Advertisement

ವಕೀಲರ ತಿದ್ದುಪಡಿ ಮಸೂದೆಗೆ ವಿರೋಧ: ಕರಡುಪ್ರತಿಗೆ ಬೆಂಕಿ

02:41 PM Apr 26, 2017 | |

ಕುಂದಾಪುರ: ವಕೀಲರ ವೃತ್ತಿಗೆ ಹಾಗೂ ವಕೀಲರ ಹಕ್ಕುಗಳಿಗೆ ಚ್ಯುತಿ ತರುವಂತಹ ಅಸಾ‌ಂವಿಧಾನಿಕ ಅಂಶಗಳನ್ನು ವಕೀಲರ ಅಧಿನಿಯಮದಡಿ ತಿದ್ದುಪಡಿ ಮಾಡಲು ಕೇಂದ್ರ ಕಾನೂನು ಆಯೋಗ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುವುದನ್ನು ವಿರೋಧಿಸಿ, ಕುಂದಾಪುರ ವಕೀಲರ ಸಂಘದ ಆಶ್ರಯದಲ್ಲಿ ವಕೀಲರು ಪ್ರತಿಭಟನೆ ನಡೆಸಿ ತಿದ್ದುಪಡಿ ಮಸೂದೆಯ ಕರಡುಪ್ರತಿಯನ್ನು ಸುಟ್ಟು ಹಾಕಿದರು.

Advertisement

ಭಾರತೀಯ ವಕೀಲರ ಪರಿಷತ್‌ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಪ್ರತಿಭಟನೆ ನಡೆಸಲು ಕೋರಿಕೊಂಡ ಮೇರೆಗೆ ಕುಂದಾಪುರ ವಕೀಲರ ಸಂಘದ ಸದಸ್ಯರು ವಕೀಲರ ಸಂಘದ ಎದುರುಗಡೆ ಕಾನೂನು ಸೇವಾ ಆಯೋಗದ ಅಧ್ಯಕ್ಷರ ವಿರುದ್ಧ ಘೋಷಣೆಯನ್ನು ಕೂಗಿ ಮಸೂದೆಯನ್ನು ತತ್‌ಕ್ಷಣ ಕೈಬಿಡುವಂತೆ ಆಗ್ರಹಿಸಿದರು.

ಭಾರತೀಯ ವಕೀಲರ ಪರಿಷತ್‌ ಎ. 8ರಂದು ನಡೆಸಿದ ಸಭೆಯಲ್ಲಿ ಕರಡು ಪ್ರತಿಯನ್ನು ಸುಡುವುದರ ಮುಖಾಂತರ ಎಲ್ಲ ವಕೀಲರ ಪರಿಷತ್‌ಗಳಿಗೆ ಮನವಿಯನ್ನು ಮಾಡಿದ್ದು, ಆ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮೇ 1ರೊಳಗೆ ವಕೀಲರ ತಿದ್ದುಪಡಿ ಮಸೂದೆಯನ್ನು ಕೈಬಿಡದಿದ್ದರೆ ದೇಶಾದ್ಯಂತ ಎಲ್ಲ ವಕೀಲರ ಸಂಘಗಳು ತ್ರೀವ ತರಹದ ಹೋರಾಟವನ್ನು ನಡೆಸಲಿವೆ ಎಂದು ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅವರು ತಿಳಿಸಿದರು.

ವಕೀಲರ   ಸಂಘದ   ಜತೆ   ಕಾರ್ಯದರ್ಶಿ ಗುಲಾಬಿ, ಖಜಾಂಚಿ ಸಂತೋಷ್‌ ಆಚಾರ್‌, ವಕೀಲರ ಸಂಘದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next