ಹಾಸನ: ಹಾಲು ಉತ್ಪಾದಕರಿಂದ ಹಾಲು ಖರೀದಿಗೆ ವಾರದಲ್ಲಿ ಮೂರು ದಿನ ರಜೆ ಘೋಷಣೆಯ ಪ್ರಸ್ತಾಪವನ್ನು ಸರ್ಕಾರ ತಿರ ಸ್ಕರಿಸಬೇಕು. ಯಾವುದೇ ಕಾರಣಕ್ಕೂ ರೈತರಿಂದ ಹಾಲು ಶೇಖರಣೆ ಮಾಡುವುದನ್ನು ರಾಜ್ಯದ ಹಾಲು ಒಕ್ಕೂಟಗಳು ನಿಲ್ಲಿಸ ಬಾರದು ಎಂದು ಕರ್ನಾಟಕ ಹಾಲು ಮಹಾ ಮಂಡಳದ ನಿರ್ದೇಶಕರೂ ಆದ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ, ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 19 ಸೋಂಕು ಹರಡುವುದನ್ನು ತಡೆಯುವ ಕ್ರಮವಾಗಿ ಜಾರಿಯಾಗಿರುವ ಲಾಕ್‌ಡೌನ್‌ನಿಂದಾಗಿ ನಿಗಿದಿತ ಪ್ರಮಾಣದಲ್ಲಿ ಹಾಲು ಮಾರಾಟವಾಗುತ್ತಿಲ್ಲ. ಕೆಎಂಎಫ್ ಮಾ.28ರಂದು ನಡೆಸಿದ ಸಭೆಯಲ್ಲಿ ಆಯ್ದ ದಿನಗಳಲ್ಲಿ ವಾರದಲ್ಲಿ ಮೂರು ಸರದಿಯಲ್ಲಿ ರೈತರಿಂದ ಹಾಲು ಖರೀದಿಸುವುದನ್ನು ನಿಲ್ಲಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದು, ಸರ್ಕಾರದ ಅನುಮತಿ ಕೋರಿದೆ. ಆದರೆ ರೈತರಿಂದ ಹಾಲು ಖರೀದಿಗೆ ರಜೆ ಘೋಷಣೆ ಮಾಡುವಂತಹ ತೀರ್ಮಾನಕ್ಕೆ (ಹಾಮುಲ್)ಯಾವುದೇ ಕಾರಣಕ್ಕೂ ಹಾಲು ಖರೀದಿಯ ರಜೆ ಘೋಷಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಿತ್ಯ 69 ಲಕ್ಷ ಲೀ. ಹಾಲು ಶೇಖರಣೆ: ರಾಜ್ಯದ 14 ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಈಗ ಪ್ರತಿದಿನ 69 ಲಕ್ಷ ಲೀ. ಹಾಲು ಶೇಖರಣೆಯಾಗುತ್ತಿದೆ. ಅದರಲ್ಲಿ 50ಲಕ್ಷ ಲೀ. ಮಾರಾಟವಾಗುತ್ತಿದ್ದು, ಈಗ ರಾಜ್ಯದಲ್ಲಿ 12 ಲಕ್ಷ ಲೀ. ಹಾಲನ್ನು ಮಾತ್ರ ಪುಡಿ ಮತ್ತಿತರ ಉತ್ಪನ್ನಗಳಿಗೆ ಪರಿವರ್ತಿಸಲು ಆವಕಾಶ ಹಾಲನ್ನು ಮಾರಾಟ ಮಾಡಲು ಅಥವಾ ಇತರೆ ಉತ್ಪನ್ನಗಳಿಗೆ ಪರಿವರ್ತನೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ವಾರದಲ್ಲಿ ಮೂರು ಸರದಿಯ ರಜೆ ಘೋಷಣೆ ಮಾಡಬೇಕೆಂದು ಕೆಎಂಎಫ್ ಸಭೆ ತೀರ್ಮಾನಿಸಿದೆ. ಇಂತಹ ತೀರ್ಮಾನ ಜಾರಿಯಾದರೆ ಹೈನುಗಾರಿಕೆಯನ್ನೇ ನಂಬಿಕೊಂಡು ಬದುಕುತ್ತಿರುವ ಗ್ರಾಮೀಣ ಪ್ರದೇಶದ ರೈತರಿಗೆ ತೊಂದರೆಯಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ನಂದಿನಿ ಹಾಲಿನ ಬೇಡಿಕೆ ಕುಸಿದಿರುವುದರಿಂದ ಬೇರೆ ಹಾಲು ಒಕ್ಕೂಟಗಳು ಬೆಂಗಳೂರು ಮಹಾನಗರದಲ್ಲಿ ಹಾಲು ಮಾರಾಟಮಾಡಬಾರದು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ರೈತರಿಗೆ ಸಂಕಷ್ಟ: ರಾಜ್ಯದಲ್ಲಿ 13 ಲಕ್ಷ ರೈತ ಕುಟುಂಬಗಳು ಡೇರಿಗೆ ಹಾಲು ಹಾಕಿ ಕೊಂಡು ಜೀವನ ನಡೆಸುತ್ತಿದ್ದು, ಹಾಲು ಖರೀದಿ ರಜೆ ಘೋಷಿಸಿದರೆ ರಾಸುಗಳಿಗೆ ಮೇವು ಪೂರೈಕೆ ಹಾಗೂ ಕುಟುಂಬ ನಿರ್ವ ಹಣೆಗೆ ಏನು ಮಾಡಬೇಕು ಎಂದರು. ಹಾಲು ಒಕ್ಕೂಟಗಳಿಗೆ ಆಗುವ ನಷ್ಟವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು. ಹಾಸನ ಹಾಲು ಒಕ್ಕೂಟದ ವ್ಯವ ಸ್ಥಾಪಕ ನಿರ್ದೇಶಕ ಗೋಪಾಲಯ್ಯ ಅವರೂ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.