ಹೊಸದಿಲ್ಲಿ: “2ಜಿ ಹಗರಣ, ಕಲ್ಲಿದ್ದಲು ಹಗರಣದಂಥ ಅಕ್ರಮಗಳಿಗೆ ಹೊಂದಿಕೊಂಡ ವರಿಗೆ ಕಾನೂನುಬದ್ಧವಾದ ತೆರಿಗೆ ವ್ಯವಸ್ಥೆಯು ಸಹಜವಾಗಿಯೇ ಆಕ್ಷೇಪಾರ್ಹವಾಗಿ ಕಾಣುತ್ತದೆ.’
ಇದು ಜಿಎಸ್‌ಟಿಯನ್ನು “ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಕರೆದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟಿÉ ಅವರು ನೀಡಿದ ತಿರುಗೇಟು. ದಿಲ್ಲಿಯಲ್ಲಿ ಮಂಗಳವಾರ ದೇಶದ ಆರ್ಥಿಕತೆಗೆ ಸಂಬಂಧಿಸಿದ ವಿವರಣೆ ನೀಡುವಾಗ ರಾಹುಲ್‌ರ ಹೇಳಿಕೆಗೆ ಪ್ರತಿಕ್ರಿಯಿಸದೇ ಇರಲು ಜೇಟಿÉ ಮರೆಯಲಿಲ್ಲ.
ಸೋಮವಾರ ಗುಜರಾತ್‌ನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಜಿಎಸ್‌ಟಿಯನ್ನು ಗಬ್ಬರ್‌ಸಿಂಗ್ ಟ್ಯಾಕ್ಸ್ ಎಂದು ಕರೆದಿದ್ದಲ್ಲದೆ, “ಜನರ ಆದಾಯವನ್ನು ಲೂಟಿ ಮಾಡುವ ಖಳನಾಯಕ’ ಎಂದು ಬಣ್ಣಿಸಿದ್ದರು. ಇದಕ್ಕೆ ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಜೇಟಿÉ, ಯುಪಿಎ ಸರಕಾರದ ಅವಧಿಯ ಹಗರಣಗಳ ಹೆಸರನ್ನೆತ್ತುವ ಮೂಲಕವೇ ತಿರುಗೇಟು ನೀಡಿದ್ದಾರೆ.
ಆರ್ಥಿಕತೆ ಟೇಕಾಫ್: ವಿಸ್ತೃತ ಆರ್ಥಿಕ ಮಾರ್ಗಸೂಚಿ ಹಾಗೂ ದಾಖಲೆಯ ಸಮೇತ ಮಂಗಳವಾರ ಸಚಿವ ಜೇಟಿÉ ಹಾಗೂ ವಿತ್ತ ಸಚಿವಾಲಯದ ಉನ್ನತ ಅಧಿಕಾರಿಗಳು ತೆರಿಗೆ ಸುಧಾರಣಾ ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿ ದ್ದಾರೆ. ಭಾರತದ ಆರ್ಥಿಕತೆಯನ್ನು ಸ್ಟ್ರಾಂಗ್ ವಿಕೆಟ್ ಎಂದು ಬಣ್ಣಿಸಿದ ಸಚಿವ ಜೇಟಿÉ, “ದೇಶದ ಆರ್ಥಿಕತೆಯ ಅಡಿಪಾಯ ಸುಭದ್ರವಾಗಿದೆ. ಕಳೆದ 3 ವರ್ಷಗಳಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ನಮ್ಮದು’ ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಸುಭಾಷ್‌ಚಂದ್ರ ಗಾರ್ಗ್, ಸರಕಾರ ಕೈಗೊಂಡಿರುವ ಹಲವು ಸುಧಾರಣಾ ಕ್ರಮಗಳ ಪೈಕಿ ಜಿಎಸ್‌ಟಿ ಪ್ರಮುಖವಾದದ್ದು. ಜಿಎಸ್‌ಟಿಯು ಸದ್ಯದಲ್ಲೇ ದೇಶದ ಪ್ರಗತಿಯ ಪಥಕ್ಕೆ ದೊಡ್ಡ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.
