Advertisement

ಪರಿಶಿಷ್ಟರ ಅನುದಾನ ವರ್ಗಾವಣೆಗೆ ವಿರೋಧ

12:23 PM Sep 18, 2019 | Team Udayavani |

ಹಾಸನ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಗಿರಿಜನರ ಉಪ ಯೋಜನೆ (ಎಸ್‌ಸಿಪಿ – ಟಿಎಸ್‌ಪಿ) ಗೆ ಮೀಸಲಿರಿಸಿರುವ 39,444 ಕೋಟಿ ರೂ. ಮೊತ್ತದಲ್ಲಿ ಒಂದು ಸಾವಿರ ಕೋಟಿ ರೂ. ಹೆಚ್ಚು ಮೊತ್ತವನ್ನು ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಸರ್ಕಾರ ಬಳಸಿಕೊಳ್ಳವ ನಿರ್ಧಾರ ಮಾಡಿರುವುದು ಖಂಡ ನೀಯ ಎಂದು ರಾಜ್ಯ ಜೆಡಿಎಸ್‌ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರು ಹೇಳಿದರು.

Advertisement

ದಲಿತ ಸಂಘಟನೆಗಳ ವಿರೋಧ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಎಸ್‌ಸಿಪಿ – ಟಿಎಸ್‌ಪಿ ರಾಜ್ಯ ಪರಿಷತ್‌ ಸಭೆ ಯಲ್ಲಿ ಈ ತೀರ್ಮಾನ ಕೈಗೊಂಡಿ ರುವುದು ತಪ್ಪು. ಇದು ಕಾನೂನಿನ ಉಲ್ಲಂಘನೆಯೂ ಆಗುತ್ತದೆ ಎ.ದರ 39 ಇಲಾಖೆಗಳು ಪರಿ ಶಿಷ್ಟರ ಶ್ರಯೋಭಿವೃದ್ಧಿಗೆ ಖರ್ಚು ಮಾಡಬೇಕಾದ ಮೊತ್ತವನ್ನು ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಬಳಸುವುದನ್ನು ಈಗಾಗಲೇ ದಲಿತ ಸಂಘಟನೆಗಳು ವಿರೋಧಿಸಿವೆ. ಪರಿಶಿಷ್ಟರ ಹಿತಾ ಸಕ್ತಿಯನ್ನು ಕಾಪಾಡುವ 2013 ರಿಂದ ಜಾರಿಯಾಗಿರುವ ಕಾಯಿ ದೆಗೂ ವಿರೋಧವಾಗಿದೆ. ಆದ್ದ ರಿಂದ ಸರ್ಕಾರ ತನ್ನ ನಿರ್ಧಾರ ವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಪಡಿಸಿದರು.

ಹೊಸ ತೀರ್ಮಾನವಿಲ್ಲ: ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನಗಳಲ್ಲಿ ಯಾವುದೂ ಹೊಸದಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆ ಯಲ್ಲಿ ಕಳೆದ ಜೂನ್‌ 4 ರಂದು ನಡೆದ ಎಸ್‌ಸಿಪಿ – ಟಿಎಸ್‌ಪಿ ಪರಿಷತ್‌ ಸಭೆಯಲ್ಲಿ ಕೈಗೊಂಡಿದ್ದ ತೀರ್ಮಾನಗಳನ್ನೇ ಪುನರುಚ್ಛಾರ ಮಾಡಲಾಗಿದೆ. 2007 -08 ರಲ್ಲಿ ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವನಾಗಿದ್ದಾಗಲೇ ಎಸ್ಸಿ, ಎಸ್ಟಿ ಸಮು ದಾಯದ ದೇವದಾಸಿಯವರಿಗೆ 500 ರೂ. ಪಿಂಚಣಿ ಕೊಡುವ ತೀರ್ಮಾನ ಮಾಡಿ ಜಾರಿಗೊಳಿ ಸಿದ್ದೆ. ಎಸ್ಸಿ, ಎಸ್ಟಿ ರೈತರಿಗೆ ಪಾಲಿ ಹೌಸ್‌, ಹನಿ ನೀರಾವರಿಗೆ ಶೇ.90 ರಷ್ಟು ಸಹಾ ಯಧನ ಈಗಾಗಲೇ ಜಾರಿ ಯಲ್ಲಿದೆ. ಈಗ ಪ್ರಚಾರಕ್ಕಾಗಿ ಹೇಳಿದ್ದಾರೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರದ ಯೋಜನೆ ಗಳನ್ನು ಮುಂದುವರಿಸಿ: ಎಸ್ಟಿ, ಎಸ್ಟಿ ಯುವ ಜನರು ಕೆಐಎಡಿಬಿ ಯಲ್ಲಿ ನಿವೇಶನ ಖರೀದಿಗೆ ಸಹಾಯಧನ ಮೊತ್ತವನ್ನು ಶೆ.50 ರಿಂದ ಶೇ.75 ಕ್ಕೆ ನಮ್ಮ ಸರ್ಕಾರದಲ್ಲಿ ಏರಿಕೆ ಮಾಡಿದ್ದೆವು. ಅನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ ಎಚ್.ಕೆ.ಕುಮಾರಸ್ವಾಮಿ ಅವರು, ರಾಜಕೀಯ ಸ್ಟಂಟ್ ಮಾಡುವ ಬದಲು ಬಿಜೆಪಿ ಸರ್ಕಾರ ಪರಿ ಶಿಷ್ಟರ ಶ್ರೇಯೋಭಿವೃದ್ಧಿಗೆ ಶ್ರಮಿ ಸಲಿ ಎಂದು ಒತ್ತಾಯಿಸಿದರು.

ಅಮಾನವೀಯ ಘಟನೆ: ಕೋಲಾರ ಜಿಲ್ಲೆಯ ಗ್ರಾಮ ವೊಂದಕ್ಕೆ ಸಂಸದ ನಾರಾಯಣ ಸ್ವಾಮಿ ಅವರನ್ನು ಬಿಡದೇ ವಾಪಸ್‌ ಕಳುಹಿಸಿ ಅವಮಾನ ಮಾಡಿರುವುದು. ಖಂಡನೀಯ. 4 ಬಾರಿ ಶಾಸಕನಾಗಿ, 5 ವರ್ಷ ಸಚಿವನಾಗಿದ್ದ ನಾರಾಯಣಸ್ವಾಮಿ ಅವರಿಗೇ ಇಂಥ ಪರಿಸ್ಥಿತಿ ಯಾದರೆ ಸಾಮಾನ್ಯರ ಪಾಡೇನು ಎಂದು ಆತಂಕ ವ್ಯಕ್ತಪಡಿಸಿದರು.

Advertisement

ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವತಃ ಮುಖ್ಯಮಂತ್ರಿಯವರೇ ನಾರಾ ಯಣಸ್ವಾಮಿ ಅವರನ್ನು ಆ ಗ್ರಾಮಕ್ಕೆ ಕರೆದೊಯ್ದು ಅಲ್ಲಿನ ಜನರಿಗೆ ಜಾಗೃತಿ ಮೂಡಿಸಬೇಕು. ಬಿಜೆಪಿ ಸರ್ಕಾರದಲ್ಲಿ ಇಂಥ ಪ್ರಕರಣ ನಡೆದಿರುವುದು ಅವ ಮಾನಕರ. ಈ ಸರ್ಕಾರದ ನಿಲು ವೇನು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next