Advertisement

ಹರಪನಹಳ್ಳಿ ತಾಲೂಕಿಗೆ ವರ್ಗಾವಣೆಗೆ ವಿರೋಧ

01:03 PM Oct 18, 2018 | |

ದಾವಣಗೆರೆ: ಸರ್ಕಾರಿ ಪ್ರಾಥಮಿಕ ಶಾಲಾ ಹೆಚ್ಚುವರಿ ಶಿಕ್ಷಕರನ್ನ ಬೇರೆಡೆ ನಿಯೋಜನೆಗೆ ಬುಧವಾರ ಏರ್ಪಡಿಸಿದ್ದ ಕೌನ್ಸೆಲಿಂಗ್‌ ಪ್ರಕ್ರಿಯೆಗೆ ಜಿಲ್ಲೆಯ ಶಿಕ್ಷಕರು ಸಾಮೂಹಿಕವಾಗಿ ಬಹಿಷ್ಕರಿಸಿ, ಪ್ರತಿಭಟಿಸಿದ್ದಾರೆ.

Advertisement

ಬೆಳಿಗ್ಗೆ ಕಾವೇರಮ್ಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲಾ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್‌ ಸಾಮೂಹಿಕವಾಗಿ ಬಹಿಷ್ಕರಿಸಿದ ಹೊನ್ನಾಳಿ, ಚನ್ನಗಿರಿ ತಾಲೂಕು ದಾವಣಗೆರೆ ದಕ್ಷಿಣ, ಉತ್ತರ ವಲಯ ವ್ಯಾಪ್ತಿಯ ಪ್ರಾಥಮಿಕ ಶಾಲಾ ಶಿಕ್ಷಕರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಎಸ್‌. ಪರಮೇಶ್ವರಪ್ಪನವರಿಗೆ ಮನವಿ ಸಲ್ಲಿಸಿ, ಪ್ರಕ್ರಿಯೆ ಕೈ ಬಿಡಬೇಕೆಂದು ಆಗ್ರಹಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ 2017-18ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಹೆಚ್ಚುವರಿ ಶಿಕ್ಷಕರನ್ನು ಬೇರೆಡೆ ನಿಯೋಜನೆ ಸಂಬಂಧ ಈಗಾಗಲೇ 15ರಂದು ತಾಲ್ಲೂಕು ವ್ಯಾಪ್ತಿಯ ಕೌನ್ಸೆಲಿಂಗ್‌ ನಡೆದಿದ್ದು, ಬುಧವಾರ ಜಿಲ್ಲಾ ವ್ಯಾಪ್ತಿ ಕೌನ್ಸೆಲಿಂಗ್‌ ಏರ್ಪಡಿಸಲಾಗಿತ್ತು. ಕಾವೇರಮ್ಮ ಸರ್ಕಾರಿ ಪ್ರೌಢಶಾಲೆ ಬಳಿ ಜಮಾಯಿಸಿ ಶಿಕ್ಷಕರು ಪ್ರಕ್ರಿಯೆ ಸ್ಥಗಿತಗೊಳಿಸಲು ಆಗ್ರಹಿಸಿ, ಪ್ರತಿಭಟಿಸಿದರು. ನಂತರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪನವರ ನಿವಾಸಕ್ಕೆ ತೆರಳಿ, ಅವರಿಗೆ ಮನವಿ ಸಲ್ಲಿಸಿ, ಸೂಕ್ತ ಕ್ರಮ
ಕೈಗೊಳ್ಳುವಂತೆ ಕೋರಿದರು.

ಪ್ರತಿಭಟನೆಗೆ ಕಾರಣ: ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ ವರ್ಗಾವಣೆ ಪ್ರಕ್ರಿಯೆಯಲ್ಲಿ ಹರಪನಹಳ್ಳಿ ತಾಲೂಕನ್ನು ದಾವಣಗೆರೆ ಜಿಲ್ಲೆಗೆ ಪರಿಗಣಿಸಬಾರದು ಎಂಬುದು ಶಿಕ್ಷಕರ ಬೇಡಿಕೆ.

