Advertisement

ವಿದ್ಯುತ್‌ ಕಂಪನಿ ಖಾಸಗೀರಣಕ್ಕೆ ವಿರೋಧ

03:41 PM Oct 06, 2020 | Suhan S |

ಕಲಬುರಗಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ವಿದ್ಯುತ್‌ ವಿತರಣಾ ಕಂಪನಿಗಳ ಖಾಸಗೀಕರಣ ಹಾಗೂ ಉದ್ದೇಶಿತ ವಿದ್ಯುತ್‌ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ವಿದ್ಯುತ್‌ ಪ್ರಸರಣನಿಗಮ ನೌಕರರ ಸಂಘ ಮತ್ತು ಸಂಘ ಸಂಸ್ಥೆಗಳ ಒಕ್ಕೂಟ, ಫೆಡರೇಷನ್‌ ಆಫ್‌ ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್‌ ಯೂನಿಯನ್‌ ಮತ್ತು ಅಸೋಸಿಯೇಷನ್‌ ವತಿಯಿಂದ ಸೋಮವಾರ ನಗರದ ಜೆಸ್ಕಾಂ ಮುಖ್ಯ ಆವರಣದಲ್ಲಿ ನೌಕಕರು ಪ್ರತಿಭಟನೆ ನಡೆಸಿದರು.

Advertisement

ವಿದ್ಯುತ್‌ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಡೆಯಿಂದ ರಾಜ್ಯದ ಇಂಧನ ಇಲಾಖೆಯ ನೌಕರರು ಮತ್ತು ಅಧಿಕಾರಿಗಳ ಒಕ್ಕೂಟವು ದಿಗ್ಪ್ರಮೆಗೊಂಡಿದೆ. ಕರ್ನಾಟಕ ರಾಜ್ಯದ ಜನರ ಹಿತಾಸಕ್ತಿಗೆ ವಿರುದ್ಧವಾಗಿರುವ ಮತ್ತು ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಈ ನೀತಿಯನ್ನು ನೌಕರರ ಒಕ್ಕೂಟ ಖಂಡಿಸುತ್ತಿದೆ ಎಂದು ಕೈತೋಳಿಗೆ ಕಪ್ಪುಬಟ್ಟೆ ಧರಿಸಿ ವಿರೋಧ ವ್ಯಕ್ತಪಡಿಸಿದರು.

ಜುಲೈ 3ರಂದು ನಡೆದ ಇಂಧನ ಸಚಿವರ ಸಭೆಯಲ್ಲಿ ವಿದ್ಯುತ್‌ (ತಿದ್ದುಪಡಿ) ಕಾಯ್ದೆಯನ್ನು 11 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ವಿರೋಧಿಸಿವೆ. ಅದಾಗಿಯೂ ಕೇಂದ್ರ ಸರ್ಕಾರ ಕಾಯ್ದೆಯನ್ನು ಹೇರಲು ಮುಂದಾಗಿದೆ. ಸಂವಿಧಾನಾತ್ಮಕವಾಗಿ ವಿದ್ಯುತ್‌ ರಾಜ್ಯಗಳ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಆಡಳಿತ ಮತ್ತು ಕಾರ್ಯತಂತ್ರದಲ್ಲಿ ಆಗಬೇಕಾದ ಉದ್ದೇಶಿತ ಬದಲಾವಣೆಗಳ ಬಗ್ಗೆ ರಾಜ್ಯ ಹಾಗೂ ಕೇಂದ್ರದ ಸಹಬಾಗಿತ್ವದೊಂದಿಗೆ ಸವಿಸ್ತಾರವಾಗಿ ಚರ್ಚಿಸಿ ಒಮ್ಮತದಿಂದ ನಿರ್ಧರಿಸಬೇಕು. ಇಂಧನ ಇಲಾಖೆಯನೌಕರರು ಮತ್ತು ವಿದ್ಯುತ್‌ ವಿತರಣಾ ಕಂಪನಿಗಳು ಸಹ ಸಹಭಾಗಿಗಳಾಗಿರುತ್ತಾರೆ. ಆದರೆ, ಕೇಂದ್ರ ಸರ್ಕಾರ ಏಕಪಕ್ಷಿಯಾಗಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಖಾಸಗೀಕರಣ ಮೂಲಕ ವಿದ್ಯುತ್‌ ಕಂಪನಿಗಳ ಆಸ್ತಿಗಳನ್ನು ಹೆಚ್ಚಿನ ಹರಾಜುದಾರರಿಗೆ ವರ್ಗಾಯಿಸಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಪ್ರಸ್ತಾಪಿಸಿದೆ. ಇಂತಹ ಖಾಸಗೀಕರಣ ನೀತಿಯಿಂದ ರಾಜ್ಯ ಸರ್ಕಾರ ಹಾಗೂ ಜನತೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಕೋವಿಡ್ ಹಾವಳಿಯಿಂದ ನಲಗಿರುವ ರಾಜ್ಯ ಸರ್ಕಾರಿಗಳಿಗೆ  ಬರೆ ಏಳೆದಂತಾಗುತ್ತದೆ. ಒಡಿಶಾ. ನಾಗಪುರ, ಔರಂಗಾಬಾದ್‌, ಜಲಗಾಂವ, ಗಯಾ. ಧಗಲಪುರ, ಆಗ್ರಾ, ಗ್ರೇಟರ್‌ ನೋಯ್ಡಾ, ಉಜ್ಜಯಿನಿ, ಗ್ವಾಲಿಯರ್‌ ನಲ್ಲಿ ಖಾಸಗೀಕರಣ ಮತ್ತು ನಗರ ವಿತರಣಾ ಪ್ರಾಂಚೈಸಿ ಮಾದರಿ ಜಾರಿಯಾಗಿ ಶೋಚನೀಯವಾಗಿ ವಿಫಲವಾಗಿದೆ. ರಾಜ್ಯದ ಹಿತಾಶಕ್ತಿಗೆ ವಿರುದ್ಧವಾದನೀತಿಯಿಂದ ಕೇಂದ್ರ ಸರ್ಕಾರದ ಹಿಂಜರಿಯದಿದ್ದರೆ ಹೋರಾಟ ತೀವ್ರಗೊಳ್ಳುತ್ತದೆ ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.

ಕವಿಪ್ರನಿ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ನೀಲಪ್ಪ ದೋತ್ರೆ, ಇಂಜಿನಿಯರ್‌ ಅಸೋಸಿಯೇಶನ್‌ ಉಪಾಧ್ಯಕ್ಷ ರಾಜೇಶ ಹಿಪ್ಪರಗಿ, ಮನೋಹರ ವಾಗೊ¾àರೆ, ಮುಖ್ಯ ಅಭಿಯಂತರ ಆರ್‌.ಡಿ. ಚಂದ್ರಶೇಖರ, ಶಾಮರಾವ ಇಟಗಿ, ಮಹ್ಮದ ಮಾಜೀದ್‌, ಲಕ್ಷಣ ಚವ್ಹಾಣ, ವಿಶ್ವನಾಥ ರೆಡ್ಡಿ, ಬಾಬು ಕೋರೆ, ಸಿದ್ರಾಮ ಪಾಟೀಲ್‌, ಸಂತೋಷ ವಡ್ಡರ್‌, ಮೀರಾ ಪಟೇಲ್‌ ಮಾಲಿ ಬಿರಾದಾರ, ಮುರುಗೇಶ ಮಠಪತಿ, ಅನಿಲ ಮುಗಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next