Advertisement
ಕೊಯಿರಾ ಬೆಟ್ಟದಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು 2005ರಿಂದ ಸರ್ಕಾರ ಕಲ್ಲುಗಣಿಗಾರಿಕೆಯನ್ನು ಅರ್ಕಾವತಿ ಕ್ಯಾಚ್ಮೆಂಟ್ಪ್ರದೇಶವಾಗಿರುವುದರಿಂದ ಸ್ಥಗಿತಗೊಳಿಸಲಾಗಿತ್ತು. ಕೊಯಿರಾ ಬೆಟ್ಟದಲ್ಲಿ ಕಲ್ಲಿನ ನಿಕ್ಷೇಪ ತೆಗೆಯುವ ಮುನ್ನ ಬೆಟ್ಟದಲ್ಲಿ ಗಣಿಗಾರಿಕೆಯಿಂದ ಆಗುವ ದುಷ್ಪರಿಣಾಮಗಳ ಮಾಹಿತಿ ಪಡೆದು ಗಣಿಗಾರಿಕೆಗೆ ಕೈಹಾಕಬೇಕು. ಅರ್ಕಾವತಿ ನದಿ ಕ್ಯಾಚ್ ಮೆಂಟ್ ಪ್ರದೇಶ ಹಾದುಹೋಗುವ ಬೆಟ್ಟಗಳಲ್ಲಿ ಕಲ್ಲುಗಣಿಗಾರಿಕೆ ನಡೆಸಿದರೆ, ಭವಿಷ್ಯದಲ್ಲಿ ಬೆಟ್ಟದ ಸುತ್ತಲೂ ಇರುವ ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ತೊಂದರೆ ಯಾಗುವುದರಲ್ಲಿಸಂದೇಹವಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.
ಯೋಜನೆಯಡಿ 2010 ಮತ್ತು 2011ನೇ ಸಾಲಿನಲ್ಲಿ ಕಾಮಗಾರಿಗಳು ಸಹ ನಡೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ:ಹಾವಿಗೆ ರಾಖಿ ಕಟ್ಟಲು ಹೋಗಿ ಮೃತಪಟ್ಟ ಹಾವಾಡಿಗ
Related Articles
Advertisement
ಕೊಯಿರಾ ಬೆಟ್ಟದಲ್ಲಿ ಉತ್ತಮ ಅರಣ್ಯವಾಗಿ ಮಾರ್ಪಾಡಾಗಿದ್ದು, ನೂರಾರು ಬಗೆಯ ಸಾವಿರಾರು ಮರಗಳಿದ್ದು,ಈ ಪ್ರದೇಶವನ್ನು ಪರಿಗಣಿಸ ಬಹುದಾದ ಅರಣ್ಯವಾಗಿ ನಮೂದಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ತಾಲೂಕಿನ ಕೊಯಿರಾ ಬೆಟ್ಟವು ಜಲಾನಯನ ಪ್ರದೇಶವೂ ದಿಬ್ಬಗಿರಿ ಬೆಟ್ಟ ಹೊಂದಿಕೊಂಡಂತಿರುವ ನಂದಿ ಗಿರಿಧಾಮದಲ್ಲಿ ಅರ್ಕಾವತಿ ನದಿಯ ಉಗಮಸ್ಥಾನವಾಗಿದೆ. ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೆಟ್ಟದಲ್ಲಿ ಹಲವು ದೇಗುಲ: ಬೆಟ್ಟದಲ್ಲಿ ಸಾಕಷ್ಟು ಔಷಧಿ ಗುಣಗಳುಳ್ಳ ಗಿಡಮರಗಳು ಬೆಳೆದಿವೆ. ವಿವಿಧ ಜಾತಿಯ ಪಕ್ಷಿಗಳ ಕಲರವ ಹಾಗೂ ಬೆಟ್ಟದಲ್ಲಿ ಬೃಹತ್ ಬಂಡೆಯಲ್ಲಿ ಧಾರ್ಮಿಕ ದತ್ತಿಗೆ ಸೇರಿದ ಇತಿಹಾಸ ಪ್ರಸಿದ್ಧ ಭೀಮೇಶ್ವರ ಲಿಂಗ, ಪ್ರಾಚೀನ ಕಾಲದ ಮಂಟಪ, ಪುರಾತನ ಕಾಲದ ಗಣಪತಿ ದೇಗುಲ, ಮನಗೊಂಡನಹಳ್ಳಿ ಬಸವೇಶ್ವರ, ಎಲ್ಲಮ್ಮ ದೇವಾಲಯಗಳು ಇವೆ. ಕೊಯಿರಾ ಬೆಟ್ಟದಲ್ಲಿ ಗಣಿಗಾರಿಕೆಯಿಂದ ಇವೆಲ್ಲಾ ನಶಿಸಿಹೋಗಿ, ಪರಿಸರ ಅಸಮತೋಲನಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂಬುವುದು ಪರಿಸರ ಪ್ರೇಮಿಗಳ ಅಭಿಪ್ರಾಯವಾಗಿದೆ.
