Advertisement

ಚನಮ್ನ ವಿವಿ ಸ್ಥಳಾಂತರಕ್ಕೆ ವಿರೋಧ

01:04 PM Oct 20, 2019 | Team Udayavani |

ಬೆಳಗಾವಿ: ಇಲ್ಲಿಯ ಭೂತರಾಮನಟ್ಟಿ ಗ್ರಾಮದಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಳಾಂತರಕ್ಕೆ ವಿರೋಧಿ ಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹೋರಾಟ ಸಮಿತಿ ಸದಸ್ಯರು, ಗ್ರಾಮಸ್ಥರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

Advertisement

ಭೂತ ರಾಮನಟ್ಟಿಯಲ್ಲಿ 1990ರಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭಿಸಲಾಗಿದೆ. ಬಳಿಕ 2011ರಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಇದನ್ನು ವಿಶ್ವವಿದ್ಯಾಲಯದ ಘೋಷಣೆ ಮಾಡಿದ್ದಾರೆ. ಕಳೆದ 10 ವರ್ಷಗಳಿಂದ ಭೂತರಾಮನಹಟ್ಟಿ ಗ್ರಾಮದ 178 ಎಕರೆ ಪ್ರದೇಶದಲ್ಲಿ ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ವಿವಿ ಅಭಿವೃದ್ಧಿಗೆ ಅರಣ್ಯ ಇಲಾಖೆ ಸಹಕಾರ ನೀಡುತ್ತಿಲ್ಲ ಎಂಬ ಕಾರಣಕ್ಕೆ ಸ್ಥಳಾಂತರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಆರೋಪಿಸಿದರು.

ಈಗಿರುವ ಜಾಗದಲ್ಲಿಯೇ ವಿಶ್ವವಿದ್ಯಾಲಯ ಮುಂದುವರೆಸಬೇಕು. ವಿರೋಧದ ಮಧ್ಯೆಯೂ ವಿಶ್ವವಿದ್ಯಾಲಯ ಸ್ಥಳಾಂತರಕ್ಕೆ ಮುಂದಾದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಭೀಮಗೌಡ ಪಾಟೀಲ, ಈರಪ್ಪ ಪಾಟೀಲ, ಯಲ್ಲಪ್ಪಾ ಚೌಗಲಾ, ಪರಸಪ್ಪ ಪಾಟೀಲ, ಮಾರುತಿ ಪಾಟೀಲ, ಅಶೋಕ ಪಾಟೀಲ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next