Advertisement

Tower ನಿರ್ಮಾಣಕ್ಕೆ ವಿರೋಧ : ಇನ್ನಾ ಗ್ರಾಮಸ್ಥರಿಂದ ಸರ್ವೇಗೆ ತಡೆ

12:25 AM Feb 03, 2024 | Team Udayavani |

ಬೆಳ್ಮಣ್‌: ವಿದ್ಯುತ್‌ ಸರಬರಾಜಿಗಾಗಿ ಟವರ್‌ ನಿರ್ಮಾಣಕ್ಕೆಂದು ಸರ್ವೆ ನಡೆಸಲು ಬಂದಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ವಾಪಸ್‌ ಕಳುಹಿಸಿದ ಘಟನೆ ಶುಕ್ರವಾರ ಇನ್ನಾದಲ್ಲಿ ನಡೆದಿದೆ.

Advertisement

ಇನ್ನಾ ಗ್ರಾ. ಪಂ.ವ್ಯಾಪ್ತಿಯ ಹೈಸ್ಕೂಲ್‌ ಬಳಿಯ ಸರಕಾರಿ ಜಾಗದಲ್ಲಿ ಜಿಲ್ಲಾ ಧಿಕಾರಿಗಳ ಆದೇಶದ ಮೇರೆಗೆ ಕಾರ್ಕಳ ತಹಶೀಲ್ದಾರ್‌ ಹಾಗೂ ಇತರ ಅ ಧಿಕಾರಿಗಳ ಸಮ್ಮುಖದಲ್ಲಿ ಸರ್ವೆಗೆ ಮುಂದಾದಾಗ ಗ್ರಾಮಸ್ಥರು ಭಾರೀ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಅ ಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.

ಟವರ್‌ ನಿರ್ಮಾಣಕ್ಕಾಗಿ ರೂಪುರೇಷೆ ಸಿದ್ಧವಾಗಿದ್ದು, ಇದಕ್ಕಾಗಿ ಗ್ರಾಮದಲ್ಲಿ ಒಟ್ಟು 8 ಟವರ್‌ ನಿರ್ಮಾಣಕ್ಕಾಗಿ ಜಾಗ ಗುರುತಿಸಿಕೊಳ್ಳಲಾಗಿತ್ತು. ಇದಕ್ಕೆ ಗ್ರಾಮಸ್ಥರ ವಿರೋಧವಿತ್ತು. ಆದರೂ ಶುಕ್ರವಾರ ಅಧಿ ಕಾರಿಗಳು ಟವರ್‌ ನಿರ್ಮಾಣದ ಜಾಗವನ್ನು ಸಮತಟ್ಟು ಮಾಡಲು ಮುಂದಾಗಿದ್ದರು.

ಅ ಧಿಕಾರಿಗಳು ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಬಳಿಕ ಈ ಯೋಜನೆಗೆ ಎಷ್ಟು ಸರಕಾರಿ ಹಾಗೂ ಖಾಸಗಿ ಜಾಗ ಸರ್ವೆಗಾಗಿ ಹೋಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಶನಿವಾರ ಗ್ರಾಮಸ್ಥರಿಗೆ ನೀಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ ಅ ಧಿಕಾರಿಗಳು ಮರಳಿದರು.

ಸ್ಥಳದಲ್ಲಿ ಕಾರ್ಕಳ ತಹಶೀಲ್ದಾರ್‌ ನರಸಪ್ಪ, ಕಾಪು ವೃತ್ತ ನಿರೀಕ್ಷರಾದ ಜಯಶ್ರೀ ಎಸ್‌.ಎಂ., ಪಡುಬಿದ್ರಿ ಪೊಲೀಸ್‌ ಠಾಣಾಧಿ ಕಾರಿ ಪ್ರಸನ್ನ ಕುಮಾರ್‌, ಇನ್ನಾ ಗ್ರಾಮಕರಣಿಕ ಹನುಮಂತ, ಮಾಜಿ ಜಿ.ಪಂ. ಸದಸ್ಯೆ ರೇಶ್ಮಾ ಉದಯ್‌ ಶೆಟ್ಟಿ, ಇನ್ನಾ ಗ್ರಾಮ ಪಂ.ಅಧ್ಯಕ್ಷೆ ಸರಿತಾ ಶೆಟ್ಟಿ, ಮಾಜಿ ಅಧ್ಯಕ್ಷ ಕುಶಾ ಆರ್‌.ಮೂಲ್ಯ, ಗ್ರಾಮ ಪಂಚಾಯತ್‌ ಸದಸ್ಯರಾದ ಚಂದ್ರಹಾಸ್‌ ಶೆಟ್ಟಿ, ದೀಪಕ್‌ ಕೋಟ್ಯಾನ್‌, ಗ್ರಾಮಸ್ಥರಾದ ಅಮರನಾಥ್‌ ಶೆಟ್ಟಿ ಮತ್ತಿತರಿದ್ದರು.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next