Advertisement

ವಿಪಕ್ಷಗಳದ್ದು ಕುಟುಂಬ ರಾಜಕಾರಣ…ಆದರೆ ಬಿಜೆಪಿ ಪಕ್ಷವೇ ಒಂದು ಪರಿವಾರವಾಗಿದೆ: ನಡ್ಡಾ

03:11 PM Feb 20, 2023 | Team Udayavani |

ಉಡುಪಿ: ಪವಿತ್ರ ಕೃಷ್ಣಮಠಕ್ಕೆ ಭೇಟಿ ನೀಡಿ, ಶ್ರೀಕೃಷ್ಣನ ಆಶೀರ್ವಾದ ಪಡೆದು ಮಾತು ಆರಂಭಿಸುತ್ತಿದ್ದೇನೆ. ಉಡುಪಿಗೆ ಭಾರತೀಯ ಜನತಾ ಪಕ್ಷದಲ್ಲಿ ವಿಶೇಷ ಸ್ಥಾನವಿದೆ. 1968ರಲ್ಲಿ ಪ್ರಥಮ ಬಾರಿಗೆ ಉಡುಪಿ ನಗರಸಭೆ ಭಾರತೀಯ ಜನ ಸಂಘದ ತೆಕ್ಕೆಗೆ ಬಂದಿದ್ದು, ಈ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅರಳಲು ಸಾಧ್ಯವಾಗಿತ್ತು.

Advertisement

1968ರಲ್ಲಿ ವಿಎಸ್ ಆಚಾರ್ಯ ಅವರು ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದು, ನಂತರ ಉಡುಪಿ ನಗರ ಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ವಿಎಸ್.ಆಚಾರ್ಯ ಅವರು ನನ್ನ ಗೆಳೆಯ, ಸಹೋದ್ಯೋಗಿ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ಅವರೊಬ್ಬ ಜನಪರ ಕಾಳಜಿ ಹೊಂದಿದ್ದ ನಾಯಕರಾಗಿದ್ದರು…ಇದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನುಡಿಯಾಗಿದೆ.

ಇದನ್ನೂ ಓದಿ:ಶೀಘ್ರ ದರ್ಶನ್ ನಟನೆಯ ”ಕ್ರಾಂತಿ” ಸ್ಟ್ರೀಮ್ ಮಾಡಲಿರುವ ಪ್ರೈಮ್ ವಿಡಿಯೋ

ಅವರು ಸೋಮವಾರ (ಫೆ.20) ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಕೃಷ್ಣ ಮಠಕ್ಕೆ ಭೇಟಿ ನೀಡಿರುವುದು ಸಂತಸ ತಂದಿದೆ. ಸ್ವಾಮೀಜಿಯವರ ಆಶೀರ್ವಾದ ಸಿಕ್ಕಿದೆ. ಪವಿತ್ರ ಸ್ಥಳಕ್ಕೆ ಶ್ರೀಕೃಷ್ಣನ ಆಶೀರ್ವಾದ ಪಡೆದು ಮಾತು ಆರಂಭಿಸುತ್ತಿದ್ದೇನೆ. ಉಡುಪಿಗೆ ಭಾರತೀಯ ಜನತಾ ಪಕ್ಷದಲ್ಲಿ ವಿಶೇಷ ಸ್ಥಾನವಿದೆ. ಕರ್ನಾಟಕ ಭಾರತೀಯ ಜನತಾ ಪಕ್ಷದ ಮೂಲವಾಗಿದೆ. 1968ರಲ್ಲಿ ಮೊದಲ ಬಾರಿಗೆ ಉಡುಪಿ ನಗರಸಭೆ ಬಿಜೆಪಿ ತೆಕ್ಕೆಗೆ ಬಂದಿತ್ತು. ಈ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅರಳಲು ಸಾಧ್ಯವಾಗಿತ್ತು. ವಿಎಸ್ ಆಚಾರ್ಯ ಅವರ ಗೆಳೆಯ ಸಹೋದ್ಯೋಗಿ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ಜನಪರ ಕಾಳಜಿ ಹೊಂದಿದ್ದ ನಾಯಕ ಅವರಾಗಿದ್ದರು.

