ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣ, ರೈತ ವಿರೋಧಿ ಕಾಯ್ದೆ,ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆಏರಿಕೆ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನೀತಿ ಖಂಡಿಸಿ ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಘೋಷಣೆ ಕೂಗಿ ಆಕ್ರೋಶ: ಮೈಷುಗರ್ ಸಕ್ಕರಕಾರ್ಖಾನೆಯಿಂದ 50 ಟ್ರ್ಯಾಕ್ಟರ್, 50 ಎತ್ತಿನಗಾಡಿ ಮೂಲಕ ಜಿಲ್ಲಾ ಧಿಕಾರಿ ಕಚೇರಿವರೆಗೆ ಟ್ರ್ಯಾಕ್ಟರ್,ಎತ್ತಿನಗಾಡಿ ಮತ್ತು ಬೈಕ್‌ಗಳ ಮೂಲಕ ಮೆರವಣಿಗೆ ಯಲ್ಲಿ ಬಂದ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬಂದಾಗಿನಿಂದಲೂ ರೈತ ವಿರೋಧಿ ಕಾನೂನು ತಂದು ರೈತರನ್ನು ಒಕ್ಕಲೆಬ್ಬಿಸುವ ಕೆಲಸಮಾಡುತ್ತಿದ್ದು, ಮೈಷುಗರ್ ಕಾರ್ಖಾನೆಯನ್ನು 40ವರ್ಷಗಳಿಗೆ ಖಾಸಗೀಯವರಿಗೆ ಒಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ. ಅಲ್ಲದೆ ಪೆಟ್ರೋಲ್,ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಖಾಸಗಿ ಹಿಡಿತಕ್ಕೆ ನೀಡಲು ಹುನ್ನಾರ: ಮೈಷುಗರ್‌ಕಾರ್ಖಾನೆ ಜಿಲ್ಲೆಯ ಜೀವನಾಡಿ ಯಾಗಿದ್ದು, ಈಗಾಗಲೇ ಕಾರ್ಖಾನೆ ಸ್ಥಗಿತದಿಂದ ರೈತರು ತೀವ್ರಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇರೆ ಕಾರ್ಖಾನೆಗಳಿಗೆಕಬ್ಬು ಸಾಗಿಸಿ ಹೈರಾಣಾಗಿದ್ದು, ಕಬ್ಬಿನಿಂದ ಯಾವುದೇ ಆದಾಯವಿಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ರೈತರ ಸಂಕಷ್ಟವನ್ನು ಅರಿತುಪರಿಹಾರ ನೀಡಬೇಕಾದ ಸರ್ಕಾರ 40 ವರ್ಷಗಳಿಗೆಖಾಸಗೀಯವರಿಗೆ ನೀಡುವ ಮೂಲಕ ಕಾರ್ಖಾನೆಯನ್ನು ಖಾಸಗಿ ಹಿಡಿತಕ್ಕೆ ನೀಡಲು ಹೊರಟಿದೆ. ಕೂಡಲೇ ಇದನ್ನು ನಿಲ್ಲಿಸಿ ಒ ಅಂಡ್ ಎಂ ಅಥವಾ ಸರ್ಕಾರಿ ಸ್ವಾಮ್ಯದಲ್ಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಂಸದ ಜಿ.ಮಾದೇಗೌಡ, ಪುಟ್ಟಸ್ವಾಮಿ ಅವರು ಪ್ರತಿಭಟನಾ ರ್ಯಾಲಿಗೆ ಕಾರ್ಖಾನೆಆವರಣದಲ್ಲಿ ಚಾಲನೆ ನೀಡಿದರು. ಮಾಜಿಸಚಿವರಾದ ಎನ್.ಚಲುವರಾಯಸ್ವಾಮಿ,ಪಿ.ಎಂ.ನರೇಂದ್ರಸ್ವಾಮಿ, ಕಾಂಗ್ರೆಸ್ ಜಿಲ್ಲಾ ಘಟಕದಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಘಟಕದಅಧ್ಯಕ್ಷೆ ಅಂಜನಾ ಶ್ರೀಕಾಂತ್, ಯುವ ಘಟಕದ ರಾಜ್ಯಾಧ್ಯಕ್ಷೆ ರಕ್ಷಾ ರಾಮಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್‌ಕುಮಾರ್, ಎಂ.ಎಸ್. ಚಿದಂಬರ್, ಮುಖಂಡರಾದ ರವಿಕುಮಾರ್ ಗಣಿಗ, ಉಮೇಶ್,ಜಯಕುಮಾರ್, ಸಿ.ಎಂ.ದ್ಯಾವಪ್ಪ, ಸುರೇಶ್‌ಕಂಠಿ,ಸುಂಡಹಳ್ಳಿ ಮಂಜುನಾಥ್, ಅಶೋಕ್, ಗುರುಮೂರ್ತಿ, ರುದ್ರಪ್ಪ ಸೇರಿದಂತೆ ಮತ್ತಿತರರಿದ್ದರು.