Advertisement

ಕಟ್ಟಡ ನಿರ್ಮಾಣಕ್ಕೆ ವಿರೋಧ

01:32 PM May 01, 2019 | Team Udayavani |

ಅಂಕೋಲಾ: ಅನಾದಿ ಕಾಲದಿಂದ ಶಾಲಾ ವಿದ್ಯಾರ್ಥಿಗಳು, ಊರ ನಾಗರಿಕರು, ಯುವಕ ಸಂಘದವರು ಕ್ರೀಡಾ ಚಟುವಟಿಕೆಗಳಿಗೆ ಬಳಸಿಕೊಂಡು ಬಂದಿರುವ ಕ್ರೀಡಾಂಗಣದಲ್ಲಿ ಯಾವುದೇ ಕಟ್ಟಡ ಕಟ್ಟಬಾರದು ಎಂದು ಗೋಕರ್ಣ ಅರ್ಬನ್‌ ಬ್ಯಾಂಕಿನ ನಿರ್ದೇಶಕ ಮಹೇಶ ನಾಯಕ ಹೇಳಿದರು.

Advertisement

ಅವರು ಪ್ರಭಾರ ಉಪ ತಹಶೀಲ್ದಾರ್‌ ಎಸ್‌.ಟಿ ಹರಿಕಂತ್ರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ ಮಾದನಗೇರಿ ಹಿ.ಪ್ರಾ ಶಾಲೆ ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭವಾದಾಗಿನಿಂದ ಇದೊಂದೇ ಕ್ರೀಡಾಂಗಣವಿದ್ದು ಅಂಕೋಲಾ ಮತ್ತು ಕುಮಟಾ ತಾಲೂಕಿನ ಕ್ರೀಡಾಸಕ್ತರು ಈ ಕ್ರೀಡಾಂಗಣದಲ್ಲಿಯೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಆಕಸ್ಮಿಕವಾಗಿ ಈ ಕ್ರೀಡಾಂಗಣದಲ್ಲಿಯೇ ರೈತಸಂಪರ್ಕ ಕೇಂದ್ರವನ್ನು ನಿರ್ಮಿಸುವ ಕಾರ್ಯಕ್ಕೆ ಕೃಷಿ ಇಲಾಖೆ ಮುಂದಾಗಿದೆ. ಕ್ರೀಡಾಂಗಣದ ಸ್ಥಳ ಬಿಟ್ಟು ಖಾಲಿ ಇರುವ ಸ್ಥಳದಲ್ಲಿ ರೈತ ಸಂಪರ್ಕ ಕೇಂದ್ರ ನಿರ್ಮಿಸಲಿ ಎಂದರು.

ಸಗಡಗೇರಿ ಗ್ರಾಪಂ ಸದಸ್ಯ ಸತೀಶ ಗೌಡ ಮಾತನಾಡಿ ಸಂಬಂದಪಟ್ಟ ಅಕಾರಿಗಳು ಈ ಕುರಿತು ಗಮನಹರಿಸಿ ಕ್ರೀಡಾಂಗಣವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದರು. ಸಗಡಗೇರಿ ಗ್ರಾಪಂ ಮಾಜಿ ಉಪಾದ್ಯಕ್ಷ ನಾಗರಾಜ ನಾಯಕ ಮಾತನಾಡಿ ಬಳಲೆ ಮತ್ತು ಮಾದನಗೇರಿಯ ಈ ಕ್ರೀಡಾಂಗಣ ಬಹಳ ಹಳೆಯ ಕ್ರೀಡಾಂಗಣವಾಗಿದ್ದು ಅಧಿಕಾರಿಗಳು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಮುಂದಾಗಲಿ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ ನಾಯ್ಕ, ಎನ್‌.ಜಿ. ಅಂಬಿಗ, ರಮೇಶ ಲಮಾಣಿ, ಗ್ರಾಮ ಲೆಕ್ಕಾಧಿಕಾರಿ ಸಿ.ಎನ್‌ ಗುನಗಾ, ತೊರ್ಕೆ ಗ್ರಾಪಂ ಸದಸ್ಯ ನಾರಾಯಣ ನಾಯ್ಕ, ಗೋಕರ್ಣ ಅರ್ಬನ್‌ ಬ್ಯಾಂಕ್‌ ನಿರ್ದೇಶಕ ತಿಮ್ಮಣ್ಣ ನಾಯಕ, ಶಾಲಾಭಿವೃದ್ಧಿ ಸಮೀತಿ ಅಧ್ಯಕ್ಷ ರಾಜು ಹರಿಕಂತ್ರ, ಸದಸ್ಯ ಕೇಶವ ಗೌಡ, ಕಿರಣ ಹೊಸಕಟ್ಟಾ, ಗುರು ಗೌಡ, ಸುದಾಕರ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥತರಿದ್ದರು.

ಬಳಲೆ ಗ್ರಾಮದ 240 ಸರ್ವೆ ನಂ ನಲ್ಲಿ ಒಂದು ಎಕರೆ 22 ಗುಂಟೆ ಸ್ಥಳವಿದ್ದು ಇದರಲ್ಲಿ 27 ಗುಂಟೆ ಸರಕಾರ, 16 ಗುಂಟೆ ಕಂದಾಯ ಇಲಾಖೆ 15 ಗುಂಟೆ ಬಿಎಸ್‌ಎನ್‌ಎಲ್ 3 ಗುಂಟೆ 8 ಆಣೆ ರೈತಸಂಪರ್ಕ ಕೇಂದ್ರದ ಹೆಸರಿನಲ್ಲಿದೆ. ಇನ್ನು 239 ಸರ್ವೇ ನಂಬರಿನ ಅದರ ಬದಿಯಲ್ಲಿದ್ದ ಜಮೀನಿನಲ್ಲಿ ಇಂಜನಿಯರ್‌ ಖಾತೆ ಸ್ಟೋರ್‌ ಹೆಸರಿನಲ್ಲಿ ಜಮೀನು ಇದ್ದು ಕ್ರೀಡಾಂಗಣವನ್ನು ಹೊರತುಪಡಿಸಿ ರೈತ ಸಂಪರ್ಕ ಕೇಂದ್ರ ಮತ್ತು ಇತರೆ ಕಟ್ಟಡಗಳನ್ನು ನಿರ್ಮಿಸಲಿ ಎಂದು ಸಾಮಾಜಿಕ ಕಾರ್ಯಕರ್ತ ಸುಭಾಶ ಕಾರೆಬೈಲ್ ಅಧಿಕಾರಿಗಳಿಗೆ ವಿನಂತಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next