Advertisement

ಮೀಸಲು ಪ್ರದೇಶದಲ್ಲಿ ಕೋವಿಡ್ ಆಸ್ಪತ್ರೆಗೆ ವಿರೋಧ

04:57 PM Jul 06, 2020 | Suhan S |

ಶಿಗ್ಗಾವಿ: ಕೈಗಾರಿಕೆ ವಸಾಹತು ಮೀಸಲು ಪ್ರದೇಶದಲ್ಲಿ ಕೋವಿಡ್ ಆಸ್ಪತ್ರೆ ತೆರೆಯಲು ಉದ್ದೇಶಿಸಿದ್ದ ಖಾಸಗಿ ಆಸತ್ರೆ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಪಟ್ಟಣದ ಸಾಯಿನಗರದ ಸಾರ್ವಜನಿಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ರವಿವಾರ ನಡೆಯಿತು.

Advertisement

ಪಟ್ಟಣದ ಮೃತ್ಯುಂಜಯ ಖಾಸಗಿ ಆಸತ್ರೆ ಹೊರವಲಯದಲ್ಲಿನ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಮಳಿಗೆಯನ್ನು ಕೋವಿಡ್ ಆಸತ್ರೆಯನ್ನಾಗಿ ಪರಿವರ್ತಿಸಲು ಸಿದ್ಧತೆ ನಡೆಸಿತ್ತು. ಸಾರ್ವಜನಿಕರಿಗೆ ವಿಷಯ ಗೊತ್ತಾಗುತ್ತಿದ್ದಂತೆ ಸಾಯಿ ನಗರದ ನಿವಾಸಿಗಳು ಅಲ್ಲಿ ಸೇರಿ ತಡೆಯುವ ಪ್ರಯತ್ನ ಮಾಡಿದರು. ನಂತರ ತಹಶೀಲ್ದಾರ್‌ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಇಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆ ಆಸ ತ್ರೆ ತೆರೆಯಲು ಪರವಾನಿಗೆ ನೀಡಬಾರದು. ಕೈಗಾರಿಕಾ ವಸಾಹತು ವಲಯ ಕೇವಲ ಉದ್ದೇಶಿತ ಅಭಿವೃದ್ಧಿಗೆ ಮಾತ್ರ ಬಳಕೆಯಾಗಬೇಕು. ಸಂಬಂಧಿತರು ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದರು. ನಂತರ ವಿಷಯ ತಿಳಿದ ತಹಶೀಲ್ದಾರ್‌ ಪ್ರಕಾಶ ಕುದುರಿ ಸ್ಥಳಕ್ಕೆ ಆಗಮಿಸಿ, ಮೂಲಭೂತ ಸೌಕರ್ಯವೇ ಇಲ್ಲದಿರುವ ಇಂತಹ ಜಾಗದಲ್ಲಿ ಆಸ್ಪತ್ರೆ ತೆರೆಯಲು ಪ್ರಾ ಧಿಕಾರ ಅನುಮತಿ ನೀಡುವುದಿಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಎಲ್ಲಡೆ ಲಾಕ್‌ಡೌನ್‌ ಮಾಡಲಾಗಿದೆ. ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಬರಬಾರದು ಎಂದು ಎಲ್ಲರನ್ನು ಸ್ಥಳದಿಂದ ವಾಪಸ್‌ ಕಳುಹಿಸಲಾಯಿತು. ಸಾಯಿನಗರದ ನಿವಾಸಿಗಳಾದ ಬಸವರಾಜ ಚಿಕ್ಕಮಠ. ಸಂಜೀವ ಅಣ್ಣಿಗೇರಿ, ಬಸವರಾಜ ಬಂಡಿವಡ್ಡರ, ನಾಗಯ್ನಾ ಹಿರೇಮಠ, ಶಿವಾನಂದ ಹಾದಿಮನಿ, ಗದಿಗೆಪ್ಪ ಹರವಿ, ಎಸ್‌.ವಿ. ಚಪ್ಪಳಗಾವಿ. ನಿವೃತ್ತ ಕಾರ್ಯದರ್ಶಿ ಇಂದೂರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next