Advertisement

ಟೋಲ್‌ ಕಾಮಗಾರಿಗೆ ವಿರೋಧ

05:57 PM Feb 15, 2020 | Suhan S |

ಕೊರಟಗೆರೆ: ಪಾವಗಡ, ಮಧುಗಿರಿ ಮತ್ತು ಕೊರಟಗೆರೆ ಕ್ಷೇತ್ರದಿಂದ ತುಮಕೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಅನಧಿಕೃತ ಮತ್ತು ಅವೈಜ್ಞಾನಿಕವಾಗಿ ಟೋಲ್‌ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿ ಕನ್ನಡಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ತುಮಕೂರು ನಗರದಿಂದ ಪಾವಗಡ ಮತ್ತು ಬೆಂಗಳೂರಿನಿಂದ ದಾಬಸ್‌ಪೇಟೆ ಮೂಲಕ ಮಧುಗಿರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆಯೇ ಅವೈಜ್ಞಾನಿಕವಾಗಿದ್ದು, ರಸ್ತೆ ಕಾಮಗಾರಿ ಪೂರ್ಣ ಆಗುವ ಮೊದಲೇ ರಸ್ತೆ ಕಾಮಗಾರಿ ನಾಮಫ‌ಲಕ ಹಾಕಿ ಟೋಲ್‌ ಸಂಗ್ರಹಕ್ಕೆ ಮುಂದಾಗಿರುವ ಖಾಸಗಿ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರವೇ ತಾಲೂಕು ಘಟಕದ ಅಧ್ಯಕ್ಷ ನಟರಾಜು ಮಾತನಾಡಿ, ರೈತಾಪಿ ವರ್ಗ ಮತ್ತು ಬಡಜನತೆ ಸಂಚರಿಸುವ ರಾಜ್ಯ ಹೆದ್ದಾರಿಯಲ್ಲಿ ಹಣ ದೋಚುವ ಉದ್ದೇಶದಿಂದ ಕಳ್ಳತನದಿಂದ ರಾತ್ರೋರಾತ್ರಿ ಟೋಲ್‌ ಕಾಮಗಾರಿ ಮಾಡಲಾಗುತ್ತಿದೆ. ಪಾವಗಡ, ಮಧುಗಿರಿ, ಕೊರಟಗೆರೆ ಮತ್ತು ತುಮಕೂರು ಗ್ರಾಮಾಂತರ ಶಾಸಕರು ಟೋಲ್‌ ವಿರುದ್ಧದ ಹೋರಾಟಕ್ಕೆ ಪಕ್ಷಾತೀತ ಬೆಂಬಲ ಸೂಚಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಯುವ ಘಟಕದ ಅಧ್ಯಕ್ಷ ದಾಸರಹಳ್ಳಿ ಚೇತನ್‌ ಮಾತನಾಡಿ, ಕೆಶಿಪ್‌ ಅವೈಜ್ಞಾನಿಕ ರಾಜ್ಯ ಹೆದ್ದಾರಿ ಕಾಮಗಾರಿಯಿಂದ ಕಳೆದ ನಾಲ್ಕೆ çದು ವರ್ಷದಿಂದ 110 ಅಪಘಾತವಾಗಿ 70 ಜನ ಮೃತಪಟ್ಟು 200ಕ್ಕೂ ಹೆಚ್ಚು ಜನರ ಕೈ-ಕಾಲು ಕಳೆದುಕೊಂಡಿದ್ದಾರೆ. ಪರವಾನಗಿ ಇಲ್ಲದೇ ಅನಧಿಕೃತ ಟೋಲ್‌ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿದರು.

ಪಾವಗಡ ಬಿಎಸ್‌ಪಿ ಅಧ್ಯಕ್ಷ ಮಂಜುನಾಥ ಮಾತನಾಡಿ, ಟೋಲ್‌ ಘಟಕದಿಂದ ರೈತರಿಂದ ಸಮಸ್ಯೆ ಆಗಲಿದೆ. ಸರ್ಕಾರದ ಆದೇಶ ಇಲ್ಲದಿರುವ ಕಾಮಗಾರಿ ಅವೈಜ್ಞಾನಿಕವಾಗಿದೆ. ರಸ್ತೆ ಕಾಮಗಾರಿ ನಾಮಫ‌ಲಕ ಹಾಕಿ ಟೋಲ್‌ ಕಾಮಗಾರಿ ಕೆಲಸ ನಡೆಸುತ್ತಿದ್ದಾರೆ. ಟೋಲ್‌ ಕಾಮಗಾರಿ ತಕ್ಷಣ ನಿಲ್ಲಿಸಿದಿದ್ದರೆ ಪಾವಗಡ, ಮಧುಗಿರಿ ಮತ್ತು ಕೊರಟಗೆರೆ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

ನಮ್ಮ ಕರ್ನಾಟಕ ಅಧ್ಯಕ್ಷ ದೇವರಾಜು, ಕರವೇ ಕಾರ್ಯದರ್ಶಿ ಕಲೀಂವುಲ್ಲಾ, ಕಾರ್ಯಕರ್ತರಾದ ಮಂಜುನಾಥ, ವಿನಯ್‌, ಪಕ್ರುದ್ದೀನ್‌, ಚಾಂದುಪಾಷ, ಲಕ್ಷ್ಮಣ್‌, ರಾಮಚಂದ್ರ, ಅನಿಲ್‌, ವಜೀರ್‌ಅಹಮ್ಮದ್‌, ಪುನೀತ್‌, ಮೂರ್ತಿ, ರಕ್ಷಿತ್‌, ಪ್ರವೀಣ್‌ ಶೆಟ್ಟಿ, ಮುತ್ತುರಾಜು, ಗಣೇಶ್‌, ರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next