ಹರಪನಹಳ್ಳಿ ಈಗಾಗಲೇ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿದ್ದು, ಆ ತಾಲೂಕಿಗೆ ಶಿಕ್ಷಕರು ವರ್ಗಾವಣೆಯಾಗಿ ಹೋದರೆ ಮುಂದಿನ ದಿನಗಳಲ್ಲಿ ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ. ಈಗಾಗಲೇ ಬೆಂಗಳೂರು ವಿಭಾಗದ ವ್ಯಾಪ್ತಿಗೆ ಸೇರಿರುವ ದಾವಣಗೆರೆ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರು, ಬಳ್ಳಾರಿ ಜಿಲ್ಲೆಗೆ ಹೋದರೆ ಗುಲ್ಬರ್ಗ ವಿಭಾಗದ ವ್ಯಾಪ್ತಿಗೆ ಒಳಪಡಬೇಕಾಗಲಿದೆ.

Advertisement

ಆಗ ನಮಗೆ ವೃತ್ತಿಯಲ್ಲಿ ಯಾವುದೇ ಬಡ್ತಿ ಸಿಗುವುದಿಲ್ಲ. ನಮ್ಮ ಜಿಲ್ಲೆಗೂ ವರ್ಗಾವಣೆ ಕೇಳಲು ಬರದೇ ಶಾಶ್ವತವಾಗಿ ಆ ಜಿಲ್ಲೆಯಲ್ಲೇ ಕೊಳೆಯಬೇಕಾಗುತ್ತದೆ ಎಂದು ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಹರಪನಹಳ್ಳಿ ತಾಲೂಕಿಗೆ ಈಗಾಗಲೇ ಹೆಚ್ಚುವರಿಯಾಗಿ ವರ್ಗಾವಣೆಗೊಂಡ
ಶಿಕ್ಷಕರೆಲ್ಲರೂ ಸರ್ಕಾರ, ಶಿಕ್ಷಣ ಇಲಾಖೆ ಆಯುಕ್ತರಿಗೆ ಪುನಃ ದಾವಣಗೆರೆ ಜಿಲ್ಲೆಗೆ ವರ್ಗಾಯಿಸಲು ಮನವಿ ಮಾಡಿದ್ದಾರೆ.
 
ಇನ್ನು ಹರಪನಹಳ್ಳಿ ತಾಲೂಕನ್ನು ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ದಾವಣಗೆರೆ ಜಿಲ್ಲೆಗೆ ಪರಿಗಣಿಸಿದರೆ ಅಲ್ಲಿ ಹೆಚ್ಚು ಹುದ್ದೆಗಳು ಖಾಲಿ ಇದ್ದು, ನೂರಾರು ಶಿಕ್ಷಕರು ಅನಿವಾರ್ಯವಾಗಿ ಹರಪನಹಳ್ಳಿ ತಾಲೂಕನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಹೆಚ್ಚುವರಿ ಪ್ರಕ್ರಿಯೆಯಲ್ಲಿ ದಾವಣಗರೆ ಜಿಲ್ಲೆಗೆ ಹರಪನಹಳ್ಳಿ ತಾಲೂಕನ್ನು ಪರಿಗಣಿಸಬಾರದು ಎಂಬುದಾಗಿ ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಸಿದ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಸಿದ್ದೇಶಿ, ಓಂಕಾರಪ್ಪ, ಶಿವಲಿಂಗಪ್ಪ, ಆರ್‌.ಜಿ. ಅಜ್ಜಯ್ಯ, ಮಹಾರುದ್ರಪ್ಪ, ಟಿ.ಎಂ. ಸುಧಾ, ಪ್ರಕಾಶ್‌ ಮಡಿವಾಳ, ಇತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next