Advertisement

ನೀರು ಪೂರೈಕೆಗೆ ವಿರೋಧ

01:10 AM Jun 24, 2019 | Team Udayavani |

ಚೆನ್ನೈ: ಬಾಯಾರಿರುವ ಬೆಂಗಳೂರಿಗೆ ಶರಾವತಿ ನೀರು ಪೂರೈಸುವ ಬಗ್ಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಕ್ಕೆ ಮಲೆನಾಡು ಪ್ರದೇಶದಿಂದ ಭಾರೀ ವಿರೋಧ ವ್ಯಕ್ತವಾಗಿದ್ದರೆ ಅತ್ತ, ನೀರಿಲ್ಲದೆ ಬಸವಳಿದಿರುವ ತಮಿಳುನಾಡು ರಾಜಧಾನಿ ಚೆನ್ನೈಗೆ ವೆಲ್ಲೂರು ಜಿಲ್ಲೆಯ ಜೋಲಾರ್‌ಪೇಟೆಯಿಂದ ನೀರು ಪೂರೈಕೆ ಮಾಡುವುದರ ವಿರುದ್ಧ ಡಿಎಂಕೆ ದನಿ ಯೆತ್ತಿದೆ. ತಮಿಳುನಾಡು ಸರಕಾರ ಇಂಥ ಕ್ರಮ ಕೈಗೊಂಡರೆ ಜಿಲ್ಲೆಯಲ್ಲಿ ಭಾರೀ ಪ್ರತಿ ಭಟನೆ ಎದುರಿಸಬೇಕಾಗುತ್ತದೆ ಎಂದು ಡಿಎಂಕೆ ಶಾಸಕ ದೊರೈಮುರುಗನ್‌ ಎಚ್ಚರಿಸಿದ್ದಾರೆ.

Advertisement

ಮುಂದಿನ ಆರು ತಿಂಗಳುಗಳಿಗೆ ರಾಜಧಾನಿಗೆ ಜಿಲ್ಲೆಯಿಂದ ರೈಲಿನ ಮೂಲಕ ಪ್ರತಿದಿನ ನೀರು ಪೂರೈಸುವ ಬಗ್ಗೆ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವ ಬಗ್ಗೆ ಅವರು ಕ್ರುದ್ಧರಾಗಿದ್ದಾರೆ. ನೀರು ಪೂರೈಕೆಯ ಬಗ್ಗೆ ಕ್ರಮ ಕೈಗೊಳ್ಳುವುದರ ಬದಲು ದೇಗುಲಗಳಲ್ಲಿ ಪೂಜೆ, ಹವನಗಳನ್ನು ಕೈಗೊಳ್ಳಲು ಆದೇಶಿಸಿದ್ದಕ್ಕೆ ಕಟಕಿಯಾಡಿದ್ದಾರೆ. 28ರಂದು ಆರಂಭವಾಗುವ ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

65 ಕೋಟಿ ವೆಚ್ಚ: ಹದಿನೆಂಟು ವರ್ಷಗಳ (2001)ಬಳಿಕ ಚೆನ್ನೈಗೆ ಹೊರಗಿನ ಸ್ಥಳದಿಂದ ನೀರು ಪೂರೈಕೆಯಾಗುತ್ತಿದೆ. ಅದಕ್ಕಾಗಿ 65 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ದಕ್ಷಿಣ ರೈಲ್ವೆ ಅಧಿಕಾರಿಗಳು, ಚೆನ್ನೈ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಜಲಮೂಲಗಳಿಗಾಗಿ ಜೋಲಾರ್‌ಪೇಟೆಯಲ್ಲಿ ಸಮೀಕ್ಷೆ ನಡೆಸಿದ್ದಾರೆ. ಹೆಚ್ಚುವರಿ ನೀರು ಬೇಕಾಗಿದ್ದರೆ ಮೆಟ್ಟೂರು ಅಣೆಕಟ್ಟಿನಿಂದ ನೀರು ಪೂರೈಸಲಾಗುತ್ತದೆ. 2 ವಾರಗಳ ಬಳಿಕ ಚೆನ್ನೈಗೆ ನೀರು ಪೂರೈಕೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next