Advertisement

ಮದ್ಯದಂಗಡಿ ಆರಂಭಕ್ಕೆ ವಿರೋಧ

04:11 PM Feb 14, 2021 | Team Udayavani |

ಚಳ್ಳಕೆರೆ: ತಾಲೂಕಿನ ಸಿದ್ದೇಶ್ವರನದುರ್ಗದಲ್ಲಿ ಮದ್ಯ ಮಾರಾಟ ಅಂಗಡಿಗೆ ಅಬಕಾರಿ ಇಲಾಖೆ ಪರವಾನಗಿ ನೀಡಿದೆ. ಮಾಲೀಕರು ಗ್ರಾಮದ ಗೊಲ್ಲರಹಟ್ಟಿ ಬಳಿ ಪ್ರಾರಂಭಿಸಲು ನಿರ್ಧರಿಸಿರುವುದನ್ನು ವಿರೋಧಿಸಿ ಸುತ್ತಮುತ್ತಲಿನ ಗ್ರಾಮಸ್ಥರು, ರೈತ ಸಂಘಟನೆ, ಯುವ ಸಂಘಟನೆ, ಮಹಿಳಾ ಸಂಘಟನೆಗಳ ಪ್ರಮುಖರು ಪ್ರತಿಭಟನೆ ನಡೆಸಿದರು.

Advertisement

ಸಿದ್ದೇಶ್ವರನದುರ್ಗದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಈಗಾಗಲೇ ಅಬಕಾರಿ ಇಲಾಖೆ ಅಧಿಕಾರಿ, ಜಿಲ್ಲಾ ಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದರೂ ಮದ್ಯದಂಗಡಿ ತೆರೆಯಲಾಗುತ್ತಿದೆ. ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಮದ್ಯದಂಗಡಿ ಪ್ರಾರಂಭಿಸಿದರೆ ಕಾನೂನು ಬಾಹಿರ ಚಟುವಟಿಕೆಗಳಿಗೆ, ಕಳ್ಳಕಾಕರಿಗೆ, ಜೂಜುಕೋರರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದರಿಂದ ಗ್ರಾಮದಲ್ಲಿ ಅಶಾಂತಿ ವಾತಾವರಣ ಉಂಟಾಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.

ಇದನ್ನೂ ಓದಿ:ಗುರು ಕರುಣೆಯಿಂದ ಜೀವನ ಪಾವನ  

ಶಾಸಕ ಟಿ. ರಘುಮೂರ್ತಿ ಬೆಂಗಳೂರಿನಿಂದ ಸಿದ್ದೇಶ್ವರನದುರ್ಗಕ್ಕೆ ಆಗಮಿಸಿ ಜನರ ಅಹವಾಲು ಆಲಿಸಿದರು. ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ನಾಗಶಯನ ಸ್ಥಳಕ್ಕೆ ಭೇಟಿ ನೀಡಿ, ಸರ್ಕಾರದ ನಿಯಮಗಳನ್ನು ಪಾಲಿಸಬೇಕಿದೆ ಎಂದರು. ಯಾವುದೇ ಕಾರಣಕ್ಕೂ ಇಲ್ಲಿ ಮದ್ಯದಂಗಡಿ ಪ್ರಾರಂಭಕ್ಕೆಅವಕಾಶ ನೀಡುವುದಿಲ್ಲವೆಂದು ಜನರು ಪಟ್ಟು ಹಿಡಿಡದರು.

ಆಗ ವಾಹನದಲ್ಲಿ ತಂದಿದ್ದ  ಮದ್ಯದ ಬಾಕ್ಸ್‌ಗಳನ್ನು ವಾಪಸ್‌ ಕಳುಹಿಸಲಾಯಿತು. ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಸೋಮಗುದ್ದು ಕೆ. ರಂಗಸ್ವಾಮಿ, ರೈತ ಸಂಘದ (ನಂಜುಂಡಸ್ವಾಮಿ ಬಣ) ರಾಜ್ಯ ಕಾರ್ಯದರ್ಶಿ ರೆಡ್ಡಿಹಳ್ಳಿ ವೀರಣ್ಣ, ಮುಖಂಡರಾದ ಕೆ. ನಾಗರಾಜ, ಚನ್ನಕೇಶವ, ರಾಜಣ್ಣ, ಕೆ.ಎಂ. ಶಿವಕುಮಾರಸ್ವಾಮಿ, ಓಬಮ್ಮ, ಲಕ್ಷ್ಮಕ್ಕ, ಚಂದ್ರಮ್ಮ, ತಿಪ್ಪೀರಮ್ಮ, ಓಬಕ್ಕ ಮತ್ತಿತರರು ಇದ್ದರು. ಡಿವೈಎಸ್ಪಿ ಕೆ.ವಿ. ಶ್ರೀಧರ್‌, ವೃತ್ತ ನಿರೀಕ್ಷಕ ನಲವಾಗಲು ಮಂಜುನಾಥ, ಪಿಎಸ್‌ಐಗಳಾದ ಚಂದ್ರಶೇಖರ್‌, ಮಹೇಶ್‌ ಹೊಸಪೇಟೆ, ಮಂಜುನಾಥ ಲಿಂಗಾರೆಡ್ಡಿ ಬಂದೋಬಸ್ತ್ ಕಾರ್ಯ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next