ಬೆಂಗಳೂರು: ವಿವಿಧ ಕಾರಣಗಳಿಂದಾಗಿ ಮಂಡ್ಯಮತ್ತು ದಾವಣಗೆರೆ ಜಿಲ್ಲಾ ವಕೀಲರ ಸಂಘಗಳುನ್ಯಾಯಾಲಯದ ಕಲಾಪದಿಂದ ಹೊರಗುಳಿದಪ್ರಕರಣದಲ್ಲಿ ಸಂಘಗಳು ಕ್ಷಮೆ ಕೋರಿಏ.22ರೊಳಗೆ ಪ್ರಮಾಣಪತ್ರ ಸಲ್ಲಿಸುವಂತೆಹೈಕೋರ್ಟ್ ಆದೇಶಿಸಿದೆ.ಈ ಕುರಿತು ಹೈಕೋರ್ಟ್ ಸ್ವಯಂ ಪ್ರೇರಿತವಾಗಿದಾಖಲಿಸಿಕೊಂಡಿದ್ದ ನ್ಯಾಯಾಂಗನಿಂದನೆ ಪ್ರಕರಣವನ್ನು ಮುಖ್ಯನ್ಯಾಯಮೂರ್ತಿ ಎ.ಎಸ್.ಓಕ್‌ನೇತೃತ್ವದ ವಿಭಾಗೀಯನ್ಯಾಯಪೀಠ ವಿಚಾರಣೆನಡೆಸಿತು.
ಕೋರ್ಟ್‌ಗಳ ಕಾರ್ಯಕಲಾಪಕ್ಕೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆನೋಡಿಕೊಳ್ಳಬೇಕಾದ್ದು, ವಕೀಲರಕರ್ತವ್ಯ. ಒಂದು ವೇಳೆ ನ್ಯಾಯಾಲಯಗಳಕಲಾಪಕ್ಕೆ ತೊಂದರೆ ಆದರೆ ಸಾಮಾನ್ಯ ಜನರಿಗೆತೀವ್ರ ತೊಂದರೆ ಆಗುತ್ತದೆ”ಎಂದು ನ್ಯಾಯಾಲಯಹೇಳಿದೆ. ಹಾಗಾಗಿ ಸುಪ್ರೀಂಕೋರ್ಟ್ ನೀಡಿರುವತೀರ್ಪು ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಮತ್ತು ಏ.22ರೊಳಗೆ ಸಂಘಗಳು ಕ್ಷಮೆ ಕೋರಿಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದುನ್ಯಾಯಾಲಯ ನಿರ್ದೇಶನ ನೀಡಿ ವಿಚಾರಣೆಯನ್ನುಮುಂದೂಡಿತು.
ಈ ವ್ಯಾಜ್ಯ ಯಾವುದೇ ವಕೀಲರನ್ನುಶಿಕ್ಷಿಸುವುದಕ್ಕೆ ಅಲ್ಲ. ವಕೀಲರು ಯಾವುದೇಕಾರಣಕ್ಕೂ ನ್ಯಾಯಾಲಯಗಳ ಕಲಾಪದಿಂದಹೊರಗುಳಿಯಬಾರದು, ಬಹಿಷ್ಕರಿಸಬಾರದುಎಂಬ ನಿಯಮವಿದೆ. ಆ ನಿಯಮ ಪಾಲನೆಆಗಬೇಕು ಎಂಬುದು ನಮ್ಮ ಉದ್ದೇಶ. ಈಭರವಸೆಯನ್ನು ನ್ಯಾಯಾಲಯ ವಕೀಲರಿಂದಬಯಸುತ್ತದೆ ಎಂದು ನ್ಯಾಯಪೀಠ ಹೇಳಿತು.ಬಹಿಷ್ಕರಿಸಿದರೆ ಹೇಗೆ?: ಕೋವಿಡ್ ಹಿನ್ನೆಲೆಯಲ್ಲಿ ಬಹಳ ಕಷ್ಟದ ನಡುವೆ ನಾವು ಕೋರ್ಟ್‌ಕಲಾಪಗಳನ್ನು ನಡೆಸುತ್ತಿದ್ದೇವೆ. ಇಂತಹ ವೇಳೆವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿದರೆಹೇಗೆ? ಇದನ್ನು ಹೇಗೆ ಒಪ್ಪಲು ಸಾಧ್ಯ? ಇದರಿಂದಕಕ್ಷಿದಾರರಿಗೆ ತೊಂದರೆ ಆಗಲಿದೆ. ಕೋರ್ಟ್‌ಗಳುಕಾರ್ಯನಿರ್ವಹಣೆಗೆ ಸಾಮಾನ್ಯ ಜನರ ಹಣಖರ್ಚು ಮಾಡಲಾಗುತ್ತಿದೆ.
ಒಂದು ದಿನಕಾರ್ಯಕಲಾಪ ನಡೆಸಲು ಎಷ್ಟು ಹಣಖರ್ಚಾಗುತ್ತದೆ ಗೊತ್ತೆ ”ಎಂದು ನ್ಯಾಯಪೀಠಪ್ರಶ್ನಿಸಿತು.ಹೊರಗುಳಿಯುವಂತೆ ವಕೀಲರಿಗೆ ಆದೇಶಿಸಿತ್ತು:ಕಳೆದ ಜ.4ರಂದು ಮಂಡ್ಯ ವಕೀಲರಸಂಘ ವಕೀಲರಿಗೆ ನ್ಯಾಯಾಲಯದ ಕಲಾಪದಿಂದಹೊರಗುಳಿಯುವಂತೆ ಕರೆ ನೀಡಿತ್ತು.
ಅದೇ ರೀತಿಮದ್ದೂರು ವಕೀಲರ ಸಂಘ ಜ.4 ಮತ್ತುಜ.6ರಂದು ನ್ಯಾಯಾಲಯಗಳ ಕಲಾಪಬಹಿಷ್ಕರಿಸಿತ್ತು.ಶ್ರೀರಂಗಪಟ್ಟಣ, ಮಳವಳ್ಳಿ, ಕೆ.ಆರ್. ಪೇಟೆವಕೀಲರ ಸಂಘಗಳೂ ಸಹ ಜ.4ರಂದುಕಲಾಪದಿಂದ ಹೊರಗುಳಿದಿದ್ದವು. ನಾನಾಕಾರಣಗಳಿಂದಾಗಿ ಪಾಂಡವಪುರ ವಕೀಲರ ಸಂಘಕೂಡ ಜ.4, 15 ಮತ್ತು 30ರಂದು ಕೋರ್ಟ್‌ಕಲಾಪದಿಂದ ಹೊರಗುಳಿಯುವಂತೆವಕೀಲರಿಗೆ ಆದೇಶಿಸಿತ್ತು.