ಕರ್ನಾಟಕದಲ್ಲಿ ನಾವು ಹಲವು ಬಾರಿ ವಿಪಕ್ಷದಲ್ಲಿದ್ದೇವೆ. ಆದರೆ ಈಗ ನಮ್ಮ ಪಕ್ಷ ಆಡಳಿತ ನಡೆಸುತ್ತಿದೆ. ನನಗೆ ಕನ್ನಡ ಮಾತನಾಡಲು ಬರುವುದಿಲ್ಲ. ಭಾಷೆಯಲ್ಲಿ ವ್ಯತ್ಯಾಸ ಇರಬಹುದು. ಆದರೆ ನಮಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿ ದುಡಿಯುವ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯವಾಗಿದೆ ಎಂದು ಭಾವಿಸುತ್ತೇನೆ ಎಂದು ನಡ್ಡಾ ಹೇಳಿದರು.

ಹಲವು ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದೇನೆ. ಅತೀ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ, ಒಂದು ಸಿದ್ದಾಂತವನ್ನು ಹೊಂದಿರುವ ಏಕೈಕ ಅತೀ ದೊಡ್ಡ ಪಕ್ಷ ಬಿಜೆಪಿಯಾಗಿದೆ. ಉಳಿದ ಪಕ್ಷಗಳೆಲ್ಲವೂ ಕುಟುಂಬ ರಾಜಕಾರಣ ಪಕ್ಷಗಳಾಗಿವೆ. ಕಾಂಗ್ರೆಸ್ ನಲ್ಲಿ ಅಮ್ಮ, ಮಗ, ಮಗಳ ಆಡಳಿತ, ಶಿವಸೇನಾ, ಮಮತಾ, ಬಿಜು ಪಟ್ನಾಯಕ್, ತೆಲಂಗಾಣದ ಟಿಆರ್ ಎಸ್, ಡಿಎಂಕೆ, ಜೆಡಿಎಸ್, ವೈಎಸ್ ಆರ್ ಕಾಂಗ್ರೆಸ್ ಎಲ್ಲವೂ ಪರಿವಾರದ ಪಕ್ಷಗಳಾಗಿವೆ. ಬಿಜೆಪಿ ಮಾತ್ರ ಸಿದ್ದಾಂತದ, ಕಾರ್ಯಕರ್ತರನ್ನೊಳಗೊಂಡ ಪಕ್ಷವಾಗಿದ್ದು, ಬಿಜೆಪಿ ಪಕ್ಷವೇ ಒಂದು ಪರಿವಾರವಾಗಿದೆ ಎಂದು ನಡ್ಡಾ ಪ್ರತಿಪಾದಿಸಿದರು.

ಜೆ.ಪಿ.ನಡ್ಡಾ ಅವರು ಕಾರ್ಯಕ್ರಮಕ್ಕೂ ಮುನ್ನ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಮಠಾಧೀಶರೊಂದಿಗೆ ಸಮಾಲೋಚನೆ ನಡೆಸಿದ್ದರು. ಬಳಿಕ ಸಮಾವೇಶಕ್ಕೆ ಆಗಮಿಸಿದ್ದರು.

ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಇಂಧನ ಸಚಿವ ಸುನೀಲ್ ಕುಮಾರ್, ಮೀನುಗಾರಿಕೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ, ಶಾಸಕ ರಘುಪತಿ ಭಟ್, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಚಿವ ಶ್ರೀನಿವಾಸ್ ಪೂಜಾರಿ, ಪ್ರಮೋದ್ ಮಧ್ವರಾಜ್, ಯಶ್ ಪಾಲ್ ಸುವರ್ಣ ಸೇರಿದಂತೆ ಹಲವು ಶಾಸಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next