Advertisement
ಪ. ಜಾತಿಯ ವ್ಯಕ್ತಿಗಳು ಬೇರೆ ಧರ್ಮಗಳಿಗೆ ಮತಾಂತರಗೊಂಡರೆ ಅವರಿಗೆ ಪ. ಜಾತಿ ಸ್ಥಾನ ನೀಡಬೇಕೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರಕಾರವು ನ್ಯಾ| ಬಾಲಕೃಷ್ಣನ್ ನೇತೃತ್ವದಲ್ಲಿ ವಿಚಾರಣ ಆಯೋಗ ನೇಮಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ಡಾ| ರವೀಂದರ್ ಕುಮಾರ್ ಜೈನ್ ಮತ್ತು ಪ್ರಾಧ್ಯಾಪಕಿ ಸುಷ್ಮಾ ಯಾದವ್ ಸದಸ್ಯರಾಗಿದ್ದಾರೆ. ಈ ಆಯೋಗ ರಾಜ್ಯಕ್ಕೆ ಭೇಟಿ ನೀಡಿದ್ದು, ಮೀಸಲಾತಿ ಮುಂದುವರಿಕೆ ಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಿತು.
ವಿಷಯ ಮಂಡಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ಡಿ.ಜಿ. ಸಾಗರ್, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸುವುದಕ್ಕೆ ಆಕ್ಷೇಪ ಇಲ್ಲ. ಆದರೆ ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಮೀಸಲಾತಿ ಕೋಟಾದಿಂದ ಕಡಿತಗೊಳಿಸಿ, ದಲಿತ ಕ್ರಿಶ್ಚಿಯನ್, ದಲಿತ ಕ್ರೈಸ್ತರಿಗೆ ನೀಡಬಾರದು. ಯಾವ ಧರ್ಮಕ್ಕೆ ಮತಾಂತರಗೊಂಡಿದ್ದಾರೆಯೋ ಆ ಧರ್ಮಕ್ಕೆ ನಿಗದಿಪಡಿಸಿದ ಮೀಸಲಾತಿ ಕೋಟಾದಿಂದ ಕಡಿತಗೊಳಿಸಿ ಕೊಡುವುದಾದರೆ ನಮ್ಮ ಅಭ್ಯಂತರವಿಲ್ಲ ಎಂದರು.
Related Articles
Advertisement
ಶಿಕ್ಷಕ ಸಂಜೀವಪ್ಪ ಮಾತನಾಡಿ, ಹಿಂದೂ ದಲಿತ ಮಕ್ಕಳು ಬಡ ವರ್ಗದವರಾಗಿದ್ದಾರೆ. ಕನ್ನಡ ಶಾಲೆಗಳಲ್ಲಿ, ಸರಕಾರಿ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಆಮಿಷಗಳಿಗೆ ಬಲಿಯಾಗಿಮತಾಂತರಗೊಂಡಿರುವ ವರ ಮಕ್ಕಳುದೊಡ್ಡ ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆ ಯಲ್ಲಿ ಕಲಿಯುತ್ತಿದ್ದಾರೆ. ಅವರಿಗೆ ಕ್ರೈಸ್ತ ಮಿಷನರಿಗಳು ಸವಲತ್ತು ನೀಡಿವೆ. ಆರ್ಥಿಕವಾಗಿ ಸಶಕ್ತರಾಗಿದ್ದಾರೆ. ಆ ಮಕ್ಕಳೊಂದಿಗೆ ಸರಕಾರಿ ಶಾಲೆಯಲ್ಲಿ ಕಲಿತಿ ರುವ ನಮ್ಮ ಮಕ್ಕಳು ಪೈಪೋಟಿ ನಡೆಸಲು ಸಾಧ್ಯವಿಲ್ಲ. ನಮ್ಮೆಲ್ಲ ಮೀಸಲಾತಿ ಮತಾಂತರಗೊಂಡವರ ಪಾಲಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಹೇಳಿದ್ದನ್ನೆ ಹೇಳಬೇಡಿ: ನ್ಯಾಯಮೂರ್ತಿ ಗರಂಅಹವಾಲು ಸಲ್ಲಿಕೆ ವೇಳೆ ದಲಿತ ಸಮುದಾಯದ ಮುಖಂಡರು ರಾಜಕೀಯ ಭಾಷಣದ ರೀತಿಯಲ್ಲಿ ಮಾತನಾಡುತ್ತಿದ್ದರು. ಒಬ್ಬರು ಹೇಳಿ ದ್ದನ್ನೇ ಮತ್ತೂಬ್ಬರು ಪುನರಾವರ್ತನೆ ಮಾಡುತ್ತಿದ್ದರು. ಇದರಿಂದ ಸಿಟ್ಟಾದ ನ್ಯಾ| ಬಾಲಕೃಷ್ಣನ್, ಮತಾಂತರದ ಬಗ್ಗೆ ರಾಜಕೀಯ ವಿಚಾರಗಳನ್ನು ತರಬೇಡಿ. ಮತಾಂತರಗೊಂಡವರಿಗೆ ಮೀಸಲಾತಿ ಮುಂದುವರಿಸ ಬೇಕೇ, ಬೇಕಾದರೆ ಏಕೆ ಬೇಕು, ಬೇಡವಾದರೆ ಏಕೆ ಬೇಡ ಎಂದಷ್ಟೇ ಹೇಳಿ. ಒಬ್ಬರು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಬೇಡಿ ಎಂದು ಗರಂ ಆದರು.