Advertisement
ಲೋಕಾಯುಕ್ತ ಇಲಾಖೆ ಅ ಧಿಕಾರಿಗಳ ಸೂಚನೆ ಮೇರೆಗೆ ನೀರಾವರಿ ಇಲಾಖೆ ಅ ಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಅಕ್ರಮ ನೀರು ಬಳಕೆ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದರು. 55ನೇ ವಿತರಣಾ ಕಾಲುವೆಯ ದುರ್ಗ ಕ್ಯಾಂಪ್ನಿಂದ ತೆರವು ಕಾರ್ಯ ಆರಂಭಿಸಲಾಗಿತ್ತು. ಆದರೆ, ಕಾರ್ಯಾಚರಣೆ ಸ್ಥಳಕ್ಕೆ ದೌಡಾಯಿಸಿದ ನೂರಾರು ರೈತರು ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಕೂಡಲೇ ತೆರವು ಕಾರ್ಯ ನಿಲ್ಲಿಸಬೇಕು ಎಂದು ಪಟ್ಟು ಹಿಡಿದರು. ಹೀಗಾಗಿ ತೆರವು ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಘೇರಾವ್: ಇದಕ್ಕೂ ಮುನ್ನ ಅಕ್ರಮ ನೀರಾವರಿ ವಿರುದ್ಧ ಕಾರ್ಯಾಚರಣೆ ವಿಷಯ ತಿಳಿದು ಮಸ್ಕಿಯ ನೀರಾವರಿ ಕಚೇರಿಗೆ ಆಗಮಿಸಿ ಪ್ರತಿಭಟಿಸಿದರು. ಮೇಲಾºಗದ ಹುಲ್ಲೂರು, ಉದಾºಳ, ಸುಂಕನೂರು, ಕ್ಯಾತ್ನಹಟ್ಟಿ ಸೇರಿ ಹಲವು ಗ್ರಾಮಗಳಿಂದ ಆಗಮಿಸಿದ ರೈತರು ಕಾರ್ಯಾಚರಣೆ ನಡೆಸದಂತೆ ಪಟ್ಟು ಹಿಡಿದು ನೀರಾವರಿ ಇಲಾಖೆ ಅ ಧಿಕಾರಿಗಳಿಗೆ ಘೇರಾವ್ ಹಾಕಿದರು
Advertisement
ಅಕ್ರಮ ನೀರಾವರಿ ತೆರವಿಗೆ ವಿರೋಧ
10:04 PM Jan 11, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.