Advertisement

ಸೇಡಂ ಶೈಕ್ಷಣಿಕ ಜಿಲ್ಲೆಗೆ ಶಹಾಬಾದ ಸೇರ್ಪಡೆಗೆ ವಿರೋಧ

04:41 PM Aug 31, 2022 | Team Udayavani |

ಶಹಾಬಾದ: ಸೇಡಂ ಶೈಕ್ಷಣಿಕ ಜಿಲ್ಲೆಯಲ್ಲಿ ತಾಲೂಕು ಸೇರ್ಪಡೆ ಮಾಡುತ್ತಿರುವುದನ್ನು ವಿರೋಧಿ ಸಿ ಮಂಗಳವಾರ ಶಹಾಬಾದ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ವಾಡಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರೇವುನಾಯಕ ಬೆಳಮಗಿ, ಸೇಡಂ ಶೈಕ್ಷಣಿಕ ಜಿಲ್ಲೆಯಲ್ಲಿ ಶಹಾಬಾದ ತಾಲೂಕು ಸೇರ್ಪಡೆ ಮಾಡುತ್ತಿರುವುದು ಅವೈಜ್ಞಾನಿಕ. ಇದಕ್ಕೆ ತಾಲೂಕಿನ ಎಲ್ಲ ಜನರಿಂದ ವಿರೋಧ ವ್ಯಕ್ತವಾಗಿದೆ.

ಶಹಾಬಾದ ತಾಲೂಕಿನಿಂದ ಕಲಬುರಗಿ ಜಿಲ್ಲಾ ಕೇಂದ್ರ ಕೇವಲ 25 ಕಿಮೀ ದೂರದಲ್ಲಿದೆ. ಆದರೆ ಸೇಡಂ ಸುಮಾರು 70 ಕಿಮೀ ದೂರವಿದೆ. ಇದರಿಂದ ಸಾಕಷ್ಟು ಸಮಯ ಹಾಗೂ ಹಣ ಕೂಡ ವ್ಯಯವಾಗುತ್ತದೆ. ಆನರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ. ಆದ್ದರಿಂದ ಶಾಸಕರು, ಲೋಕಸಭೆ ಸದಸ್ಯರು ಈ ಬಗ್ಗೆ ಗಮನಹರಿಸಿ ಸಂಬಂಧಪಟ್ಟ ಸಚಿವರಿಗೆ ಒತ್ತಡ ಹಾಕಿ ಜಿಲ್ಲೆಯಲ್ಲಿಯೇ ಉಳಿಯುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.

ಡಾ|ರಶೀದ್‌ ಮರ್ಚಂಟ ಮಾತನಾಡಿ, ಈಗಾಗಲೇ ಶಹಾಬಾದ್‌ನ ಎರಡು ಕಾರ್ಖಾ ನೆಗಳು ಮುಚ್ಚಿವೆ. ಕಲ್ಲು ಗಣಿ, ಪಾಲಿಷ್‌ ಮಶಿನ್‌ ವ್ಯಾಪಾರವೂ ಡೋಲಾಯನಮಾನವಾಗಿದೆ. ತಾಲೂಕಾವಾಗಿ ಅನೇಕ ವರ್ಷಗಳು ಉರುಳಿ ದರೂ ಇಲ್ಲಿಯವರೆಗೆ ಯಾವುದೇ ಕಚೇರಿಗಳು ಬಂದಿಲ್ಲ. ಸೇಡಂ ಶೈಕ್ಷಣಿಕ ಜಿಲ್ಲೆಯಾಗುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಶಹಾಬಾದನ್ನು ಯಾವುದೇ ಕಾರಣಕ್ಕೂ ಸೇರ್ಪಡೆ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.

ನಂತರ ಮನವಿ ಪತ್ರವನ್ನು ತಹಶೀಲ್ದಾರ ಸುರೇಶ ವರ್ಮಾಗೆ ಮನವಿ ಸಲ್ಲಿಸಿದರು. ಶಿವರಾಜ ಇಂಗಿನಶೆಟ್ಟಿ, ಮಹ್ಮದ್‌ ಉಬೆದುಲ್ಲಾ, ಕೃಷ್ಣಪ್ಪ ಕರಣಿಕ್‌, ಶರಣಗೌಡ ಪಾಟೀಲ ಗೋಳಾ, ಡಾ|ಜಹೀರ್‌, ಕನಕಪ್ಪ ದಂಡಗುಲಕರ್‌, ಅಜೀತ್‌ಕುಮಾರ ಪಾಟೀಲ, ಮೃತ್ಯುಂಜಯ ಹಿರೇಮಠ, ಅರುಣ ಪಟ್ಟಣಕರ್‌, ಭೀಮರಾವ ಸಾಳುಂಕೆ, ಡಾ|ಅಹ್ಮದ್‌ ಪಟೇಲ್‌, ರಾಜಮಹ್ಮದ್‌ ರಾಜಾ, ಫಜಲ್‌ ಪಟೇಲ್‌, ಡಾ|ಮಹೇಂದ್ರ ಕೋರಿ, ಬಸವರಾಜ ಮಯೂರ, ಶೇಖ ಬಾಬು ಉಸ್ಮಾನ, ಜಗನ್ನಾಥ ಎಸ್‌.ಎಚ್‌, ಕಾಶಿನಾಥ ಭಾಸ್ಮೇ, ಭರತ್‌ ಧನ್ನಾ, ಕಿರಣ ಕೋರೆ, ರಾಘವೇಂದ್ರ ಎಂ.ಜಿ, ನವನಾಥ ಕುಸಾಳೆ, ವೆಂಕಟೇಶ ದಂಡಗುಲಕರ್‌, ಮೀರ ಅಲಿ ನಾಗೂರೆ, ಮಹ್ಮದ್‌ ಇಮ್ರಾನ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next