Advertisement

ಕಾರ್ಕಳದಲ್ಲಿ ಆಪ್ಟಿಕಲ್‌ ಫೈಬರ್‌ ಪರ್ಫಾಮ್‌ ಉತ್ಪಾದನ ಘಟಕ: ಸಚಿವರಿಂದ ಸಭೆ

09:04 PM Feb 09, 2023 | Team Udayavani |

ಬೆಂಗಳೂರು: ಕಾರ್ಕಳದಲ್ಲಿ ಆಪ್ಟಿಕಲ್‌ ಫೈಬರ್‌ ಪರ್ಫಾಮ್‌  ಉತ್ಪಾದನ ಘಟಕ ತೆರೆಯುವುದಕ್ಕೆ ಬಿರ್ಲಾ ಪುರುಕಾವ ಫೈಬರ್‌  ಆಪ್ಟಿ ಕಲ್‌ ಪ್ರೈವೇಟ್‌ ಸಂಸ್ಥೆ ತಾತ್ವಿಕ ಒಪ್ಪಿಗೆ ನೀಡಿದ್ದು, ಈ ಸಂಬಂಧ ಸಂಸ್ಥೆಯ ಅಧಿಕಾರಿಗಳ ಜತೆಗೆ ಮಹತ್ವದ ಸಭೆ ನಡೆಸಲಾಗಿದೆ ಎಂದು ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಸುಮಾರು 3,000 ಕೋಟಿ ರೂ.ವೆಚ್ಚದಲ್ಲಿ ಈ ಘಟಕ ಆರಂಭಿಸುವ ವಿಚಾರಕ್ಕೆ ಸಂಬಂಧಿಸಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಪಿಲ್‌ ಮೆಹ್ತಾ ಹಾಗೂ ಯುನಿವರ್ಸಲ್‌ ಕೇಬಲ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೈ.ಎಸ್‌. ಲೋಧಾ ಜತೆ  ಚರ್ಚಿಸಲಾಗಿದೆ. ಇದರಿಂದ ಸುಮಾರು 1,500 ಜನರಿಗೆ ಉದ್ಯೋಗ ಲಭಿಸುತ್ತದೆ ಎಂದು ಹೇಳಿದ್ದಾರೆ.

ನಿಯಮಾವಳಿ ಪ್ರಕಾರ ಸರಕಾರದಿಂದ ಅನುಮತಿ ಪಡೆದ ಬಳಿಕ ಸುಮಾರು 3,000 ಕೋಟಿ ರೂ. ಬಂಡವಾಳ ಹೂಡಲು ನಿರ್ಧರಿಸಲಾಗಿದೆ.  ಹದಿನೈದು ದಿನಗಳಲ್ಲಿ ಸ್ಥಳ ಪರಿಶೀಲನೆ  ನಡೆಸಲು ಸಂಸ್ಥೆ ಒಪ್ಪಿಗೆ ನೀಡಿದ್ದು,  ಅಧಿಕಾರಿಗಳ ತಂಡ ಸದ್ಯದಲ್ಲೇ ಆಗಮಿಸಲಿದೆ ಎಂದು ಹೇಳಿದರು.

ಟೆಲಿಕಮ್ಯುನಿಕೇಷನ್‌ ತರಂಗಗಳನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ರವಾನಿಸಲು ಆಫ್ಟಿಕಲ್‌ ಫೈಬರ್‌ ಕೇಬಲ್‌ಗ‌ಳಿಗೆ ಅಗತ್ಯವಾದ ಪರ್ಫಾಮಾ ಸೆಲಿಕಾ ಉತ್ಪಾದನೆಯನ್ನು ಈ ಘಟಕದಲ್ಲಿ ಮಾಡಲಾಗುತ್ತದೆ. 4 ಜಿ ಮತ್ತು 5 ಜಿ ಟೆಲಿ ಕಮ್ಯುನಿಕೇಷನ್‌ಗಳಲ್ಲಿ ಇದು ಮೂಲಾಧಾರವಾಗಿದೆ. ಕಾರ್ಕಳದಲ್ಲಿ ಸುಮಾರು 1 ಲಕ್ಷ ಚದರಡಿ ಜಾಗದಲ್ಲಿ ಎರಡು ಹಂತಗಳಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next