Advertisement
ಮಣಿಪಾಲದ ಕಂಟ್ರಿಇನ್ ಹೊಟೇಲ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವೆಲ್ಲ ಅಂಶಗಳಿಗೆ ವಿನಾಯತಿ ನೀಡಬೇಕು ಮತ್ತು ನೀಡಬಾರದು ಎಂಬುದನ್ನು ಪರಿಶೀಲಿಸಿಕೊಂಡು ಆದಷ್ಟು ಬೇಗ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.
ರಾಜ್ಯಸಭಾ ಚುನಾವಣೆ ಸಂಬಂಧ ಫಲಿತಾಂಶ ಏನು ಬರಲಿದೆ ಎಂಬುದು ಮುಂದೆ ತಿಳಿಯಲಿದೆ. ಏನೇನು ಬೆಳವಣಿಗೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಹೆಚ್ಚುವರಿಯಾಗಿ ತಲಾ 32 ಮತಗಳಿದ್ದು, ಕಾಂಗ್ರೆಸ್‌ನಲ್ಲಿ ಅದಕ್ಕಿಂತ ಕಡಿಮೆಯಿದೆ. ಹಾಗೆಯೇ ಎರಡನೇ ಪ್ರಾಶಸ್ತ್ಯದ ಮತದಲ್ಲೂ ಬಿಜೆಪಿ ಹೆಚ್ಚಿದೆ. ಹೀಗಾಗಿ ಮೇಲ್ನೋಟದ ಲೆಕ್ಕಾಚಾರದಲ್ಲಿ ನಾವು ಸ್ಪಷ್ಟ ಗೆಲವು ಸಾಧಿಸಲಿದ್ದೇವೆ. ಎರಡನೇ ಪ್ರಾಶಸ್ತ್ಯದ ಮತಗಳನ್ನು ಲೆಕ್ಕ ಹಾಕಿದಾಗ ನಮಗೆ ಸರಳ ಬಹುಮತ ಬರುತ್ತದೆ. ಎಲ್ಲ ಕಡೆ ನಮ್ಮ ಸ್ನೇಹಿತರು ಇದ್ದಾರೆ ಹೀಗಾಗಿಯೇ ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇವೆ.
Related Articles
Advertisement
ಕರಾವಳಿಯಲ್ಲಿ ಹೆಚ್ಚುತ್ತಿರುವ ಲವ್ ಜೆಹಾದ್ ಪ್ರಕರಣಗಳನ್ನು ಪೊಲೀಸ್ ಇಲಾಖೆ ನೋಡಿಕೊಳ್ಳಲಿದೆ ಎಂದು ಹೇಳಿದರು.