Advertisement

ಅಕ್ರಮ ಪ್ರಯಾಣಕ್ಕೆ ವಿರೋಧ

05:56 AM May 18, 2020 | Lakshmi GovindaRaj |

ಎಚ್‌.ಡಿ.ಕೋಟೆ: ಗೂಡ್ಸ್‌ ವಾಹನದಲ್ಲಿ ಕೇರಳ ಮೂಲದ 24 ಮಂದಿ ಕೂಲಿ ಕಾರ್ಮಿಕರನ್ನು ರಾಜ್ಯದಿಂದ ಕೇರಳಕ್ಕೆ ತರಕಾರಿ ಸಾಗಣೆ ನೆಪದಲ್ಲಿ ಹೋಗುತ್ತಿದ್ದಾಗ ಗ್ರಾಪಂ ಅಧ್ಯಕ್ಷರ ತಂಡ ವಿರೋಧ ವ್ಯಕ್ತಪಡಿ, ವಾಪಸ್‌ ಕಳಿಸಿದರು.

Advertisement

ತಾಲೂಕಿನ ಗಡಿಭಾಗದ ಡಿ.ಬಿ.ಕುಪ್ಪೆ ಗ್ರಾಪಂ ಅಧ್ಯಕ್ಷ ತಿರುಪತಿ ಮತ್ತು ತಂಡ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಇಲ್ಲ ಅನ್ನುವ ನಾಮಫಲಕವಿದ್ದ ಗೂಡ್ಸ್‌ ವಾಹನದಲ್ಲಿದ್ದ ಕೇರಳದ ಕಾರ್ಮಿಕನ್ನು ಕೆಳಗಿಳಿಸಿ, ಕೆಲವೇ ದೂರ  ಕಾಲುನಡಿಗೆಯಲ್ಲಿ ಬಂದು ಕರ್ನಾಟಕ ರಾಜ್ಯದ ಗಡಿ ದಾಟುತ್ತಿದ್ದಂತೆಯೇ ಕೇರಳ ರಾಜ್ಯದಲ್ಲಿ ಅವರನ್ನು ಅವರ ಸ್ವಗ್ರಾಮಕ್ಕೆ ಕರೆದೊಯ್ಯುವ ಸಮಗ್ರ ಮಾಹಿತಿ ಪಡೆದುಕೊಂಡರು.

ತಾಲೂಕಿನ ಹಂಪಾಪುರದಲ್ಲಿ ಕೆಲಸ ಮಾಡುತ್ತಿದ್ದ ಕೇರಳಿಗರನ್ನು ಸ್ವಗ್ರಾಮಕ್ಕೆ ಹೋಗಲು ಸರ್ಕಾರದ  ಅನುಮತಿ ಪಡೆಯದೇ ಗೂಡ್ಸ್‌ ವಾಹನದಲ್ಲಿ ತರಕಾರಿ ಇದೆ ಎಂದು ಸುಳ್ಳು ನೆಪಹೇಳಿ ಅವರನ್ನು ಕರೆತರುವಾಗ, ಅಂತರಸಂತೆ ಗ್ರಾಮದ ಚೆಕ್‌ಪೋಸ್ಟ್‌ ಮತ್ತು ಉದೂºರು ಗ್ರಾಮದ ಅರಣ್ಯ  ಇಲಾಖೆ ಚೆಕ್‌ಪೋಸ್ಟ್‌ ಕ್ರಮಿಸಿ ಬಂದದ್ದು ಹೇಗೆ ಅನ್ನುವ ಅನುಮಾನ ಕಾಡುತ್ತಿದೆ. ಕೊರೊನಾ ತಡೆಗೆ ಚೆಕ್‌ಪೋಸ್ಟ್‌ಗಳು ತಪಾಸಣೆ ನಡೆಸಬೇಕು ಅನ್ನುವ ಆದೇಶವಿದೆ. ಆದರೂ ತಾಲೂಕಿನ 2 ಚೆಕ್‌ಪೋಸ್ಟ್‌ಗಳು ವಾಹನದ ತಪಾಸಣೆ  ನಡೆಸಿಲ್ಲ.

ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಹೋಗಲು ಸೇವಾಸಿಂಧು ಯೋಜನೆಯಡಿ ಅನುಮತಿ ಪಡೆಯದೇ 24 ಮಂದಿ ಕಾರ್ಮಿಕರು ಗೂಡ್ಸ್‌ ವಾಹನದಲ್ಲಿ ಪ್ರಯಾಣಿಸಿದರೂ ಪೊಲೀಸ್‌, ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ಗಳ  ಅಧಿಕಾರಿಗಳು ತಪಾಸಣೆ ನಡೆಸದೇ ಇರುವುದು ಎಷ್ಟು ಸರಿ ಎಂದು ಗ್ರಾಪಂ ಅಧ್ಯಕ್ಷರೇ ತೀವ್ರ ವಿರೋಧ ವ್ಯಕ್ತಪಡಿಸಿ, ವಾಹನ ಕೇರಳಕ್ಕೆ ಹೋಗಲು ಬಿಡದೆ ಕಾರ್ಮಿಕರನ್ನು  ಹಂಪಾಪುರಕ್ಕೆ ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next