ಕೊಯಿರಾಬೆಟ್ಟದಲ್ಲಿ ಸರ್ಕಾರ ಗಣಿಗಾರಿಕೆ ನಿಲ್ಲಿಸಲಾಗಿತ್ತು. ಇದೀಗ ಸರ್ಕಾರ ಗಣಿಗಾರಿಕೆ ನಡೆಸಲುಹೊರಟಿದೆ.ಯಾವುದೇಕಾರಣಕ್ಕೂ ಗಣಿಗಾರಿಕೆ ನಡೆಸ ಬಾರದು.ಬೆಟ್ಟವನ್ನು ಉಳಿಸಬೇಕು. ಬೆಟ್ಟದಲ್ಲಿ ಪುರಾತನ ದೇವಾಲಗಳು, ಚೋಳರ ಕಾಲದ ಗುಹೆಗಳು, ಮಂಟಪಗಳಿವೆ. ಈಗಾಗಲೇಡೀಸಿ, ಗಣಿಮತ್ತುಭೂವಿಜ್ಞಾನ ಅಧಿಕಾರಿಗಳಿಗೆಮನವಿಮಾಡಲಾಗಿದೆ. ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸಬೇಕು.-ಕೊಯಿರಾ ಚಿಕ್ಕೇಗೌಡ, ಆರ್‌ಟಿಐ ಕಾರ್ಯಕರ್ತ ಅರುವನಹಳ್ಳಿ ಭಾಗದಲ್ಲಿ ಎನ್‌ಜಿಒ ಸಂಘ-ಸಂಸ್ಥೆಗಳಿಂದಕೊಯಿರಾ ಬೆಟ್ಟದಲ್ಲಿ ಬೀಜದ ಉಂಡೆ ಹಾಕಲಾಗಿದೆ. ಪ್ರಾಕೃತಿಕವಾಗಿ ಅರಣ್ಯೀಕರಣ ವಾಗಿದೆ.ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅಧಿಕಾರಿಗಳು ಅವಕಾಶ ನೀಡಬಾರದು.
-ಕೆ.ಎಸ್. ಹರೀಶ್, ಜಿಲ್ಲಾ ಅಧ್ಯಕ್ಷ, ರೈತ ಸಂಘ ಗಣಿ ಮತ್ತು ಭೂವಿಜ್ಞಾನ ಇಲಾಖೆ ರಾಜ್ಯಮಟ್ಟದ ಮೇಲಧಿಕಾರಿಗಳುಕೊಯಿರಾ ಬೆಟ್ಟವನ್ನು ವೈಜ್ಞಾನಿಕ ಸರ್ವೆ ಮಾಡಿ 6 ಜನರ ತಂಡ ವಸ್ತುಸ್ಥಿತಿ ಮಾಹಿತಿ ನೀಡುವಂತೆ ಸೂಚನೆ ನೀಡಿದೆ. ಅದರಂತೆ ಸರ್ವೆ ಕಾರ್ಯ ನಡೆಯುತ್ತಿದೆ. ಬೆಟ್ಟದಲ್ಲಿಕ್ಯಾಚ್‌ಮೆಂಟ್ ಏರಿಯ ಬರುವುದರಿಂದ ಸರ್ಕಾರ ಸ್ಥಗಿತಗೊಳಿಸಿತ್ತು. ಇದೀಗ ಅಲ್ಲಿನ ವಸ್ತುಸ್ಥತಿ ಬೆಟ್ಟವನ್ನು ಗಣಿಗಾರಿಕೆಗೆಕೊಡಬಹುದೊ, ಬೇಡವೋ. ಪ್ರಾಕೃತಿಕವಾಗಿ ಬೆಟ್ಟಯಾವರೀತಿ ಇದೆ ಎಂಬುದರ ಪರಿಶೀಲನೆ ನಡೆಸಲಾಗುತ್ತಿದೆ.
-ರೇಣುಕಾ, ಉಪನಿರ್ದೇಶಕಿ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ – ಎಸ್.ಮಹೇಶ್