Advertisement
ನಗರದ ಕೆಲವೆಡೆ ಅರ್ಧದಲ್ಲಿ ಬಾಕಿಯಾಗಿರುವ ಕಾಮಗಾರಿಗಳು ಮಳೆ ಗಾಲದಲ್ಲಿ ಸಮಸ್ಯೆ ಆಗಲಿದೆ ಎಂದು “ಉದಯವಾಣಿ ಸುದಿನ’ ಈ ಹಿಂದೆ ಎಚ್ಚರಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಪಾಲಿಕೆ ಕೆಲವು ಅರೆಬರೆ ಕಾಮಗಾರಿ ತತ್‌ಕ್ಷಣವೇ ಪೂರ್ಣಗೊಳಿಸಲು ಸೂಚಿಸಿದ್ದರು. ಇದರಂತೆ ಕಂಕನಾಡಿ, ಬಿಜೈ ಸೇರಿದಂತೆ ಕೆಲವು ಭಾಗದಲ್ಲಿದ್ದ ಸಮಸ್ಯೆಗಳಿಗೆ ತಾತ್ಕಾ ಲಿಕ ಮುಕ್ತಿ ನೀಡಲಾಗಿದೆ.
ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ ಮುಂಭಾಗದಲ್ಲಿರುವ ರಿಕ್ಷಾ ಪಾರ್ಕ್ ಸಮೀಪ ಬೃಹತ್ ಹೊಂಡ ತೆಗೆದು ಅದನ್ನು ಮುಚ್ಚದೆ ಕೆಲವು ತಿಂಗಳಿನಿಂದ ಹಾಗೆಯೇ ಬಿಡಲಾಗಿತ್ತು. ಇದು ಮಳೆಗೆ ಇನ್ನೊಂದು ಅಪಾಯ ಆಹ್ವಾನಿಸಿದಂತಿದೆ ಎಂದು ಸುದಿನ ಪಾಲಿಕೆಯ ಗಮನಸೆಳೆದಿತ್ತು. ನೀರಿನ ಪೈಪ್‌ಲೈನ್‌ಗಾಗಿ ಪಾಲಿಕೆಯವರು ಹೊಂಡ ಮಾಡಿ ಅದರ ಮಣ್ಣನ್ನು ರಸ್ತೆಯ ಬದಿಯಲ್ಲಿ ಹಾಕಿ ಸಮಸ್ಯೆ ಸೃಷ್ಟಿಸಿರುವ ಬಗ್ಗೆ ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ಇದೀಗ ಎಚ್ಚೆತ್ತುಕೊಂಡ ಪಾಲಿಕೆ ಹೊಂಡಕ್ಕೆ ಮಣ್ಣು ಹಾಕಿ ಮುಚ್ಚಿದ್ದಾರೆ. ಆದರೆ, ಅದರ ಪಕ್ಕದಲ್ಲಿ ಸ್ವಲ್ಪ ಮಣ್ಣನ್ನು ಹಾಗೆಯೇ ಬಿಟ್ಟಿರುವುದು ಮಳೆಗಾಲಕ್ಕೆ ಸಮಸ್ಯೆ ಆಗಬಹುದು.