ಹಣದುಬ್ಬರ ಇಳಿಕೆ: 2014ರಿಂದೀಚೆಗೆ ಹಣದುಬ್ಬರ ಪ್ರಮಾಣವು ಗಣನೀಯವಾಗಿ ಇಳಿಕೆ ಕಂಡಿದ್ದು, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶೇ.4 ಅನ್ನು ದಾಟುವುದಿಲ್ಲ. ಆಯಾತ-ನಿರ್ಯಾತ ಕೊರತೆ(ಸಿಎಡಿ)ಯೂ ಶೇ.2ಕ್ಕಿಂತ ಕಡಿಮೆಯಿದೆ. ವಿದೇಶಿ ವಿನಿಮಯ ಮೀಸಲು 400 ಶತಕೋಟಿ ಡಾಲರ್ ಅನ್ನು ದಾಟಿಲ್ಲ. ಇನ್ನು ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.3.2ರ ಗುರಿ ಹಾಕಿಕೊಂಡಿದ್ದು, ಸರಕಾರ ಅದಕ್ಕೆ ಬದ್ಧವಾಗಿದೆ. ಡಿಸೆಂಬರ್‌ನಲ್ಲಿ ಇದನ್ನು ಪರಿಶೀಲಿಸಲಾಗುತ್ತದೆ ಎಂದೂ ಗಾರ್ಗ್ ತಿಳಿಸಿದ್ದಾರೆ.
ಜಿಡಿಪಿ ದರದಲ್ಲಾದ ಇಳಿಕೆಗೆ ಸದ್ಯ ಬ್ರೇಕ್ ಬಿದ್ದಿದ್ದು, ಆರ್ಥಿಕತೆ ಮತ್ತೆ ಚೇತರಿಸಿಕೊಳ್ಳುತ್ತಿದೆ. ಶೀಘ್ರದಲ್ಲೇ ದೇಶದ ಆರ್ಥಿಕ ಪ್ರಗತಿ ಶೇ.8 ಅನ್ನು ತಲುಪುವ ವಿಶ್ವಾಸವನ್ನು ಸ್ವತಃ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಕೂಡ ವ್ಯಕ್ತಪಡಿ ಸಿದೆ. ಜತೆಗೆ, 72,500 ಕೋಟಿ ರೂ. ಬಂಡವಾಳ ಹಿಂಪಡೆತದ ಟಾರ್ಗೆಟ್ ಅನ್ನೂ ಸರಕಾರ ಸಾಧಿ ಸಲಿದೆ ಎಂದಿದ್ದಾರೆ ಗಾರ್ಗ್.
92,150 ಕೋಟಿ ಜಿಎಸ್‌ಟಿ ಸಂಗ್ರಹ
ಸರಕಾರವು ಸೆಪ್ಟೆಂಬರ್ ತಿಂಗಳಲ್ಲಿ 92,150 ಕೋಟಿ ರೂ.ಗಳನ್ನು ಜಿಎಸ್‌ಟಿ ರೂಪದಲ್ಲಿ ಪಡೆದಿದೆ ಎಂದು ವಿತ್ತ ಸಚಿವಾಲಯ ಮಾಹಿತಿ ನೀಡಿದೆ. ಈ ಪೈಕಿ 14,042 ಕೋಟಿ ರೂ. ಕೇಂದ್ರ ಜಿಎಸ್‌ಟಿ, 21,172 ಕೋಟಿ ರೂ. ರಾಜ್ಯ ಜಿಎಸ್‌ಟಿಯದ್ದಾಗಿದೆ. ಸೋಮವಾರದವರೆಗೆ 42.91 ಲಕ್ಷ ಉದ್ದಿಮೆ ಸಂಸ್ಥೆಗಳು ಜಿಎಸ್‌ಟಿಆರ್-3ಬಿ ರಿಟರ್ನ್Õ ಸಲ್ಲಿಸಿವೆ ಎಂದೂ ಸಚಿವಾಲಯ ಹೇಳಿದೆ.