Advertisement

ದೇಶದಲ್ಲಿ ಒಮಿಕ್ರಾನ್‌ ರೂಪಾಂತರಿ ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆಯಾಗಿರುವಂತೆಯೇ ಮತ್ತು ಬೂಸ್ಟರ್‌ ಡೋಸ್‌ ಲಸಿಕೆ ನೀಡಬೇಕು ಎಂಬ ಬಗ್ಗೆ ಬೇಡಿಕೆ ಹೆಚ್ಚಿರು ವಂತೆಯೇ ಈ ಬೆಳವಣಿಗೆ ನಡೆದಿದೆ. ಡಿ.10ರಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮತ್ತು ಎಸ್‌ಇಸಿ ನಡುವಿನ ಸಭೆಯಲ್ಲಿ ಸೀರಂ ಇನ್‌ಸ್ಟಿ ಟ್ಯೂಟ್‌ಗೆ ಬೂಸ್ಟರ್‌ ಡೋಸ್‌ ಲಸಿಕೆ ನೀಡುವ ಬಗ್ಗೆ ಅನುಮತಿ ನಿರಾಕರಿಸಲಾಗಿತ್ತು. ಜತೆಗೆ ಹೈದರಾಬಾದ್‌ನ ಬಯಲಾಜಿಕಲ್‌ ಇ ಸಂಸ್ಥೆಯು ಮೂರನೇ ಹಂತದ ಲಸಿಕೆ ಪ್ರಯೋಗದ ಬಗೆಗಿನ ಅಧ್ಯಯನಕ್ಕೆ ಉತ್ಸಾಹ ತೋರಿದೆ.

ಒಮಿಕ್ರಾನ್‌ಗೆ ಮೊದಲ ಸಾವು: ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್‌ಗೆ, ಯು.ಕೆ.ನಲ್ಲಿ ಮೊದಲ ಸಾವು ವರದಿಯಾಗಿದೆ ಎಂದು ಪ್ರಧಾನಿ ಬೋರಿಸ್‌ ಜಾನ್ಸನ್‌ ತಿಳಿಸಿದ್ದಾರೆ. ಒಮಿಕ್ರಾನ್‌ ಕೊರೊನಾದ ಮತ್ತೂಂದು ಅಲೆ ಎನ್ನುವುದರಲ್ಲಿ ಅನುಮಾನ ಬೇಡ ಎಂದೂ ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ದೇಶದಲ್ಲಿ ರವಿ ವಾರದಿಂದಲೇ ಒಮಿಕ್ರಾನ್‌ ಎಮರ್ಜನ್ಸಿ ಹೇರಲಾಗಿದೆ.

ಕರೀನಾಗೆ ಕೊರೊನಾ: ಬಾಲಿವುಡ್‌ ನಟಿಯರಾದ ಕರೀನಾ ಕಪೂರ್‌ ಮತ್ತು ಅಮೃತಾ ಅರೋರಾಗೆ ಸೋಮ ವಾರ ಕೊರೊನಾ ಸೋಂಕು ದೃಢವಾಗಿದೆ. ನಟಿಯರು ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದಾರೆ. ಇವರಿಬ್ಬರು ಕಳೆದ ವಾರದಲ್ಲಿ ಸಾಕಷ್ಟು ಪಾರ್ಟಿಗಳಲ್ಲಿ ಭಾಗವಹಿಸಿದ್ದು, ಅವರ ಸಂಪರ್ಕದಲ್ಲಿದ್ದವರೆಲ್ಲರ ಪರೀಕ್ಷೆ ಮಾಡಲಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿಂದು 236 ಕೋವಿಡ್‌ ಪಾಸಿಟಿವ್‌ ಪತ್ತೆ: 7 ಸಾವು

Advertisement

90 ನಿಮಿಷಗಳಲ್ಲಿ ಒಮಿಕ್ರಾನ್‌ ಪತ್ತೆ
ಒಮಿಕ್ರಾನ್‌ ರೂಪಾಂತರಿಯ ಪರೀಕ್ಷೆಗೆಂದು ದೆಹಲಿ ಐಐಟಿಯ ಸಂಶೋಧಕರು ಪತ್ತೆ ಹಚ್ಚಿರುವ ಹೊಸ ಪರೀಕ್ಷೆ ಯಲ್ಲಿ ಕೇವಲ 90 ನಿಮಿಷಗಳಲ್ಲಿ ಫ‌ಲಿತಾಂಶ ಸಿಗುತ್ತದಂತೆ. ಒಮಿಕ್ರಾನ್‌ನಲ್ಲಿರುವ ಹಾಗೂ ಬೇರೆ ಯಾವುದೇ ರೂಪಾಂತರಿಯಲ್ಲಿರದ ವಿಶೇಷ ರೂಪಾಂ ತರಿ ಲಕ್ಷಣಕ್ಕಾಗಿ ಪರೀಕ್ಷಿಸಲಾಗುವುದು. ಪ್ರಸ್ತುತ ಈ ಫ‌ಲಿತಾಂಶಕ್ಕೆ 3 ದಿನಗಳ ಕಾಲ ಕಾಯಬೇಕಿತ್ತು.

ಪಿಎಂ ಫೋಟೋ ಇದ್ರೆ ಏನು ಸಮಸ್ಯೆ?
ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಫೋಟೋ ಹಾಕಿರುವುದನ್ನು ಖಂಡಿಸಿ, ಕೇರಳ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ. ಪ್ರಧಾನಿ ಫೋಟೋ ಇದ್ದರೆ ನಿಮಗೇನು ತೊಂದರೆ ಎಂದು ಪ್ರಶ್ನಿಸಿದೆ. ಅರ್ಜಿದಾರರು, ಜವಾಹರಲಾಲ್‌ ನೆಹರೂ ಇನ್‌ಸ್ಟಿಟ್ಯೂಟ್‌ನಲ್ಲಿ ವೃತ್ತಿ ಯಲ್ಲಿರುವ ವಿಚಾರವನ್ನು ತೆಗೆದ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್‌, “ಇನ್‌ಸ್ಟಿಟ್ಯೂಟ್‌ಗಳಿಗೆ ಮಾಜಿ ಪ್ರಧಾನಿ ನೆಹರೂ ಹೆಸರಿಡುವುದು ತಪ್ಪಲ್ಲವೆಂದ ಮೇಲೆ, ಲಸಿಕೆ ಪ್ರಮಾಣ ಪತ್ರಗಳಲ್ಲಿ ಮೋದಿ ಫೋಟೋ ಬಳಸುವುದ ರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದ್ದಾರೆ. ಬೇರೆ ರಾಷ್ಟ್ರಗಳ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಫೋಟೋವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದು, ಅದಕ್ಕೆ ನ್ಯಾಯಾಲಯ “ಅವರಿಗೆ ಪ್ರಧಾನಿ ಬಗ್ಗೆ ಹೆಮ್ಮೆ ಯಿಲ್ಲ. ನಮ್ಮ ಪ್ರಧಾನಿ ಬಗ್ಗೆ ಹೆಮ್ಮೆಯಿದೆ. ಅಷ್ಟಕ್ಕೂ ಪ್ರಧಾನಿ ಫೋಟೋ ಬಗ್ಗೆ ನಿಮಗೆ ನಾಚಿಕೆ ಪಡುವಂಥ ದ್ದೇನಿದೆ’ ಎಂದು ಕೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next